Asianet Suvarna News Asianet Suvarna News

ಕೊರೋನಾ ಜೊತೆಗೆ ಮತ್ತೊಂದು ಆಘಾತ, ಚೀನಾದಲ್ಲಿ ಕಾಣಿಸಿಕೊಂಡಿದೆ ಪ್ಲೇಗ್ ರೋಗ!

ಚೀನಾದಿಂದ ಆಗಮಿಸಿದ ಕೊರೋನಾ ವೈರಸ್‌ಗೆ ಭಾರತ ಸೇರಿದಂತೆ ವಿಶ್ವವೇ ನಲುಗಿದೆ. ಇನ್ನೂ ಚೇತರಿಕೆ ಕಂಡಿಲ್ಲ, ಕೊರೋನಾ ನಿಯಂತ್ರಣಕ್ಕೆ ಸಿಕ್ಕಿಲ್ಲ. ಇದರ ಬೆನ್ನಲ್ಲೇ ಚೀನಾ ಮತ್ತೊಂದು ಶಾಕ್ ನೀಡುತ್ತಿದೆ. ಚೀನಾದಲ್ಲೀಗ ಬ್ಯುಬೋನಿಕ್ ಪ್ಲೇಗ್ ಕಾಣಿಸಿಕೊಂಡಿದೆ.

China alert Bubonic plague spread after deadly coronavirus
Author
Bengaluru, First Published Jul 6, 2020, 5:23 PM IST

ಬೀಜಿಂಗ್(ಜು.06): ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ವಿಶ್ವದೆಲ್ಲೆಡೆ ಹಬ್ಬಿದೆ. ಚೀನಾದ ಧೋರಣೆಯಿಂದ ಇದೀಗ ವಿಶ್ವವೇ ನರಳಾಡುತ್ತಿದೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳು ಕೊರೋನಾ ನಿಯಂತ್ರಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ ಫಲ ನೀಡುತ್ತಿಲ್ಲ. ಕೊರೋನಾ ಆಘಾತದಿಂದ ಮಡುವಿನಲ್ಲಿರುವಾಗಲೇ ಇದೀಗ ಚೀನಾ ಮತ್ತೊಂದು ಶಾಕ್ ನೀಡಿದೆ. ಚೀನಾದಲ್ಲೀಗ ಬ್ಯುಬೋನಿಕ್ ಪ್ಲೇಗ್ ಕಾಣಿಸಿಕೊಂಡಿದೆ.

ಚೀನಾದಲ್ಲಿ 7 ವರ್ಷ ಹಿಂದೆಯೇ ಕೊರೋನಾ ಪತ್ತೆ?: ವರದಿಯಿಂದ ಬಹಿರಂಗ!.

ಮಂಗೊಲಿಯಾ ಆಟೋನೊಮಸ್ ರೀಜನ್ ಬನ್ನರ್‌ ಪ್ರದೇಶದಲ್ಲಿನ ಆಸ್ಪತ್ರೆಯಲ್ಲಿ 2 ಬ್ಯುಬೋನಿಕ್ ಪ್ಲೇಗ್ ಪ್ರಕರಣ ಕಾಣಿಸಿಕೊಂಡಿದೆ. ಇದೀಗ ಬನ್ನರ್ ವಲಯದಲ್ಲಿ 3ನೇ ಹಂತದ ಎಚ್ಚರಿಕೆ ನೀಡಲಾಗಿದೆ. ವಾರ್ನಿಂಗ್ ಅವದಿ 2020ರ ಅಂತ್ಯದ ವರೆಗೂ ಇರಲಿದೆ ಎಂದು ಪ್ಲೇಗ್ ನಿಯಂತ್ರಣ ಬೋರ್ಡ್ ಹೇಳಿದೆ.

ಎರಡು ಬ್ಯುಬೋನಿಕ್ ಪ್ಲೇಗ್ ಪ್ರಕರಣ ದೃಢಪಟ್ಟಿರುವ ಹಿನ್ನಲೆಯಲ್ಲಿ ಪ್ಲೇಗ್ ಮತ್ತಷ್ಟು ಜನರಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಚೀನಾ ನಗರದ ಉತ್ತರ ಭಾಗದಲ್ಲಿ ಅಲರ್ಟ್ ಘೋಷಿಸಲಾಗಿದೆ. 27 ವರ್ಷದ ವ್ಯಕ್ತಿ ಹಾಗೂ ಆತನ ಸಹೋದರ 16 ವರ್ಷದ ಬಾಲಕನಿಗೆ ಪ್ಲೇಗ್ ಕಾಣಿಸಿಕೊಂಡಿದೆ.

ಇವರಿಬ್ಬರು ಇಲಿ ಜಾತಿಗೆ ಸೇರಿದ ಮಾರ್ಮೂಟ್ ಮಾಂಸಾಹರ ಸೇವಿಸಿದ್ದರು. ಇದರಿಂದ ಪ್ಲೇಗ್ ಬಂದಿದೆ ಎಂದು ಬನ್ನರ್ ಪ್ರಯೋಗಾಲಯ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ 2020ರ ಅಂತ್ಯದ ವರೆಗೆ ಮಾರ್ಮೂಟ್ ಮಾಂಸ ಸೇವಿಸದಂತೆ ಚೀನಾ ವಾರ್ನಿಂಗ್ ನೀಡಿದೆ. ಚೀನಾ ಇದೀಗ ವೈರಸ್‌ಗ ಆಗರವಾಗಿ ಮಾರ್ಪಡುತ್ತಿದೆ. ಇದು ಚೀನಾಗೆ ಮಾತ್ರವಲ್ಲ, ಇತರ ದೇಶಗಳಿಗೂ ಹರಡುತ್ತಿದೆ. 

"

Follow Us:
Download App:
  • android
  • ios