WHOಗೆ ಆರ್ಥಿಕ ನೆರವು ಕಟ್ ಮಾಡಿದ ಅಮೆರಿಕ, ಟ್ರಂಪ್ ನಿರ್ಧಾರಕ್ಕೆ ವಿಶ್ವವೇ ಹಿಡಿಶಾಪ!
ಟ್ರಂಪ್ ಕೈ ಮೀರಿ ಹೋಯ್ತು ಅಮೆರಿಕಾ ಪರಿಸ್ಥಿತಿ; ದೊಡ್ಡಣ್ಣನಿಗೀಗ ಕರಾಳ ಅವಧಿ
ಅಸಮರ್ಪಕ ನಿರ್ವಹಣೆ ಕಾರಣ ಹೇಳಿ ವಿಶ್ವ ಆರೋಗ್ಯ ಸಂಸ್ಥೆಗೆ(WHO) ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಿದೆ. ಸುಮಾರು 500 ಮಿಲಿಯನ್ ಅಮೆರಿಕಾ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಅಮೆರಿಕ್ ನಿಲ್ಲಿಸಿದೆ. ಈ ಮೂಲಕ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಆರ್ಥಿಕ ನೆರವು ನಿಲ್ಲಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಟ್ರಂಪ್ ನಿರ್ಧಾರವನ್ನು ಖಂಡಿಸಿದೆ. ಇದೀಗ ಚೀನಾ ಕೂಡ ಡೋನಾಲ್ಡ್ ಟ್ರಂಪ್ ಮತ್ತೆ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ಎಚ್ಚರಿಸಿದೆ.
ಕಿಡಿ ಕಾರಿದ ಚೀನಾ;
ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಿಯಾನ್ ಅಮೆರಿಕಾ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ವಿಶ್ವವೇ ಒಂದಾಗಿ ಹೋರಾಡುತ್ತಿದೆ. ಆದರೆ ಅಮೆರಿಕಾ ಈ ಹೋರಾಟವನ್ನು ನಿರ್ಲಕ್ಷ್ಯವಹಿಸುತ್ತಿದೆ. ಇದು ಆತಂಕಕಾರಿ. ವೈರಸ್ ವಿಶ್ವವನ್ನೇ ವ್ಯಾಪಿಸಿದೆ. ಈ ವೇಳೆ ಆರ್ಥಿಕ ನೆರವು ತಡೆಹಿಡಿಯುವುದು ಆತುರದ ನಿರ್ಧಾರ ಎಂದು ಲಿಜಿಯಾನ್ ಹೇಳಿದ್ದಾರೆ.
ನರೇಂದ್ರ ಮೋದಿ ವಿಶ್ವ ನಾಯಕ, ಮತ್ತೊಮ್ಮೆ ಸಾಬೀತು ಮಾಡಿದ ವೈಟ್ ಹೌಸ್!
ಬಿಲ್‌ಗೇಟ್ಸ್ ಎಚ್ಚರಿಕೆ:
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಕೂಡ ಡೋನಾಲ್ಡ್ ಟ್ರಂಪ್ ನಿರ್ಧಾರವನ್ನು ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿಲ್‌ಗೇಟ್ಸ್, ವಿಶ್ವಸಂಸ್ಥೆಗೆ ನೀಡುತ್ತಿರುವ ಆರ್ಥಿಕ ಸಹಾಯವನ್ನು ನಿಲ್ಲಿಸುವುದು ಮತ್ತಷ್ಟು ಅಪಾಯಕಾರಿ. ಇದರಿಂದ ಕೊರೋನಾ ವೈರಸ್ ವಿರುದ್ಧದ ಹೋರಾಟ ನಿಧಾನವಾಗಲಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವಿಶ್ವ ಸಂಸ್ಥೆಗೆ ಬದಲಿಯಾಗಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆ ಜಗತ್ತಿನಲ್ಲಿ ಇಲ್ಲ. ಇಷ್ಟೇ ಅಲ್ಲ ಹಿಂದೆಂದಿಗಿಂತಲೂ ವಿಶ್ವಸಂಸ್ಥೆಯ ಸಹಾಯ ಈಗ ಹೆಚ್ಚಿದೆ ಎಂದು ಟ್ವೀಟ್ ಮಾಡಿದ್ದಾರೆ.
WHOಗೆ ಅಮೆರಿಕಾ ಆರ್ಥಿಕ ನೆರವು
ವಿಶ್ವಸಂಸ್ಥೆಗೆ ಆರ್ಥಿಕ ಸಹಾಯ ಮಾಡುತ್ತಿರುವ ದೇಶಗಳ ಪೈಕಿ ಅಮೆರಿಕಾದ್ದೆ ದೊಡ್ಡ ಪಾಲು. ಕಳೆದರೆಡು ವರ್ಷದಲ್ಲಿ ಅಮೆರಿಕಾ ಶೇಕಡಾ 15 ರಷ್ಟು ಹಣ ನೀಡಿದೆ. ಕಳೆದ ವರ್ಷ 400 ಮಿಲಿಯನ್ ಅಮೆರಿಕಾ ಡಾಲರ್ ಹಣ ನೀಡಿದ್ದ ಅಮೆರಿಕಾ ಈ ವರ್ಷ 500 ಮಿಲಿಯನ್ ಡಾಲರ್ ಹಣ ನೀಡಲು 2020ರ ಆರಂಭದಲ್ಲೇ ಹಣ ತೆಗೆದಿರಿಸಿತ್ತು. ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಸಮರ್ಪಕವಾಗಿ ನಿರ್ವಹಣೆ ಮಾಡಿದೆ. ಚೀನಾದಿಂದ ವಿಶ್ವಕ್ಕೆ ವ್ಯಾಪಿಸಲು ವಿಶ್ವ ಆರೋಗ್ಯ ಸಂಸ್ಥೆಯೇ ಕಾರಣ ಎಂದು ಹಣ ತಡೆ ಹಿಡಿದಿದೆ.
WHO ವಿರುದ್ಧ ತಿರುಗಿ ಬಿದ್ದ ಅಮೆರಿಕ, ಗಂಭೀರ ಆರೋಪ!
ಟ್ರಂಪ್-WHO ಮುಸುಕಿನ ಗುದ್ದಾಟ ಸ್ಫೋಟ:
ಕೊರೋನಾ ವೈರಸ್ ಅಮೆರಿಕಾ ಕಾಲಿಟ್ಟಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಡೋನಾಲ್ಡ್ ಟ್ರಂಪ್ ನಡುವಿನ ಗುದ್ದಾಟ ಆರಂಭವಾಗಿತ್ತು. ಚೀನಾ ದೇಶ ಕೊರೋನಾ ವೈರಸ್ ವಿಶ್ವಕ್ಕೆ ಹರಡಿದೆ. ಇದರ ಹಿಂದೆ ಚೀನಾದ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದರು. ಇತ್ತ ಆಕ್ರೋಶಗೊಂಡ ಚೀನಾ, ಕೊರೋನಾ ಹರಡಲು ಅಮೆರಿಕಾ ಸೇನೆ ಕಾರಣ ಎಂದು ತಿರುಗೇಟು ನೀಡಿತ್ತು.
ವೈರಸ್ ವಿಚಾರದಲ್ಲಿ ಅಮೆರಿಕಾ ಸೇನೆಯನ್ನು ಎಳೆದು ತಂದಾಗ ಟ್ರಂಪ್ ಪಿತ್ತ ನೆತ್ತಿಗೇರಿತ್ತು. ಸುದ್ದಿಗೋಷ್ಠಿಯಲ್ಲಿ ಚೀನಾ ವೈರಸ್, ವುಹಾನ್ ವೈರಸ್ ಎಂದು ಆರೋಪದ ಸುರಿಮಳೆಗೈದಿದ್ದರು. ಟ್ರಂಪ್ ವಿರುದ್ಧ ಚೀನಾ ವಿಶ್ವಆರೋಗ್ಯ ಸಂಸ್ಥೆಗೆ ದೂರು ನೀಡಿತ್ತು. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಟ್ರಂಪ್‌ಗೆ ಎಚ್ಚರಿಕೆ ನೀಡಿತ್ತು. ಚೀನಾ ವೈರಸ್, ವುಹಾನ್ ವೈರಸ್ ಎನ್ನುವಂತಿಲ್ಲ ಎಂದಿತ್ತು.
ಅಮೆರಿಕದಲ್ಲಿ 1 ಲಕ್ಷ ಮಂದಿ ಸಾಯುವ ಸಾಧ್ಯತೆ: ಟ್ರಂಪ್!
ಅಮೆರಿಕಾ-ಚೀನಾ ನಡುವಿನ ವಾಕ್ಸಮರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಎಂಟ್ರಿಕೊಟ್ಟಾಗ ಡೋನಾಲ್ಡ್ ಟ್ರಂಪ್ WHO ವಿರುದ್ಧ ಆರೋಪಕ್ಕೆ ಮುಂದಾದರು. ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವವನ್ನೇ ಅಪಾಯಕ್ಕೆ ಸಿಲುಕಿಸಿದ್ದು WHO. ವೈರಸ್ ಗಂಭೀರತೆಯನ್ನು WHO ಗೌಪ್ಯವಾಗಿಟ್ಟಿತು ಎಂದು ಟ್ರಂಪ್ ಆರೋಪಿಸಿದರು. ಇಷ್ಟೇ ಅಲ್ಲ ಇದೇ ರೀತಿ ಅಸಮರ್ಪಕ ನಿರ್ವಹಣೆ ಮುಂದುವರಿದರೆ ಆರ್ಥಿಕ ನೆರವು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿತ್ತು. ಇತ್ತ ಆರ್ಥಿಕ ನೆರವು ನಿಂತರೆ ಮತ್ತಷ್ಟು ಅಪಾಯದಲ್ಲಿ ಸಿಲುಕಲಿದೆ ಎಂದು ಅರಿತ WHO , ಜೊತೆಯಾಗಿ ಹೋರಾಡೋಣ, ಕೊರೋನಾ ವಿರುದ್ಧ ಗೆಲ್ಲೋಣ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸುವ ಕಾರ್ಯಕ್ಕೆ ಮುಂದಾಯಿತು. ಆದರೆ ಟ್ರಂಪ್ ಕೋಪ ಅಷ್ಟಕ್ಕೆ ತಣ್ಣಗಾಗಲಿಲ್ಲ. ಆರ್ಥಿಕ ನೆರವನ್ನೇ ನಿಲ್ಲಿಸಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.