ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಕ್ಕಳು ಹಾವನ್ನು ಹಿಡಿದು ಸ್ಕಿಪ್ಪಿಂಗ್ ಆಡುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಬಾಲಕಿಯೊಬ್ಬಳು ಬೈಕ್‌ನೊಳಗೆ ಸಿಲುಕಿದ ಹಾವನ್ನು ಬರಿಗೈಲಿ ಹಿಡಿದೆಳೆಯುತ್ತಿದ್ದಾಳೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಿತ್ರ ವಿಲಕ್ಷಣವೆನಿಸುವ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಮಕ್ಕಳು ಹಾವನ್ನು ಹಿಡಿದು ಸ್ಕಿಪ್ಪಿಂಗ್ ಆಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ನೋಡುಗರನ್ನು ಅಚ್ಚರಿಗೊಳಿಸಿದೆ. 

ಹಗ್ಗದಂತೆ ಬಳಸಿ ಸ್ಕಿಪ್ಪಿಂಗ್ ಆಡಿದ ಮಕ್ಕಳು

ಸಾಮಾನ್ಯವಾಗಿ ಹಾವು ಎಂದರೆ ಎಲ್ಲರೂ ಎದ್ನೋ ಬಿದ್ನೋ ಅಂತ ದೂರ ಓಡೋದೆ ಹೆಚ್ಚು ಆದರೆ ಇಲ್ಲೊಂದು ಕಡೆ ಮಕ್ಕಳು ಹಾವನ್ನು ಹಗ್ಗದಂತೆ ಬಳಸಿ ಸ್ಕಿಪ್ಪಿಂಗ್ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ವೂರಬಿಂದಾ (Woorabinda)ಎಂಬಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೋ ಈಗ ಜಾಗತಿಕ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಮೀಟರ್‌ಗೂ ಅಧಿಕ ಉದ್ದವಿರುವ ಹಾವನ್ನು ಇಬ್ಬರು ಬಾಲಕರು ಬಾಲ ಹಾಗೂ ತಲೆಯ ಬಳಿ ಹಿಡಿದುಕೊಂಡು ಸುತ್ತುತ್ತಿದ್ದರೆ ಮಧ್ಯದಲ್ಲಿ ನಿಂತಿರುವ ಬಾಲಕನೋರ್ವ ಹಾವು ಬಳ್ಳಿಯಂತೆ ಬರುವಾಗಲೆಲ್ಲಾ ಮೇಲೆ ಹಾರಿ ಸ್ಕಿಪ್ ಮಾಡುತ್ತಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಒಂದು ಹಂತದಲ್ಲಿ, ಮಕ್ಕಳು ಸರೀಸೃಪವನ್ನು ಕಪ್ಪು ತಲೆಯ ಹೆಬ್ಬಾವು ಎಂದು ಗುರುತಿಸುವುದನ್ನು ಸಹ ವೀಡಿಯೋದ ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಿತ್ತು ಎಂದು ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆ 7NEWS ವರದಿ ಮಾಡಿದೆ. ಆದರೆ ಈ ಹಾವು ಜೀವಂತವಾಗಿತ್ತೆ ಅಥವಾ ಮೃತಪಟ್ಟಿತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ನಡುವೆ ಪರಿಸರ, ಪ್ರವಾಸೋದ್ಯಮ, ವಿಜ್ಞಾನ ಮತ್ತು ನಾವೀನ್ಯತೆ ಇಲಾಖೆಯ ವಕ್ತಾರರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಮಕ್ಕಳ ಈ ಅನುಚಿತ ನಡವಳಿಕೆಯನ್ನು ನಾವು ಖಂಡಿಸುತ್ತೇವೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ. ಎಲ್ಲಾ ಕ್ವೀನ್ಸ್‌ಲ್ಯಾಂಡ್‌ನವರು ಪ್ರಾಣಿಗಳನ್ನು ಅವರು ಜೀವಂತವಾಗಿದ್ದರೂ ಅಥವಾ ಸತ್ತಿದ್ದರೂ ಗೌರವದಿಂದ ನಡೆಸಿಕೊಳ್ಳಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ಕಪ್ಪು ತಲೆಯ ಹೆಬ್ಬಾವನ್ನು ಕೊಂದ ಅಥವಾ ಗಾಯಗೊಳಿಸಿದ ತಪ್ಪಿತಸ್ಥ ವ್ಯಕ್ತಿಗೆ ಗರಿಷ್ಠ ದಂಡ $12,615 ಆಗಿದೆ ಎಂದು ಅವರು ಹೇಳಿದರು.

ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಈ ಮಕ್ಕಳು ನೋಡುವ ವೇಳೆಗೆ ಹಾವು ಸತ್ತು ಹೋಗಿತ್ತು. ಹೀಗಾಗಿ ಇಲ್ಲಿ ಅವರು ಹಾವಿಗೆ ಹಾನಿ ಮಾಡಿಲ್ಲ. ಕೆಲ ಮಕ್ಕಳು ಮಾತ್ರ ಅಲ್ಲಿ ಆಟವಾಡುತ್ತಿದ್ದರು ಅಷ್ಟೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಆದ ವೀಡಿಯೋ ಇಲ್ಲಿದೆ ನೋಡಿ

ಬೈಕ್‌ನೊಳಗೆ ಸಿಲುಕಿದ ಹಾವನ್ನು ಬರಿಗೈಲಿ ಹಿಡಿದೆಳೆದ ಬಾಲಕಿ

ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಇನ್ನೊಂದು ವೀಡಿಯೋದಲ್ಲಿ ಬೈಕ್‌ನೊಳಗೆ ಹೊಕ್ಕಿರುವ ಹಾವೊಂದನ್ನು ಬಾಲಕಿಯೊಬ್ಬಳು ಯಾವುದೇ ಭಯವಿಲ್ಲದೇ ಹಿಡಿದೆಳೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಘಂಟಾ ಎಂಬ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೈರಲ್ ಆದ ವೀಡಿಯೋದಲ್ಲಿ ಹಾವೊಂದು ಬೈಕ್‌ನ ಹಿಂಬದಿ ಟೈರ್‌ಗೆ ಸಿಲುಕಿಕೊಂಡಿದ್ದು, ಬಾಲಕಿಯೊಬ್ಬಳು ಅದನ್ನು ಬರಿಗೈನಲ್ಲಿ ಹಿಡಿದು ಎಳೆಯುತ್ತಿದ್ದಾಳೆ. ಆದರೆ ಈ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಖಚಿತತೆ ಇಲ್ಲ, ಬೈಕ್‌ನ ಚಕ್ರದ ಮೇಲೆ ಹಾವು ನುಗ್ಗಿಕೊಂಡಿದದು, ಬಾಲಕಿ ಅದರ ಬಾಲ ಹಿಡಿದು ಎಳೆಯುತ್ತಿದ್ದರೆ ಮತ್ತೊಬ್ಬರು ಅದಕ್ಕೆ ಸಹಾಯ ಮಾಡುತ್ತಿದ್ದಾರೆ. ಹೀಗೆ ಕೊನೆಗೂ ಹಾವನ್ನು ಅವರು ಬೈಕ್‌ನಿಂದ ಹೊರಗೆಳೆದು ತೆಗೆದಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ. 

ಬಾಲಕಿ ಹಾವನ್ನು ಹಿಡಿದೆಳೆದ ವೀಡಿಯೋ ಇಲ್ಲಿದೆ ನೋಡಿ

View post on Instagram