Asianet Suvarna News Asianet Suvarna News

India-China Border: ಪೂರ್ವ ಲಡಾಖಲ್ಲಿ ಕ್ಷಿಪಣಿ, ರಾಕೆಟ್‌ ರೆಜಿಮೆಂಟ್‌ ನಿಯೋಜಿಸಿದ ಚೀನಾ!

*ಗಡಿಗಳಲ್ಲಿ ಹೆದ್ದಾರಿ, ರಸ್ತೆ ಅಗಲೀಕರಣ, ರನ್‌ವೇ ನಿರ್ಮಾಣ
*ಟಿಬೆಟ್‌ ಯುವಕರ ನೇಮಕಕ್ಕೆ ಚುರುಕು ನೀಡಿರುವ ಚೀನಾ
*ಗಡಿಯಲ್ಲಿ ಕಣ್ಗಾವಲು ವಹಿಸಲು ಡ್ರೋನ್‌ಗಳ ನಿಯೋಜನೆ

China deploying missile regiments and building new highways near Eastern Ladakh Sources mnj
Author
Bengaluru, First Published Nov 29, 2021, 9:14 AM IST
  • Facebook
  • Twitter
  • Whatsapp

ಲೇಹ್‌(ನ.29): ಗಡಿ ವಿಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಚೀನಾ ಮಧ್ಯೆ  ಸೇನಾ ಬಿಕ್ಕಟ್ಟು (India China Border Crisis) ಮುಂದುವರೆದಿರುವ ನಡುವೆಯೇ, ಪೂರ್ವ ಲಡಾಖ್‌ (Eastern Ladakh) ಸಮೀಪದಲ್ಲೇ ಚೀನಾ ಹೊಸ ಹೆದ್ದಾರಿಗಳು, ರಸ್ತೆ ನಿರ್ಮಿಸುತ್ತಿದೆ. ಜೊತೆಗೆ ಕ್ಷಿಪಣಿ ಮತ್ತು ರಾಕೆಟ್‌ ರೆಜಿಮೆಂಟ್‌ಗಳನ್ನು ನಿಯೋಜನೆ ಮಾಡುತ್ತಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಪೂರ್ವ ಲಡಾಕ್‌ ಸೆಕ್ಟರ್‌ಗೆ ವಿರುದ್ಧವಾಗಿ ಅಕ್ಸಾಯ್‌ಚಿನ್‌ (Aksai Chin) ಪ್ರದೇಶದಲ್ಲಿ ಚೀನಾ ಸೇನೆ ಹೊಸ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಈ ಕ್ರಮದಿಂದ ಚೀನಾ ಸೇನೆಯ ಈ ಮೊದಲಿಗಿಂತಲೂ ವಾಸ್ತವ ಗಡಿ ನಿಯಂತ್ರಣ (Line of Actual control) ರೇಖೆಯ ಬಳಿಗೆ ಬಹುಬೇಗ ಬರಲು ಸಹಕಾರಿಯಾಗಲಿದೆ. ಅಲ್ಲದೆ ಕಾಶ್ಗರ್‌, ಗರ್‌ ಗುನ್ಸಾ ಮತ್ತು ಹೋಟನ್‌ ಅಷ್ಟೇ ಅಲ್ಲದೆ ಇತರೆ ಭಾಗಗಳಲ್ಲೂ ಹೆದ್ದಾರಿಗಳ ಅಗಲೀಕರಣ ಮತ್ತು ವಿಮಾನ ಇಳಿಯಲು ಅನುಕೂಲವಾಗುವ ರೀತಿಯ ರನ್‌ವೇಗಳನ್ನು ನಿರ್ಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕ್ಷಿಪಣಿ, ರಾಕೆಟ್‌ಗಳ ರೆಜಿಮೆಂಟ್‌ ಸ್ಥಾಪನೆ:

ಗಡಿ ಭದ್ರತೆಗಾಗಿ ನಿಯೋಜಿಸುವ ನಿಟ್ಟಿನಲ್ಲಿ ಟಿಬೆಟ್‌ ಯುವಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚುರುಕು ನೀಡಿರುವ ಚೀನಾ ಸೇನೆ, ಟಿಬೆಟ್‌ ಸ್ವಾಯತ್ತ ಪ್ರಾಂತ್ಯದ ಹಲವೆಡೆ ಕ್ಷಿಪಣಿ ಮತ್ತು ರಾಕೆಟ್‌ಗಳ ರೆಜಿಮೆಂಟ್‌ ನಿಯೋಜಿಸುತ್ತಿದೆ. ಅಲ್ಲದೆ ಯಾರ ಕಣ್ಣಿಗೂ ಬೀಳದ ಅಡಗುತಾಣಗಳನ್ನು ನಿರ್ಮಿಸಿಕೊಂಡಿದೆ. ಅಲ್ಲದೆ ಗಡಿಯಲ್ಲಿ ಕಣ್ಗಾವಲು ವಹಿಸಲು ಡ್ರೋನ್‌ಗಳ ನಿಯೋಜನೆಯನ್ನೂ ಹೆಚ್ಚಿಸಲಾಗಿದೆ. ಒಟ್ಟಾರೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ಮೂಲಭೂತ ಸೌಕರ್ಯಗಳನ್ನು ಹಿಗ್ಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದಿಂದ ಭಾರತದ ಗಡಿಯೊಳಗೆ ಮತ್ತೊಂದು ಹಳ್ಳಿ ನಿರ್ಮಾಣ!

ಅರುಣಾಚಲ ಪ್ರದೇಶದೊಳಗೆ (Arunachal pradesh) ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಂಡು ಅಕ್ರಮವಾಗಿ 100 ಮನೆಗಳ ಹಳ್ಳಿಯೊಂದನ್ನು (Village) ಚೀನಾ (China) ನಿರ್ಮಾಣ ಮಾಡಿದೆ ಎಂಬ ವರದಿಗಳ ಬೆನ್ನಲ್ಲೇ ಇದೀಗ 60 ಮನೆಗಳ ಇನ್ನೊಂದು ಹಳ್ಳಿಯನ್ನು ಕೂಡ ಚೀನಾ ನಿರ್ಮಾಣ ಮಾಡಿದೆ ಎಂದು ಹೇಳಲಾಗಿದೆ. ಉಪಗ್ರಹ ಚಿತ್ರಗಳನ್ನಾಧರಿಸಿ, ತಜ್ಞರಿಂದ ನಕ್ಷೆಗಳ ವಿಶ್ಲೇಷಣೆ ನಡೆಸಿ ಎನ್‌ಡಿಟೀವಿ (NDTV) ಈ ಕುರಿತು ವರದಿ ಮಾಡಿದೆ.

Global investment: ಮತ್ತೆ ಹೂಡಿಕೆದಾರರ ಒಲವು ಗಳಿಸಿದ ಚೀನಾ

ಅರುಣಾಚಲ ಪ್ರದೇಶದ (Arunachal pradesh) ಶಿಯೋಮಿ ಜಿಲ್ಲೆಯಲ್ಲಿ ಭಾರತ (India) ಮತ್ತು ಚೀನಾ (China) ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಮತ್ತು ಅಂತಾರಾಷ್ಟ್ರೀಯ ಗಡಿಯ (border) ನಡುವೆ 60 ಮನೆಗಳ ಹಳ್ಳಿ ನಿರ್ಮಾಣವಾಗಿದ್ದು, ಅಲ್ಲಿನ ಕಟ್ಟಡಗಳ ಮೇಲೆ ಚೀನಾದ ಧ್ವಜ (China flag) ಹಾರಿಸಲಾಗಿದೆ. ಈ ಹಳ್ಳಿಯು ಹಿಂದೆ ಅರುಣಾಚಲದಲ್ಲಿ ಚೀನಾ ನಿರ್ಮಾಣ ಮಾಡಿದೆ ಎನ್ನಲಾಗಿದ್ದ 100 ಮನೆಗಳ ಹಳ್ಳಿಯಿಂದ ಪೂರ್ವಕ್ಕೆ 93 ಕಿ.ಮೀ. ದೂರದಲ್ಲಿದೆ. ಅಲ್ಲದೆ, ಇದು ಅಂತಾರಾಷ್ಟ್ರೀಯ ಗಡಿಯಿಂದ ಭಾರತದ ಒಳಗೆ 6 ಕಿ.ಮೀ. ದೂರದಲ್ಲಿದೆ ಎನ್ನಲಾಗಿದೆ.

Loan App: ಮತ್ತೆ ಬೆಂಗ್ಳೂರಲ್ಲಿ ‘ಚೀನಾ ಸಾಲ’ ಹಾವಳಿ ಆರಂಭ..!

2019ರಲ್ಲಿ ಇರಲಿಲ್ಲ, ಈಗ ಇದೆ:  ಉಪಗ್ರಹ (Satellite) ಚಿತ್ರಗಳನ್ನು ಒದಗಿಸುವ ಜಗತ್ತಿನ ಎರಡು ಪ್ರತಿಷ್ಠಿತ ಕಂಪನಿಗಳಾದ ಮ್ಯಾಕ್ಸರ್‌ ಟೆಕ್ನಾಲಜೀಸ್‌ ಹಾಗೂ ಪ್ಲಾನೆಟ್‌ ಲ್ಯಾಬ್ಸ್‌ಗಳು (planet labs) ನೀಡಿದ ಚಿತ್ರದಲ್ಲಿ ಈ ಹೊಸ ಹಳ್ಳಿ ಕಾಣಿಸಿಕೊಂಡಿದೆ. 2019ರ ಚಿತ್ರಗಳಲ್ಲಿ ಈ ಹಳ್ಳಿ ಇರಲಿಲ್ಲ. ಈಗ ಪಡೆದ ಚಿತ್ರದಲ್ಲಿ ಹಳ್ಳಿ ಪ್ರತ್ಯಕ್ಷವಾಗಿದೆ. ಆದರೆ, ಇಲ್ಲಿ ಜನರು ವಾಸಿಸುತ್ತಿದ್ದಾರೆಯೇ ಇಲ್ಲವೇ ಎಂಬುದು ಕಾಣಿಸುತ್ತಿಲ್ಲ. ಮನೆಗಳ ಟೆರೇಸ್‌ ಮೇಲೆ ಚೀನಾದ ಬೃಹತ್‌ ಧ್ವಜ ಹಾರಿಸಲಾಗಿದೆ. ಇದು ತನ್ನ ಪ್ರದೇಶ ಎಂದು ಚೀನಾ ಪ್ರತಿಪಾದಿಸುವುದರ ದ್ಯೋತಕ ಇದಾಗಿದೆ.

Follow Us:
Download App:
  • android
  • ios