Asianet Suvarna News Asianet Suvarna News

Global investment: ಮತ್ತೆ ಹೂಡಿಕೆದಾರರ ಒಲವು ಗಳಿಸಿದ ಚೀನಾ

ಕೋವಿಡ್‌ ಸೋಂಕನ್ನು ಇಡೀ ವಿಶ್ವಕ್ಕೆ ಹಂಚಿ ತನಗೇನೂ ತಿಳಿಯದಂತೆ ನೆಮ್ಮದಿಯಾಗಿ ಕುಳಿತಿದ್ದ ಚೀನಾ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಕಳೆದುಕೊಂಡಿತ್ತು. ಕೋವಿಡ್‌ ಸೋಂಕು ಹಾಗೂ ಸೋಂಕನ್ನು ಹಬ್ಬಿಸಿದ ಕಳಂಕದಿಂದಾಗಿ ವಿಶ್ವದ ಬಂಡವಾಳ ಹೂಡಿಕೆದಾರರು ಚೀನಾದಲ್ಲಿ ಬಂಡವಾಳ ಹೂಡುವ ಯೋಜನೆಯನ್ನು ಹಿಂಪಡೆದಿದ್ದರು. ಆದರೆ ಈಗ ಮತ್ತೆ ಚೀನಾದತ್ತ ಹೂಡಿಕೆದಾರರು ಮುಖ ಮಾಡಿದ್ದಾರಂತೆ...

China regains favorite with investors who think India overvalued akb
Author
New Delhi, First Published Nov 28, 2021, 6:38 PM IST

ನವದೆಹಲಿ:  ಭಾರತ ಹಾಗೂ ಚೀನಾ ಜಾಗತಿಕ ಮಟ್ಟದಲ್ಲಿ ಬಂಡವಾಳವನ್ನು ಸೆಳೆಯುವ ಎರಡು ಪ್ರಮುಖ ಮಾರುಕಟ್ಟೆಗಳು. ಆದರೆ ಚೀನಾಗೆ ಹೋಲಿಸಿದರೆ ಭಾರತ ತುಂಬಾ ದುಬಾರಿ ಎಂದು ಭಾವಿಸುವ ಕೆಲ ಜಾಗತಿಕ ಹೂಡಿಕೆದಾರರು ಈಗ ಭಾರತದ ಬದಲಾಗಿ ಮತ್ತೆ ಚೀನಾದತ್ತ ಮುಖ ಮಾಡುತ್ತಿವೆ ಎಂದು ತಿಳಿದು ಬಂದಿದೆ. ಈ ಹಿಂದೆ  'ಚೀನಾ ವರ್ಸಸ್‌ ಇಂಡಿಯಾ'  ಎಂಬ ಟ್ರೆಂಡ್‌  ಹೂಡಿಕೆದಾರರನ್ನು ಭಾರತದತ್ತ ಸೆಳೆದಿತ್ತು. ಆದರೆ ಈಗ ಅಮೆರಿಕಾ ಮೂಲದ ಬಹುರಾಷ್ಟ್ರೀಯ ಹೂಡಿಕೆ ನಿರ್ವಹಣಾ ಸಂಸ್ಥೆಯಾಗಿರುವ ಬ್ಲಾಕ್ ರಾಕ್‌ ಐಎನ್‌ಸಿ(BlackRock Inc) ಚೀನಾದ ಷೇರುಗಳನ್ನು ನೀತಿ ಅಡೆತಡೆಗಳಿಂದ ಮುಕ್ತಗೊಳಿಸುವ ಸಲುವಾಗಿ ಉನ್ನತೀಕರಿಸಿದೆ.  

ಭಾರತದಲ್ಲಿ ತನ್ನ ಷೇರುಗಳನ್ನು ಕಡಿತಗೊಳಿಸಿರುವ ಅದು, ಚೀನಾದಲ್ಲಿ ಸ್ಥಾನ ಪಡೆಯುವ ಸಮಯ ಈಗ ಬಂದಿದೆ ಎಂದು ಹೇಳಿಕೊಂಡಿದೆ. ಗೋಲ್ಡ್‌ಮನ್ ಸ್ಯಾಕ್ಸ್ ಗ್ರೂಪ್ ಐಎನ್‌ಸಿ (Goldman Sachs Group Inc) ಹಾಗೂ ನೋಮುರಾ ಹೋಲ್ಡಿಂಗ್ಸ್ ಐಎನ್‌ಸಿ(Nomura Holdings Inc) ಈ ಎರಡು ಸಂಸ್ಥೆಗಳು ಇತ್ತೀಚೆಗಷ್ಟೇ  ಭಾರತದಲ್ಲಿನ ಷೇರುಗಳನ್ನು ಕೆಳದರ್ಜೆಗಿಳಿಸಿದ್ದವು. ಕೆಲ ಮೌಲ್ಯಮಾಪನಗಳು, ತರ್ಕಬದ್ಧತೆ, ಬೀಜಿಂಗ್‌ನ ದೊಡ್ಡಮಟ್ಟದ ನಿಯಂತ್ರಕ ಕ್ರಮಗಳು  ಚೀನಾ ಷೇರುಗಳನ್ನು ಮತ್ತಷ್ಟು ಅಗ್ಗವಾಗಿಸಿದ್ದು, ಈ ಮಧ್ಯೆ ವರ್ಲ್ಡ್‌ ಬೀಟಿಂಗ್‌ ರಾಲಿ(world-beating rally) ಬಳಿಕ ದಕ್ಷಿಣ ಏಷ್ಯಾ ದೇಶವೂ ತುಂಬಾ ದುಬಾರಿಯಾಗಿ ಕಾಣಿಸಿತು.

Loan App: ಮತ್ತೆ ಬೆಂಗ್ಳೂರಲ್ಲಿ ‘ಚೀನಾ ಸಾಲ’ ಹಾವಳಿ ಆರಂಭ..!

ಎಂಎಸ್‌ಸಿಐ ಚೀನಾ ಸೂಚ್ಯಂಕವೂ  ಅದರ ಒಂದು ವರ್ಷದ ಮುಂಗಡ ಗಳಿಕೆಯ ಅಂದಾಜಿನ 13 ಬಾರಿಯಷ್ಟು ಕಡಿಮೆ ಗಳಿಕೆಯೊಂದಿಗೆ ವ್ಯಾಪಾರ ಮಾಡುತ್ತಿದೆ.  ಆದರೆ ಭಾರತದಲ್ಲಿ ಅದರ ಡಬ್ಬಲ್‌  ಗಳಿಕೆಯ ಸೂಚ್ಯಂಕದಲ್ಲಿ ವ್ಯಾಪಾರ ನಡೆಸುತ್ತಿದೆ. ಕಳೆದೊಂದು ದಶಕದಿಂದ ಇದು ಎರಡು  ಸ್ಟ್ಯಾಂಡರ್ಡ್‌ ವಿಷಯಾಂತರ(standard deviations)ಗಳ ಮಧ್ಯೆ ಬಿರುಕು ಮೂಡಿಸಿದೆ.  ಚೈನೀಸ್‌ ಗೇಜ್‌ ಆರು ನೇರ ತ್ರೈಮಾಸಿಕಗಳ ಕಳಪೆ ಪ್ರದರ್ಶನದ ಬಳಿಕ ಸೆಪ್ಟೆಂಬರ್ ಅಂತ್ಯದಿಂದ ಮತ್ತೆ ಚಿಗುರಿದೆ. ಎರಡು ದೇಶಗಳ ನಡುವಿನ ಕಾರ್ಯಕ್ಷಮತೆಯ ಅಸಮಾನತೆ ಚೀನಾಗೆ ಮತ್ತಷ್ಟು ಅವಕಾಶಗಳನ್ನು ತಂದು ಕೊಟ್ಟಿದೆ ಎಂದು ನ್ಯೂಯಾರ್ಕ್‌ ಮೂಲದ  ಪೋರ್ಟ್‌ಪೋಲಿಯೋ ಮ್ಯಾನೇಜರ್‌  ಟೋಮ್‌ ಮಸಿ ತಿಳಿಸಿದ್ದಾರೆ. ಇವರು ಇತ್ತಿಚೆಗಷ್ಟೇ ಭಾರತದಲ್ಲಿದ್ದ ಅವರ ಹುದ್ದೆಯಿಂದ ಹೊರ ನಡೆದಿದ್ದರು. 

Peng Shuai Missing ಕಮ್ಯುನಿಷ್ಟ್ ನಾಯಕನ ಮೇಲೆ ಆರೋಪ ಮಾಡಿದ ಚೀನಾ ಟೆನಿಸ್ ಆಟಗಾರ್ತಿ ನಾಪತ್ತೆ..!

ಒಟ್ಟಿನಲ್ಲಿ ಸದಾ ಕುತಂತ್ರದಿಂದಲೇ ಎಲ್ಲೆಡೆ ಗೆಲುವು ಸಾಧಿಸುವ ಚೀನಾ ಕೋರೋನಾ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಅವಗಣನೆಗೆ ಕಾರಣವಾಗಿತ್ತು. ಹೂಡಿಕೆದಾರರು ಚೀನಾ ಬದಲಾಗಿ ಭಾರತದತ್ತ ಮುಖ ಮಾಡಿದ್ದರು. ಆ ಸಂದರ್ಭದಲ್ಲಿ ಭಾರತಕ್ಕೆ ಜಾಗತಿಕ ಬಂಡವಾಳ ಉತ್ತಮವಾಗಿ ಹರಿದು ಬಂದಿತ್ತು. 

Follow Us:
Download App:
  • android
  • ios