Asianet Suvarna News Asianet Suvarna News

ಚೀನಾ ಆರ್ಥಿಕ ಬಿಕ್ಕಟ್ಟು: ಶೇ.93 ಸಂಪತ್ತು ಕಳೆದುಕೊಂಡ ಚೀನಾದ ಶ್ರೀಮಂತ ವ್ಯಕ್ತಿ

ಆರ್ಥಿಕ ಹೊಡೆತ ಈಗ ಚೀನಾದ  ಕೋಟ್ಯಾಧಿಪತಿ, ಶ್ರೀಮಂತ ವ್ಯಕ್ತಿ ಎನಿಸಿರುವ ಉದ್ಯಮಿ  ಹುಯ್ ಕಾ ಯಾನ್‌ಗೂ ತಟ್ಟಿದ್ದು, ಅವರು ತಮ್ಮ ಸಂಪತ್ತಿನ ಶೇ.93 ರಷ್ಟು ಮೊತ್ತವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

China financial crisis, Chinese Billionaire Chairman of China Evergrande Group Hui Ka Yan lost 93% of his wealth akb
Author
First Published Jan 22, 2023, 6:24 PM IST

ಬೀಜಿಂಗ್‌:  ಜಗತ್ತಿಗೆಲ್ಲಾ ಕೋವಿಡ್ ಹಂಚಿದ ಚೀನಾ ಅದರಿಂದ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಿದೆ. ಕೋವಿಡ್ ನಿಯಂತ್ರಿಸಲು ಸತತ ಲಾಕ್‌ಡೌನ್‌ ಹೇರಿದ ಪರಿಣಾಮ ಚೀನಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.  ಇದು ಅಲ್ಲಿನ ಜನ ಸಾಮಾನ್ಯರನ್ನು ಮಾತ್ರವಲ್ಲದೇ ಉದ್ಯಮಿಗಳನ್ನು ಶ್ರೀಮಂತರನ್ನು ಕೂಡ ಬೀದಿಗೆ ಬರುವಂತೆ ಮಾಡಿದೆ. ಈ ಆರ್ಥಿಕ ಹೊಡೆತ ಈಗ ಚೀನಾದ  ಕೋಟ್ಯಾಧಿಪತಿ, ಶ್ರೀಮಂತ ವ್ಯಕ್ತಿ ಎನಿಸಿರುವ ಉದ್ಯಮಿ  ಹುಯ್ ಕಾ ಯಾನ್‌ಗೂ ತಟ್ಟಿದ್ದು, ಅವರು ತಮ್ಮ ಸಂಪತ್ತಿನ ಶೇ.93 ರಷ್ಟು ಮೊತ್ತವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಚೀನಾ ಎವರ್‌ಗ್ರಾಂಡೆ ಗ್ರೂಪ್‌ನ ಅಧ್ಯಕ್ಷರಾಗಿರುವ ಉದ್ಯಮಿ ಹುಯಿ ಕಾ ಯಾನ್ ಒಮ್ಮೆ 42 ಶತಕೋಟಿ ಡಾಲರ್ ಮೊತ್ತದ ಸಂಪತ್ತನ್ನು ಹೊಂದಿದ್ದರು. ಆದರೆ ಈಗ ಅವರ ಸಂಪತ್ತಿನ ಮೌಲ್ಯ 3 ಶತಕೋಟಿ ಡಾಲರ್‌ಗೆ ಕುಸಿದಿದೆ. ಹುಯಿ ಕಾ ಯಾನ್ (Hui Ka Yan), ಚೀನಾದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದು,  ಈ ಹಿಂದೆ ಅವರು 42 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದರಿಂದ ಅವರು ಏಷ್ಯಾದ ಎರಡನೇ ಶ್ರೀಮಂತ ಎನಿಸಿದ್ದರು. ಆದರೆ ಈಗ ಅವರ ಸಂಪತ್ತು  3 ಶತಕೋಟಿ ಡಾಲರ್‌ ಮೊತ್ತಕ್ಕೆ ಕುಸಿದಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತೋರಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. 

ಆರ್ಡಿನರಿಯಿಂದ ವಿಶ್ವದ ಶ್ರೀಮಂತ ವ್ಯಕ್ತಿಯಾಗುವವರೆಗೆ… ಇಲ್ಲಿದೆ ಗೌತಮ್ ಅದಾನಿ ಲೈಫ್ ಸ್ಟೋರಿ

ಹುಯ್ ಕಾ ಯಾನ್ ಮಾಲೀಕತ್ವದ ಎವರ್‌ಗ್ರಾಂಡೆ ಈಗ  300 ಬಿಲಿಯನ್ ಡಾಲರ್ ಮೊತ್ತದ ಲಿಯಾಬಿಲಿಟಿ ಜೊತೆ  ದೇಶದಲ್ಲಿ ಅತ್ಯಂತ ಹೆಚ್ಚು ಸಾಲ ಹೊಂದಿರುವ ಡೆವಲಪರ್ ಸಂಸ್ಥೆಯಾಗಿದೆ.  ಅಲ್ಲದೇ 2021 ರಿಂದಲೂ ಚೀನಾದ ರಿಯಲ್ ಎಸ್ಟೇಟ್ ಸಮಸ್ಯೆಗಳನ್ನು ಹೊಂದಿದೆ.  ಈ ಸಂಸ್ಥೆಯನ್ನು ಕಾಪಾಡುವ ಸಲುವಾಗಿ  ಹುಯಿ ಕಾ ಯಾನ್ ತನ್ನ ಮನೆ, ಖಾಸಗಿ ಆಸ್ತಿ ಹಾಗೂ ಖಾಸಗಿ ಜೆಟ್‌ಗಳನ್ನು ಕೂಡ ಮಾರಾಟ ಮಾಡಿದ್ದಾರೆ. 

ಪ್ರಸ್ತುತ ಎವರ್‌ಗ್ರಾಂಡೆ ಸಂಸ್ಥೆ ಸುಮಾರು 200,000 ಉದ್ಯೋಗಿಗಳನ್ನು ಹೊಂದಿದೆ. 2020ರಲ್ಲಿ ಈ ಸಂಸ್ಥೆಯೂ 110 ಶತಕೋಟಿ ಡಾಲರ್‌ಗಿಂತ ಹೆಚ್ಚು ಮಾರಾಟ ವ್ಯವಹಾರಗಳನ್ನು ನಡೆಸಿದೆ. ಮತ್ತು 280 ಕ್ಕೂ ಹೆಚ್ಚು ನಗರಗಳಲ್ಲಿ 1,300 ಕ್ಕೂ ಹೆಚ್ಚು ಅಭಿವೃದ್ಧಿಗಳನ್ನು ನಡೆಸಿದೆ.  ಸಿಎನ್‌ಎನ್‌ ವರದಿಯ ಪ್ರಕಾರ, ಕಂಪನಿಯೂ ಕಳೆದ ವರ್ಷ ತನ್ನ ಪ್ರಾಥಮಿಕ ಸಾಲದ ಪುನರ್‌ರಚನೆಯನ್ನು ಮಾಡಲು ವಿಫಲವಾಗಿದ್ದು, ಅದರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. 

ಹುಯ್ ಅವರ ಸಂಪತ್ತು ಕ್ಷೀಣಿಸುವುದರ ಜೊತೆಗೆ, ಅವರು ಚೀನೀ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ (CPPCC)ನಿಂದ ರಾಜಕೀಯವಾಗಿ ಹೆಚ್ಚು ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ.  ಚೀನೀ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್  ಸರ್ಕಾರಿ ಅಧಿಕಾರಿಗಳು ಮತ್ತು ವ್ಯವಹಾರ (business) ಕ್ಷೇತ್ರದ ದೊಡ್ಡ ದೊಡ್ಡ ಹೆಸರುಗಳನ್ನು ಒಳಗೊಂಡಿರುವ ಗಣ್ಯ ವ್ಯಕ್ತಿಗಳ  ಗುಂಪಾಗಿದೆ. 

ಮಸ್ಕ್ ಟ್ವಿಟರ್ ಖರೀದಿಸಿದ ನಂತರ ಶೇ.75 ರಷ್ಟು ಉದ್ಯೋಗ ಕಡಿತ, ಸಿಇಒ ಪರಾಗ್ ಅಗರವಾಲ್ ಕೆಲಸಕ್ಕೂ ಕುತ್ತು!

ಉದ್ಯಮಿ ಹುಯ್ ಅವರು 2008 ರಿಂದಲೂ CPPCC ಯ ಭಾಗವಾಗಿದ್ದರು ಹಾಗೂ 2013 ರಿಂದ ಸಿಪಿಪಿಸಿಸಿಯ ಗಣ್ಯ 300 ಸದಸ್ಯರ ಸ್ಥಾಯಿ ಸಮಿತಿಯ ಭಾಗವಾಗಿದ್ದರು.  ಆದರೆ ಅವರ ವ್ಯವಹಾರದ ಸಾಮ್ರಾಜ್ಯವೂ  ರಾಷ್ಟ್ರದ ಸಾಲದ ಬಿಕ್ಕಟ್ಟಿನ ಅತಿ ದೊಡ್ಡ ಆಘಾತವಾಗಿದ್ದರಿಂದ ಕಳೆದ ವರ್ಷ ವಾರ್ಷಿಕ ಸಮಾವೇಶಕ್ಕೆ ಹಾಜರಾಗದಂತೆ ಅವರಿಗೆ ತಿಳಿಸಲಾಯಿತು ಎಂದು ಸಿಡ್ನಿ  ಮಾರ್ನಿಂಗ್ ಹೆರಾಲ್ಡ್ (Sydney Morning Herald) ವರದಿ ಮಾಡಿದೆ.  ಅಷ್ಟೇ ಅಲ್ಲದೇ ಮುಂದಿನ ಐದು ವರ್ಷಗಳ ಕಾಲ CPPCC ಯಲ್ಲಿ ಇರುವ ವ್ಯಕ್ತಿಗಳ ಇತ್ತೀಚಿನ ಪಟ್ಟಿಯಿಂದ ಅವರನ್ನು ಈಗ ಹೊರಗಿಡಲಾಗಿದೆ.

CPPCC ಸದಸ್ಯತ್ವವೂ ದೇಶಕ್ಕೆ ಕೊಡುಗೆಗಳನ್ನು ನೀಡುವ ನಿಷ್ಠಾವಂತ ವ್ಯಾಪಾರಸ್ಥರಿಗೆ ಚೀನಾ ನೀಡುವ ಸಮ್ಮಾನವಾಗಿದೆ. ಹೀಗಾಗಿ ತಮ್ಮ ಮಿತಿಮೀರಿದ ಲಾಭದೊಂದಿಗೆ ರಿಯಲ್ ಎಸ್ಟೇಟ್  ಕ್ಷೇತ್ರದಲ್ಲಿ ತೊಂದರೆಯನ್ನು ಸೃಷ್ಟಿಸಿದ ಹುಯ್ ಅವರಂತಹ ಉದ್ಯಮಿಗಳು ಇದರಿಂದ ಹೊರಬರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಚೀನೀ ರಾಜಕೀಯದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ಹಾಂಗ್ ಕಾಂಗ್‌ನ ಚೀನೀ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಲ್ಲಿ ಲ್ಯಾಮ್, ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ. ಹುಯ್ ಅಷ್ಟೇ ಅಲ್ಲದೇ ಚೀನಾದ ಇನ್ನೂ ಐದು ಶ್ರೀಮಂತ ಆಸ್ತಿ ಉದ್ಯಮಿಗಳು ಕಳೆದ ಎರಡು ವರ್ಷಗಳಲ್ಲಿ ಸುಮಾರು $65 ಶತಕೋಟಿಯನ್ನು ಕಳೆದುಕೊಂಡಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕವು  (Bloomberg Billionaire Index) ತೋರಿಸಿದೆ.

Follow Us:
Download App:
  • android
  • ios