ಸಾಮಾಜಿಕ ಜಾಲತಾಣದಲ್ಲಿ 8 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಮಕ್ಕಳು ಸ್ಕಿಪ್ಪಿಂಗ್ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ತನಿಖೆಗೆ ಆದೇಶಿಸಲಾಗಿದೆ.

ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಮಕ್ಕಳು ಹಗ್ಗದಂತೆ ಬಳಸುತ್ತಾ ಸ್ಕಿಪ್ಪಿಂಗ್ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೂ ವೈರಲ್ ಆಗಿರುವ ಬೆನ್ನಲ್ಲಿಯೇ ಎಚ್ಚೆತ್ತುಕೊಂಡು ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ತನಿಖೆಗೆ ಆದೇಶಿಸಲಾಗಿದೆ.

ಪ್ರತಿದಿನವೂ ವಿಚಿತ್ರವಾದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಸಿಗುತ್ತವೆ. ಅದರಲ್ಲಿ ಹಾವುಗಳ ವೀಡಿಯೊಗಳು ಸಾಮಾನ್ಯ. ಈಗಂತೂ ಒಂದು ವಿಡಿಯೋ ಜನರನ್ನು ಬೆಚ್ಚಿ ಬೀಳಿಸಿದೆ. ಕೆಲವು ಮಕ್ಕಳು ಹಗ್ಗವನ್ನು ಹಿಡಿದು ಜಿಗಿಯುತ್ತಿದ್ದಾರೆ. ಆದರೆ, ಅವರು ಹಗ್ಗದ ಬದಲು ಹಾವನ್ನು ಬಳಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಜನರೇ ಶಾಕ್ ಆಗಿದ್ದಾರೆ.

ಮಾಧ್ಯಮಗಳ ವರದಿಗಳ ಪ್ರಕಾರ, ಈ ಘಟನೆ ಆಸ್ಟ್ರೇಲಿಯಾದ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್‌ನ ವೂರಾಬಿಂಡಾ ಎಂಬ ಪಟ್ಟಣದಲ್ಲಿ ನಡೆದಿದೆ. ಮಕ್ಕಳು ನಗುತ್ತಾ ಹಾವಿನ ಮೇಲೆ ಹಾರುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ವಯಸ್ಕರೂ ಅಲ್ಲಿದ್ದಾರೆ. ಚಿತ್ರೀಕರಣ ಮಾಡುವಾಗ ಮಹಿಳೆಯೊಬ್ಬರು 'ಅದು ಏನು ಎಂದು ತೋರಿಸು' ಎಂದು ಹೇಳುತ್ತಿದ್ದಾರೆ. ಮಕ್ಕಳು ನಗುತ್ತಾ ಜಿಗಿಯುವುದನ್ನು ಮುಂದುವರಿಸಿದ್ದಾರೆ. ಇಬ್ಬರು ಮಕ್ಕಳು ಹಾವಿನ ಎರಡೂ ಬದಿಗಳನ್ನು ಹಿಡಿದುಕೊಂಡಿದ್ದಾರೆ, ಮತ್ತೊಬ್ಬ ಮಗು ಅದರ ಮೇಲೆ ಹಾರುತ್ತಿದ್ದಾನೆ.

ಇದನ್ನೂ ಓದಿ: ಗೊಂಬೆ ಜೊತೆ ಮದ್ವೆಯಾದ ಮಹಿಳೆ ಈಗ ಎರಡು ಮಕ್ಕಳ ತಾಯಿ! ವಿಚಿತ್ರ ಎನಿಸಿರೋ ಈ ಸ್ಟೋರಿ ಕೇಳಿ....

ಅದೃಷ್ಟವಶಾತ್ ಆ ಹಾವು ಸತ್ತು ಹೋಗಿದೆ. ಏನೇ ಆಗಲಿ, ಮಕ್ಕಳು ಸತ್ತ ಹಾವಿನಿಂದ ಆಡವಾಡುತ್ತಿದ್ದು, ಅದರ ಹಲ್ಲುಗಳು ಅಥವಾ ಮುಳ್ಳುಗಳು ಚುಚ್ಚಿದರೆ ಪರಿಣಾಮ ಏನಾಗಲಿದೆ ಎಂಬುದು ವಿಡಿಯೋ ನೋಡುಗರ ಆತಂಕಕ್ಕೆ ಕಾರಣವಾಗಿದೆ. ಆದರೆ, ಮಕ್ಕಳು ತೆಗೆದುಕೊಳ್ಳುವ ಮೊದಲು ಅದು ಸತ್ತಿತ್ತೋ ಅಥವಾ ಸತ್ತ ನಂತರ ಮಕ್ಕಳು ಹಾವನ್ನು ತೆಗೆದುಕೊಂಡರೋ ಎಂಬುದು ಸ್ಪಷ್ಟವಾಗಿಲ್ಲ.

Scroll to load tweet…

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ಪರಿಸರ, ಪ್ರವಾಸೋದ್ಯಮ, ವಿಜ್ಞಾನ ಮತ್ತು ನಾವೀನ್ಯತೆ ಇಲಾಖೆ ತನಿಖೆಗೆ ಆದೇಶಿಸಿದೆ. ಹಾವು ಸತ್ತಿರಲಿ ಅಥವಾ ಜೀವಂತವಾಗಿರಲಿ, ಪ್ರಾಣಿಗಳನ್ನು ಅಗೌರವದಿಂದ ಕಾಣುವುದು ಸರಿಯಲ್ಲ ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ. ವೀಡಿಯೊದಲ್ಲಿರುವುದು ಬ್ಲ್ಯಾಕ್ ಹೆಡೆಡ್ ಪೈಥಾನ್ ಎಂದು ನಂಬಲಾಗಿದೆ. 1992ರ ಕ್ವೀನ್ಸ್‌ಲ್ಯಾಂಡ್ ಪ್ರಕೃತಿ ಸಂರಕ್ಷಣಾ ಕಾಯ್ದೆಯ ಪ್ರಕಾರ, ಈ ಹೆಬ್ಬಾವುಗಳು ಸಂರಕ್ಷಿತ ಪ್ರಭೇದಗಳಾಗಿವೆ. ಯಾವುದೇ ಹಾವನ್ನು ಕೊಲ್ಲುವುದು, ಗಾಯಗೊಳಿಸುವುದು ಅಥವಾ ಕಾಡಿನಿಂದ ಸೆರೆಹಿಡಿಯುವುದು ಇಲ್ಲಿ ಕಾನೂನುಬಾಹಿರವಾಗಿದೆ.

ಇದನ್ನೂ ಓದಿ: 500 ರೂಪಾಯಿ ಆಸೆಯಿಂದಾಗಿ ರಹಸ್ಯ ಬಿಚ್ಚಿಟ್ಟ ಭಿಕ್ಷುಕ; ಹಣಕ್ಕಾಗಿ ಏನೆಲ್ಲಾ ಮಾಡ್ತಾರೆ ಗುರು!