ಕೊರೋನಾ ವಿರುದ್ಧ ಚೀನಾ ಲಸಿಕೆ ಪಡೆದವರಿಗೆ ಆರೋಗ್ಯ ಸಮಸ್ಯೆ ಲ್ಯುಕೆಮಿಯಾ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಜನ ಅಧ್ಯಯನ ವರದಿಯಲ್ಲಿ ಬಹಿರಂಗವಾಯ್ತು ಚೀನಾ ಲಸಿಕೆ ಅಸಲಿಯತ್ತು
ನವದೆಹಲಿ(ಮಾ.08): ಕೊರೋನಾ ವೈರಸ್ ವಿರುದ್ಧ ಹಲವು ದೇಶಗಳು ಲಸಿಕೆ ತಯಾರಿಸಿದೆ. ಚೀನಾ ವೈರಸ್, ಚೀನಾ ಸೃಷ್ಟಿ ಸೇರಿದಂತೆ ಹಲವು ಆರೋಪಗಳನ್ನು ಎದುರಿಸಿದ ಚೀನಾ ಇದೀಗ ಲಸಿಕೆಯಿಂದಲೂ ಹಿನ್ನಡೆ ಅನುಭವಿಸಿದೆ.ಚೀನಾ ಲಸಿಕೆ ಮತ್ತೊಂದು ಗಂಭೀರ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಚೀನಾ ಲಸಿಕೆ ಪಡೆದ ಬಹುತೇಕರಲ್ಲಿ ಲ್ಯುಕಮಿಯಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಚೀನಾ ಅಧ್ಯಯನ ಸಂಸ್ಥೆ ಬಹಿರಂಗ ಪಡಿಸಿದೆ.
ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ(NHC) ಸಂಶೋಧನಾ ವರದಿ ಚೀನಾದಲ್ಲಿ ಭಾರಿ ಆತಂಕದ ಅಲೆ ಸೃಷ್ಟಿಸಿದೆ. ಚೀನಾ ಲಸಿಕೆ ಪಡೆದವ ಬಹುತೇಕರಲ್ಲಿ ಚರ್ಮ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಂಡಿದೆ. ಇದರಲ್ಲಿ ಅತೀ ಗಂಭೀರ ಸಮಸ್ಯೆಯಾಗಿರುವ ಲ್ಯುಕೆಮಿಯಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದು ಚೀನಾ ನಿದ್ದಿಗೆಡಿಸಿದೆ.
Covid Vaccine: ರಾಜ್ಯದಲ್ಲಿ 10 ಕೋಟಿ ಡೋಸ್ ಲಸಿಕೆ ಮೈಲಿಗಲ್ಲು!
ಲಸಿಕೆ ಪಡೆದವರಲ್ಲಿ ಲ್ಯುಕೆಮಿಯಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಸರ್ಕಾರಕ್ಕೆ ಸೂಚನೆ ನೀಡಿದೆ. ತಕ್ಷಣವೇ ಈ ಕುರಿತು ಗಮನ ಹರಿಸಬೇಕಾಗಿ ಸೂಚಿಸಿದೆ. ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಎಚ್ಚರಿಕೆ ಪ್ರಕಟಣೆಯನ್ನು ಸಿಚುವಾನ್, ಶಾಂಕ್ಸಿ, ಲಿಯಾನಿಂಗ್, ಹೆಬಿ ಸೇರಿದಂತೆ ಹಲವು ಪ್ರಾಂತ್ಯಗಳಿಗೆ ನೀಡಿದೆ. ಈ ಭಾಗದ ಲಸಿಕೆ ಪಡೆದ ಜನರಲ್ಲಿ ಲ್ಯುಕೆಮಿಯಾ ಚರ್ಮ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಕೆಲವರಲ್ಲಿ ರಕ್ತ ಕ್ಯಾನ್ಸರ್‌ಗೂ ಲಸಿಕೆ ಕಾಣವಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಚೀನಾದಲ್ಲಿ ಸಿನೋವ್ಯಾಕ್ ಬಯೋಟೆಕ್ ಲಸಿಕೆಯನ್ನು ಅತೀ ಹೆಚ್ಚು ಮಂದಿ ಪಡೆದಿದ್ದಾರೆ. ಈ ಲಸಿಕೆ ಮೊದಲಿನಿಂದಲೂ ಹಲವು ಸಮಸ್ಯೆಗೆ ಕಾರಣವಾಗಿದೆ. ಲಸಿಕೆ ಪಡೆದ ಹಲವರು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲಿದ ಘಟನೆಗಳು ನಡೆದಿದೆ. ಇಷ್ಟೇ ಅಲ್ಲ ಇತ್ತೀಚೆಗೆ ಕಾಣಿಸಿಕೊಂಡ ಒಮಿಕ್ರಾನ್ ವೈರಸ್ ತಡೆಯುವ ಸಾಮರ್ಥ್ಯ ಚೀನಾ ಲಸಿಕೆಗಿಲ್ಲ ಎಂಬ ವರದಿಯೂ ಬಂದಿತ್ತು.
ನಮ್ಮ ಲಸಿಕೆ ಅಷ್ಟು ಪರಿಣಾಮಕಾರಿಯಲ್ಲ: ಚೀನಾ ಅಧಿಕಾರಿ ಒಪ್ಪಿಗೆ!
ಚೀನಾ ಲಸಿಕೆಗೆ ಒಮಿಕ್ರೋನ್ ತಡೆಯುವ ಸಾಮರ್ಥ್ಯ ಇಲ್ಲ
ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗಿರುವ ಕೋವಿಡ್ ಲಸಿಕೆಗಳ ಪೈಕಿ ಒಂದಾದ ಚೀನಾದ ಸಿನೋವ್ಯಾಕ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊರೋನಾವ್ಯಾಕ್ ಲಸಿಕೆಯು ಒಮಿಕ್ರೋನ್ ವಿರುದ್ಧ ಪರಿಣಾಮಕಾರಿಯಾಗಿಲ್ಲ ಎಂದು ಹಾಂಗ್‌ಕಾಂಗ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಇತ್ತೀಚೆಗೆ ವರದಿ ನೀಡಿತ್ತು. ಇದರಿಂದ ಸಿಕೆ ಪಡೆದ ಕೋಟ್ಯಾಂತರ ಜನರಿಗೆ ಒಮಿಕ್ರೋನ್ ಸೋಂಕಿಗೆ ತುತ್ತಾಗುವ ಆತಂಕ ಎದುರಾಗಿತ್ತು.
ಹಾಂಗ್‌ಕಾಂಗ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ, ಕೊರೋನಾವ್ಯಾಕ್ ಲಸಿಕೆಯ ಎರಡು ಡೋಸ್‌ನ್ನು ಪಡೆದುಕೊಂಡರೂ ದೇಹದಲ್ಲಿ ಒಮಿಕ್ರೋನ್ ವೈರಸ್ ವಿರುದ್ಧ ತಡೆಯೊಡ್ಡುವಷ್ಟುಪ್ರತಿಕಾಯಗಳು ತಯಾರಾಗುವುದಿಲ್ಲ ಎಂದು ಕಂಡುಬಂದಿದೆ. ಅಷ್ಟುಮಾತ್ರವಲ್ಲೇ ಇದೇ ಲಸಿಕೆಯ ಮೂರನೇ ಡೋಸ್‌ನ್ನು ನೀಡುವುದರಿಂದಲೂ ಹೆಚ್ಚಿನ ನಿರೋಧಕ ಶಕ್ತಿ ಬರುವ ಕುರಿತು ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದೇ ಅಧ್ಯಯನದಲ್ಲಿ ಫೈಝರ್, ಬಯೋಎನ್‌ಟೆಕ್ ಕಂಪನಿಗಳ ಲಸಿಕೆಗಳನ್ನೂ ಪರಿಶೀಲನೆ ನಡೆಸಲಾಗಿದ್ದು, ಅವು ಒಮಿಕ್ರೋನ್ ವಿರುದ್ಧ ರಕ್ಷಣೆ ನೀಡುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.
ಹಾಂಗ್‌ಕಾಂಗ್ ವಿಜ್ಞಾನಿಗಳು ತಮ್ಮ ಸಂಶೋಧನಾ ವರದಿಯನ್ನು ಸಿನೋವ್ಯಾಕ್ ಲಸಿಕೆ ತಯಾರಿಕಾ ಕಂಪನಿಗೆ ಕಳುಹಿಸಿದ್ದು, ಕಂಪನಿ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಎನ್ನಲಾಗಿದೆ. ಈಗಾಗಲೇ ಚೀನಾ ಹಾಗೂ ವಿವಿಧ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 230 ಕೋಟಿ ಸಿನೋವ್ಯಾಕ್ ಲಸಿಕೆಯನ್ನು ವಿತರಿಸಲಾಗಿದೆ. ಹೀಗಾಗಿ ಇಷ್ಟೂಜನರಿಗೆ ಇದೀಗ ಒಮಿಕ್ರೋನ್ ತಗುಲುವ ಭೀತಿ ಎದುರಾಗಿದೆ.
ಚೀನಾ ಕೊರೋನಾ ಲಸಿಕೆಯೂ ಕಳಪೆ!
ವಿಶ್ವಕ್ಕೆಲ್ಲಾ ಕೊರೋನಾ ಹಬ್ಬಿಸಿದ ಕಳಂಕ ಹೊತ್ತಿರುವ ಚೀನಾ ದೇಶ, ಇದೀಗ ವೈರಸ್ ವಿರುದ್ಧ ಕಳಪೆ ಗುಣಮಟ್ಟದ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟುಟೀಕೆಗೆ ಗುರಿಯಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಚೀನಾ ಲಸಿಕೆಯನ್ನು ನೀಡಿದ್ದ ಹಲವು ದೇಶಗಳಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ದಾಖಲಾಗುತ್ತಿದೆ ಎಂದು ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
