Asianet Suvarna News Asianet Suvarna News

ಈ ವರ್ಷ ಹೊಸ ವರ್ಷ ಆಚರಣೆ ಮಾಡೋದಿಲ್ಲ ಎಂದು ಘೋಷಿಸಿದ ಪಾಕಿಸ್ತಾನ? ಏನು ಕಾರಣ!

ಈ ವರ್ಷ ಪಾಕಿಸ್ತಾನ ಹೊಸ ವರ್ಷ ಆಚರಣೆ ಮಾಡುತ್ತಿಲ್ಲ. ಸ್ವತಃ ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇದನ್ನು ಘೋಷಣೆ ಮಾಡಿದ್ದಾರೆ.
 

caretaker Prime Minister of Pakistan said wont celebrate New Year this time Know why san
Author
First Published Dec 29, 2023, 10:28 PM IST

ನವದೆಹಲಿ (ಡಿ.29): ಹೊಸ ವರ್ಷದ ಸಂಕಲ್ಪಗಳು ಇರಬಹುದು, ಆದರೆ 2024ಕ್ಕೆ ಕಾಲಿಡುತ್ತಿದ್ದಂತೆ ಪಾಕಿಸ್ತಾನಿಗಳಿಗೆ ಹೊಸ ವರ್ಷಾಚರಣೆ ಇರುವುದಿಲ್ಲ. ಪ್ಯಾಲೆಸ್ತೇನ್‌ನ ಜನರ ಪರವಾಗಿ ನಿಲ್ಲುವ ಸಲುವಾಗಿ ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ಒಗ್ಗಟ್ಟನ್ನು ವ್ಯಕ್ತಪಡಿಸಲು ಸರ್ಕಾರವು "ಹೊಸ ವರ್ಷದ ಆಚರಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ" ಎಂದು ಹೇಳಿದ್ದಾರೆ. ವಿಡಿಯ ಸಂದೇಶದಲ್ಲಿ ತಿಳಿಸಿರುವ ಕಾಕರ್‌, ಈ ದೇಶ ಹಾಗೂ ಮುಸ್ಲಿಂ 'ಉಮ್ಮಾ' (ಬ್ರದರ್‌ಹುಡ್‌) ಪ್ಯಾಲಿಸ್ತೇನ್‌ನ ಪ್ರದೇಶವಾದ  ಗಾಜಾ ಹಾಗೂ ಪಶ್ಚಿಮ ದಂಡೆಯಲ್ಲಿ ನಡೆದಿರುವ ಜನಾಂಗೀಯ ಕ್ರೌರ್ಯ ಹಾಗೂ ಅಮಾಯಕ ಮಕ್ಕಳ ಹತ್ಯೆಗೆ ಸಂತಾಪ ಸೂಚಿಸುತ್ತದೆ. ಹಾಗಾಗಿ  ಬಾರಿ ಹೊಸ ವರ್ಷದ ಆಚರಣೆಯನ್ನು ದೇಶ ಮಾಡುತ್ತಿಲ್ಲ' ಎಂದು ತಿಳಿಸಿದ್ದಾರೆ. 2023ರ ಅಕ್ಟೋಬರ್‌ 1 ರಿಂದ ಇಲ್ಲಿಯವರೆಗೆ 21 ಸಾವಿರ ಅಮಾಯಕ ಪ್ಯಾಲಿಸ್ತೇನಿ ಪ್ರಜೆಗಳು ಹುತಾತ್ಮರಾಗಿದ್ದಾರೆ. ಇಸ್ರೇಲಿಯ ಸೈನಿಕರು ಇವರುಗಳ ಹತ್ಯೆ ಮಾಡಿದ್ದಾರೆ. ಅದರಲ್ಲೂ 9 ಸಾವಿರಕ್ಕೂ ಅಧಿಕ ಅಮಾಯಕ ಮಕ್ಕಳನ್ನು ಅವರು ಹತ್ಯೆ ಮಾಡಿದ್ದಾರೆ' ಎಂದು ಕಾಕರ್‌ ಹೇಳಿದ್ದಾರೆ. ಇದನ್ನು ಡಾನ್‌ ಪತ್ರಿಕೆ ವರದಿ ಮಾಡಿದೆ.

ಹೊಸ ವರ್ಷದ ಆರಂಭದಲ್ಲಿ ಗಾಜಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಸರಳತೆಯನ್ನು ಅನುಸರಿಸಲು ಪಾಕಿಸ್ತಾನಿ ಸಾರ್ವಜನಿಕರನ್ನು ಕಾಕರ್ ಒತ್ತಾಯಿಸಿದರು. ಪಾಕಿಸ್ತಾನವು ಪ್ಯಾಲೇಸ್ಟಿನಿಯನ್‌ನ ದೊಡ್ಡ ಬೆಂಬಲಿಗರಲ್ಲಿ ಒಂದಾಗಿದೆ ಮತ್ತು ಈ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್‌ನ ಭಯೋತ್ಪಾದಕ ದಾಳಿ ಮತ್ತು ಇಸ್ರೇಲಿ ನಾಗರಿಕರ ಅಪಹರಣವನ್ನು ಸಮರ್ಥಿಸಿಕೊಂಡಿತ್ತು.

ಪೋಲಿ ಆಗಿಬಿಟ್ರಾ ಟೀಮ್‌ ಇಂಡಿಯಾ ಯುವ ವೇಗಿ, ಟ್ವಿಟರ್‌ನಲ್ಲಿ ಮಾಡೆಲ್‌, ನಟಿಯರ ಹಸಿಬಿಸಿ ಚಿತ್ರಗಳಿಗೆ ಲೈಕ್‌!

ಪ್ಯಾಲೇಸ್ಟಿನಿಯನ್ ಜನರಿಗೆ ಸಹಾಯ ಮಾಡಲು ಸರ್ಕಾರವು ಎರಡು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ತಿಳಿಸಿದ್ದಾರೆ. ಮೂರನೇ ರವಾನೆಯನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ಅದೇ ರೀತಿ ಪ್ಯಾಲೆಸ್ಟೀನಿಯಾದವರಿಗೆ ಸಕಾಲಿಕ ಪರಿಹಾರ, ಗಾಜಾದಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು ಮತ್ತು ಅವರ ಚಿಕಿತ್ಸೆಗಾಗಿ ಪಾಕಿಸ್ತಾನ ಸರ್ಕಾರವು ಈಜಿಪ್ಟ್ ಮತ್ತು ಜೋರ್ಡಾನ್‌ನೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.

ಕಪ್ಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ಸಾರಾ : ಶುಭ್ಮನ್ ಗಿಲ್ ಕಾಲೆಳೆದ ನೆಟ್ಟಿಗರು

Latest Videos
Follow Us:
Download App:
  • android
  • ios