ನರೇಂದ್ರ ಮೋದಿ ವಿಶ್ವ ನಾಯಕ, ಮತ್ತೊಮ್ಮೆ ಸಾಬೀತು ಮಾಡಿದ ವೈಟ್ ಹೌಸ್!

ಇದು ದೂರದ ಅಮೆರಿದ ಸುದ್ದಿ/ ನಮ್ಮ ಭಾರತಕ್ಕೂ ಪ್ರಧಾನಿ ಮೋದಿಗೂ ಸಂಬಂಧಿಸುತ್ತದೆ/ ವೈಟ್ ಹೌಸ್ ಸಚಿವಾಲಯ ಮೋದಿಯವರ ಟ್ವಿಟರ್ ಫಾಲೋ ಮಾಡುತ್ತಿದೆ/ ಅಪ್ ಡೇಟ್ ಪಡೆದುಕೊಳ್ಳುತ್ತಿರುವ ವೈಟ್ ಹೌಸ್

PM Narendra Modi only world leader followed by White House on Twitter

ವಾಷಿಂಗ್ ಟನ್(ಏ. 10)  ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ಗುಜರಾತ್ ಗೂ ಅವರನ್ನು ಕರೆದುಕೊಂಡು ಹೋಗಿದ್ದರು. ಎರಡು ರಾಷ್ಟ್ರಗಳ ನಡುವೆ ಅನೇಕ ಒಪ್ಪಂದಗಳಿಗೆ ಸಹಿ ಬಿದ್ದಿತ್ತು.

ಎರಡು ದೇಶಗಳ ನಡುವಿನ ಸಂಬಂಧವನ್ನು ಇದು ಗಟ್ಟಿಗೊಳಿಸಿತ್ತು. ಆದರೆ ಇದೆಲ್ಲದಕ್ಕಿಂತ ಒಂದು ವಿಶೇಷ ಸುದ್ದಿ ಇದೆ. ವೈಟ್ ಹೌಸ್ ನ ಟ್ವಿಟರ್ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆಯನ್ನು ಫಾಲೋ ಮಾಡುತ್ತಿದೆ. 

ಅಮೆರಿಕ ಅಧ್ಯಕ್ಷರ ಸಚಿವಾಲಯ ಕೇವಲ 19 ಖಾತೆಗಳನ್ನು ಫಾಲೋ ಮಾಡುತ್ತಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಖಾತೆಯೂ ಸೇರಿದೆ. ಇದಲ್ಲದೇ  ವಿಶ್ವದ ಬೇರಾವ ನಾಯಕರ ಖಾತೆಯನ್ನು ವೈಟ್ ಹೌಸ್ ಫಾಲೋ ಮಾಡುತ್ತಿಲ್ಲ

ಮೋದಿಯನ್ನು ಹನುಮಂತನಿಗೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ

ವಿಶ್ವನಾಯಕರ ಪಟ್ಟಿಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವವರಲ್ಲಿ ನರೇಂದ್ರ ಮೋದಿ 3ನೇ ಸ್ಥಾನದಲ್ಲಿದ್ದಾರೆ. ಮೋದಿ ವೈಯಕ್ತಿಕ ಖಾತೆಗೆ 42 ಮಿಲಿಯನ್ ಫಾಲೋವರ್ಸ್ ಇದ್ದರೆ ಪ್ರಧಾನಿ ಖಾತೆಗೆ 26 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಫ್ರಾನ್ಸ್ ನ ಪೋಪ್ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಮೋದಿ ಅವರಿಗಿಂತ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಮೋದಿ ದಿನ ಪ್ರತಿದಿನ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು. ದೇಶದ ನಾಗರಿಕರಿಗೆ ಅವರು ನೀಡುತ್ತಿರುವ ಕರೆ. ರಕ್ಷಣಾ ಉಪಾಯಗಳು ಎಲ್ಲವನ್ನು ಅಮೆರಿಕದ ಸಚಿವಾಲಯ ಗಮನಿಸುತ್ತಿದೆ.

PM Narendra Modi only world leader followed by White House on Twitter

Latest Videos
Follow Us:
Download App:
  • android
  • ios