MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Education
  • ಆರ್ಡಿನರಿಯಿಂದ ವಿಶ್ವದ ಶ್ರೀಮಂತ ವ್ಯಕ್ತಿಯಾಗುವವರೆಗೆ… ಇಲ್ಲಿದೆ ಗೌತಮ್ ಅದಾನಿ ಲೈಫ್ ಸ್ಟೋರಿ

ಆರ್ಡಿನರಿಯಿಂದ ವಿಶ್ವದ ಶ್ರೀಮಂತ ವ್ಯಕ್ತಿಯಾಗುವವರೆಗೆ… ಇಲ್ಲಿದೆ ಗೌತಮ್ ಅದಾನಿ ಲೈಫ್ ಸ್ಟೋರಿ

ವಿಶ್ವದ ಟಾಪ್ 10 ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋದು ನಿಮಗೆ ಗೊತ್ತೆ ಇದೆ ಅಲ್ವಾ?. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ (Forbes real time bileniers) ಸೂಚ್ಯಂಕದಲ್ಲಿ ಅದಾನಿ ಅವರ ನೆಟ್ ವರ್ತ್ 131.3 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಭಾರತದಲ್ಲಿ, ಅವರು ಮುಖೇಶ್ ಅಂಬಾನಿಯನ್ನು ಸಹ ಹಿಂದಿಕ್ಕಿದ್ದಾರೆ. ಅದಾನಿ ಅವರ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದಾಗಿ ಇದು ಇವರು ವಿಶ್ವದಲ್ಲೇ ಅಗ್ರಸ್ಥಾನಗಳಲ್ಲಿ ಒಂದರಲ್ಲಿ ಇರಲು ಸಾಧ್ಯವಾಗಿದೆ. ಗೌತಮ್ ಅದಾನಿ ಅವರ ಜೀವನಶೈಲಿ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ನೀವೂ ಸಹ ಒಮ್ಮೆ ಕಣ್ಣಾಡಿಸಿ…. 

2 Min read
Suvarna News
Published : Oct 31 2022, 03:48 PM IST
Share this Photo Gallery
  • FB
  • TW
  • Linkdin
  • Whatsapp
17

ಗೌತಮ್ ಅದಾನಿ ಯಾವುದೇ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರು ತಮ್ಮ ಕಠಿಣ ಪರಿಶ್ರಮದಿಂದಲೇ ಮೇಲೆ ಬಂದು ಅದಾನಿ ಗ್ರೂಪ್ (Adani Group) ಸ್ಥಾಪಿಸಿದರು. ಅಹ್ಮದಾಬಾದಿನ ಮಧ್ಯಮ ಕುಟುಂಬಕ್ಕೆ ಸೇರಿದ ಗೌತಮ್, ಶಾಲೆಯಲ್ ಬಳಿಕ, ಕಾಮರ್ಸ್ ಪದವಿಗೆ ಸೇರಿದ್ದರು, ಆದರೆ ಯಾವುದೋ ಕಾರಣದಿಂದಾಗಿ ಪದವಿಯನ್ನು ಪೂರ್ತಿಗೊಳಿಸಲಾಗಿರಲಿಲ್ಲ. ಅವರು ಹೆಚ್ಚು ವಿದ್ಯಾವಂತರಲ್ಲ. ಇದರ ಹೊರತಾಗಿಯೂ, ಅವರು ತಮ್ಮ ಕೋಟಿ ಕೋಟಿ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

27

ಗೌತಮ್ ಅದಾನಿ (Gautam Adani) ಕಡಿಮೆ ವಿದ್ಯಾವಂತರಾಗಿರಬಹುದು, ಆದರೆ ಅವರು ಮದುವೆಯಾಗಿದ್ದು ಮಾತ್ರ ವೈದ್ಯೆಯನ್ನು. ಅವರ ಪತ್ನಿ ಹೆಸರು ಪ್ರೀತಿ ಅದಾನಿ. ಪ್ರೀತಿ ಅದಾನಿ ವೃತ್ತಿಪರ ದಂತವೈದ್ಯೆ. ಅವರು ಪ್ರತಿ ಹೆಜ್ಜೆಯಲ್ಲೂ ತನ್ನ ಗಂಡನೊಂದಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ತಮ್ಮ ವೈದ್ಯಕೀಯ ಬದ್ಧತೆಯ ಜೊತೆಗೆ 'ಅದಾನಿ ಫೌಂಡೇಶನ್' ನ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳ ಶಿಕ್ಷಣಕ್ಕಾಗಿ ಸಹ ಕೆಲಸ ಮಾಡುತ್ತದೆ. 

37

ಗೌತಮ್ ಅದಾನಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಹೆಸರು ಕರಣ್ ಮತ್ತು ಜೀತ್. ಕರಣ್ ತನ್ನ ತಂದೆಯ ವ್ಯವಹಾರದಲ್ಲಿ ಸಹಾಯ ಮಾಡುತ್ತಾನೆ. ಪರ್ಡ್ಯೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ ಕರಣ್ ಅದಾನಿ ಪೋರ್ಟ್ಸ್ ಮತ್ತು ಎಸ್ಇಝೆಡ್ ಲಿಮಿಟೆಡ್ (Adani ports and MSEZ) ನ ಸಿಇಒ ಆಗಿದ್ದಾರೆ. ಅವರಿಗೂ ಮದುವೆಯಾಗಿದೆ. ಕರಣ್ 2013 ರಲ್ಲಿ ಕಾರ್ಪೊರೇಟ್ ವಕೀಲ ಸಿರಿಲ್ ಶ್ರಾಫ್ ಅವರ ಮಗಳು ಪರಿಧಿ ಶ್ರಾಫ್ ಅವರನ್ನು ವಿವಾಹವಾದರು.

47

ಇನ್ನು ಗೌತಮ್ ಅದಾನಿ ಅವರ ಕಿರಿಯ ಮಗ ಜೀತ್ ಅದಾನಿ ಬಗ್ಗೆ ಹೇಳೋದಾದರೆ ಇವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಅವರು ಕೂಡ ತನ್ನ ತಂದೆಯ ವ್ಯವಹಾರಕ್ಕೆ (business) ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

57

ಮಾಧ್ಯಮ ವರದಿಗಳ ಪ್ರಕಾರ, ಗೌತಮ್ ಅದಾನಿ ಅವರ ಮನೆಯನ್ನು ಸುಮಾರು 3.4 ಎಕರೆಯಲ್ಲಿ ನಿರ್ಮಿಸಲಾಗಿದೆ. ಇದರ ಮೌಲ್ಯ (networth) 400 ಕೋಟಿ ರೂ. ಇದ್ದು, ಈ ಭವ್ಯವಾದ ಮನೆಯ ಒಳಗೆ ಮಹಾರಾಜರಂತಹ ಸೌಲಭ್ಯಗಳಿವೆ. ಸೆಪ್ಟೆಂಬರ್ 2022 ರ ಹೊತ್ತಿಗೆ, ಗೌತಮ್ ಅದಾನಿ ಅವರ ಆಸ್ತಿ 152.10 ಮಿಲಿಯನ್ ಡಾಲರ್ ಆಗಿತ್ತು. ಈ ಆಧಾರದ ಮೇಲೆ, ಅವರು ಇಡೀ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ| 
 

67

ಒಂದು ಕಾಲದಲ್ಲಿ ಚಾಲ್ ನಲ್ಲಿ ವಾಸಿಸುತ್ತಿದ್ದ ಅದಾನಿ ಇಂದು ಐಷಾರಾಮಿ ಜೀವನಶೈಲಿ (luxury lifestyle) ನಡೆಸುತ್ತಿದ್ದಾರೆ. ಅವರ ಬಳಿ 3 ಹೆಲಿಕಾಪ್ಟರ್ ಗಳಿವೆ. 3 ಬೊಂಬಾರ್ಡಿಯರ್ ಮತ್ತು ಬೀಚ್ ಕ್ರಾಫ್ಟ್ ವಿಮಾನಗಳಿವೆ. ಅವರು ತಮ್ಮ ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಹೆಲಿಕಾಪ್ಟರ್ ಬಳಸುತ್ತಾರೆ ಎನ್ನಲಾಗಿದೆ.

77

ದೇಶ ಮತ್ತು ವಿದೇಶಗಳಲ್ಲಿ ಅನೇಕ ರೀತಿಯ ವ್ಯವಹಾರವನ್ನು ಹರಡುತ್ತಿರುವ ಗೌತಮ್ ಅದಾನಿ, ಫೆರಾರಿ ಸೇರಿದಂತೆ ಬಿಎಂಡಬ್ಲ್ಯೂ ಸರಣಿಯ ಅನೇಕ ಕಾರುಗಳನ್ನು ಸಹ ಹೊಂದಿದ್ದಾರೆ. ಅಲ್ಲದೇ ಇವರು ತಮ್ಮ ಫೌಂಡೇಶನ್ ಮೂಲಕ ಹಲವು ಸೇವಾಕಾರ್ಯಗಳನ್ನು ಸಹ ಇಲ್ಲಿವರೆಗೆ ಮಾಡುತ್ತಾ ಬಂದಿದ್ದಾರೆ.

About the Author

SN
Suvarna News
ಗೌತಮ್ ಅದಾನಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved