Asianet Suvarna News Asianet Suvarna News

Line of Actual Control: ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣ, ಸೇನೆ ನಿಯೋಜನೆ ಹೆಚ್ಚಳ!

*ಚೀನಾದಿಂದ ಎಲ್‌ಎಸಿ ಕಡೆಗೆ ಕನಿಷ್ಠ 8 ರಸ್ತೆಗಳ ನಿರ್ಮಾಣ
*ಮತ್ತೆ ಕ್ಸಿನ್‌ಜಿಯಾಂಗ್‌, ಟಿಬೆಟ್‌ನಲ್ಲಿ ಯೋಧರ ನಿಯೋಜನೆ
*ಭಾರತದ ಪ್ರಮುಖ ಮಿಲಿಟರಿ ಪೋಸ್ಟ್‌ ಬಳಿ ಚೀನಾ ಸೇನೆ
 

China builds roads deploys army near India border Line of Actual Control mnj
Author
Bengaluru, First Published Dec 2, 2021, 9:23 AM IST

ನವದೆಹಲಿ (ಡಿ. 02) : ಹೆಚ್ಚುಕಮ್ಮಿ ಒಂದೂವರೆ ವರ್ಷದಿಂದ ಭಾರತದ ಜೊತೆ ಗಡಿ ವಿವಾದ ಇತ್ಯರ್ಥಕ್ಕೆ ಮಾತುಕತೆ ನಡೆಸುತ್ತಲೇ ಇರುವ ಚೀನಾ, (India China Border Crisis) ಅದರ ನಡುವೆಯೇ ಗಡಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮೂಲಸೌಕರ್ಯ ನಿರ್ಮಾಣ (Infrastructure) ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಗಡಿಗೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಮತ್ತೆ ತನ್ನ ಯೋಧರನ್ನು ನಿಯೋಜಿಸತೊಡಗಿದೆ ((Army Deployment). ಈ ಬೆಳವಣಿಗೆ ಭಾರತಕ್ಕೆ ಆತಂಕ ಉಂಟುಮಾಡಿದ್ದು, ಇತ್ತೀಚಿನ ಮಾತುಕತೆಯಲ್ಲಿ ಚೀನಾದೆದುರು ಭಾರತ  (India) ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಕಳೆದೊಂದು ವರ್ಷದಿಂದ ವಾಸ್ತವ ನಿಯಂತ್ರಣ ರೇಖೆ (Line of Actual Control) ಸಮೀಪ ಭಾರತವು ರಸ್ತೆ, ಸೇತುವೆ, ಹೆಲಿಪ್ಯಾಡ್‌ (Helipad) ಹಾಗೂ ಹೆಚ್ಚುವರಿ ಸೇನಾಪಡೆಗಳಿಗೆ ವಾಸಸ್ಥಳಗಳನ್ನು (Base Camp) ನಿರ್ಮಾಣ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಚೀನಾ ಕೂಡ ಗಡಿಯಲ್ಲಿ ವ್ಯಾಪಕ ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದೆ. ಹಾಗೂ ಕೆಲ ತಿಂಗಳ ಹಿಂದೆ ವಾಪಸ್‌ ಕರೆಸಿಕೊಂಡಿದ್ದ ಸೇನೆಯನ್ನು ಮರುನಿಯೋಜನೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಅಕ್ಸಾಯ್‌ ಚಿನ್‌ ಮೂಲಕ ರಸ್ತೆ:

ಇತ್ತೀಚಿನ ದಿನಗಳಲ್ಲಿ ಒಟ್ಟು ಎಂಟು ರಸ್ತೆಗಳನ್ನು ಎಲ್‌ಎಸಿ (LAC) ಕಡೆಗೆ ಚೀನಾ ನಿರ್ಮಿಸಿದೆ. ಅವುಗಳಲ್ಲೊಂದು ರಸ್ತೆ ವಿವಾದಿತ ಅಕ್ಸಾಯ್‌ ಚಿನ್‌ (Aksai Chin) ಗುಂಟವೂ ಹಾದು ಹೋಗುತ್ತದೆ. ಕಾರಾಕೋರಂ ಪಾಸ್‌, ಗಲ್ವಾನ್‌ ಕಣಿವೆ, ಪ್ಯಾಂಗಾಂಗ್‌ ಸರೋವರದ ಫಿಂಗರ್‌ 8 ಪ್ರದೇಶ, ಸ್ಪಂಗುರ್‌ ಸರೋವರ, ಪೂರ್ವ ಲಡಾಖ್‌ನ (Eastern Ladakh) ಚುಮುರ್‌ ಮುಂತಾದವುಗಳ ಸಮೀಪದವರೆಗೆ ರಸ್ತೆಗಳನ್ನು ನಿರ್ಮಿಸಿದೆ ಅಥವಾ ಮೇಲ್ದರ್ಜೆಗೇರಿಸಿದೆ. 

Rajnath Singh: ಹೊಸ ಮತ್ತು ಶಕ್ತಿಶಾಲಿ ಭಾರತ ಪಾಕಿಸ್ತಾನ ಚೀನಾಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಲಿದೆ!

ಭಾರತದ ಪ್ರಮುಖ ಮಿಲಿಟರಿ ಪೋಸ್ಟ್‌ಗಳಾದ ದೌಲತ್‌ ಬೇಗ್‌ ಓಲ್ಡಿ (Daulat Beg Oldi) , ಗಲ್ವಾನ್‌ ಕಣಿವೆ (Galwan Valley , ಪ್ಯಾಂಗಾಂಗ್‌ ಸರೋವರ (Pangong Tso) ಹಾಗೂ ಚುಮುರ್‌ನ (Chumur) ಸಮೀಪದವರೆಗೆ ಚೀನಾ ತನ್ನ ಯೋಧರು ಯಾವುದೇ ಕ್ಷಣದಲ್ಲೂ ಬಂದಿಳಿಯಲು ರಸ್ತೆಗಳನ್ನು ನಿರ್ಮಾಣ ಮಾಡಿಕೊಂಡಿದೆ ಎನ್ನಲಾಗಿದೆ. ಅಲ್ಲದೆ ಎಲ್‌ಎಸಿಗೆ ಸಮೀಪವಿರುವ ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ನ ಪ್ರದೇಶಗಳಲ್ಲೂ ಏರ್‌ಸ್ಟ್ರಿಪ್‌ಗಳು ಹಾಗೂ ಸೇನಾಪಡೆಗಳಿಗೆ ವಾಸಸ್ಥಾನಗಳನ್ನು ಚೀನಾ ನಿರ್ಮಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಪೂರ್ವ ಲಡಾಖಲ್ಲಿ ಕ್ಷಿಪಣಿ, ರಾಕೆಟ್‌ ರೆಜಿಮೆಂಟ್‌ ನಿಯೋಜಿಸಿದ ಚೀನಾ!

ಡಿ ವಿಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಚೀನಾ ಮಧ್ಯೆ  ಸೇನಾ ಬಿಕ್ಕಟ್ಟು (India China Border Crisis) ಮುಂದುವರೆದಿರುವ ನಡುವೆಯೇ, ಪೂರ್ವ ಲಡಾಖ್‌ (Eastern Ladakh) ಸಮೀಪದಲ್ಲೇ ಚೀನಾ ಹೊಸ ಹೆದ್ದಾರಿಗಳು, ರಸ್ತೆ ನಿರ್ಮಿಸುತ್ತಿದೆ. ಜೊತೆಗೆ ಕ್ಷಿಪಣಿ ಮತ್ತು ರಾಕೆಟ್‌ ರೆಜಿಮೆಂಟ್‌ಗಳನ್ನು ನಿಯೋಜನೆ ಮಾಡುತ್ತಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

china ದೇಶದಿಂದ ಭಾರತದ ಗಡಿಯೊಳಗೆ ಮತ್ತೊಂದು ಹಳ್ಳಿ ನಿರ್ಮಾಣ!

ಪೂರ್ವ ಲಡಾಕ್‌ ಸೆಕ್ಟರ್‌ಗೆ ವಿರುದ್ಧವಾಗಿ ಅಕ್ಸಾಯ್‌ಚಿನ್‌ (Aksai Chin) ಪ್ರದೇಶದಲ್ಲಿ ಚೀನಾ ಸೇನೆ ಹೊಸ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಈ ಕ್ರಮದಿಂದ ಚೀನಾ ಸೇನೆಯ ಈ ಮೊದಲಿಗಿಂತಲೂ ವಾಸ್ತವ ಗಡಿ ನಿಯಂತ್ರಣ (Line of Actual control) ರೇಖೆಯ ಬಳಿಗೆ ಬಹುಬೇಗ ಬರಲು ಸಹಕಾರಿಯಾಗಲಿದೆ. ಅಲ್ಲದೆ ಕಾಶ್ಗರ್‌, ಗರ್‌ ಗುನ್ಸಾ ಮತ್ತು ಹೋಟನ್‌ ಅಷ್ಟೇ ಅಲ್ಲದೆ ಇತರೆ ಭಾಗಗಳಲ್ಲೂ ಹೆದ್ದಾರಿಗಳ ಅಗಲೀಕರಣ ಮತ್ತು ವಿಮಾನ ಇಳಿಯಲು ಅನುಕೂಲವಾಗುವ ರೀತಿಯ ರನ್‌ವೇಗಳನ್ನು ನಿರ್ಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios