Asianet Suvarna News Asianet Suvarna News

ಪೋಲಿ ಆಗಿಬಿಟ್ರಾ ಟೀಮ್‌ ಇಂಡಿಯಾ ಯುವ ವೇಗಿ, ಟ್ವಿಟರ್‌ನಲ್ಲಿ ಮಾಡೆಲ್‌, ನಟಿಯರ ಹಸಿಬಿಸಿ ಚಿತ್ರಗಳಿಗೆ ಲೈಕ್‌!

ಎಕ್ಸ್‌ನಲ್ಲಿ ಟೀಮ್‌ ಇಂಡಿಯಾ ಕ್ರಿಕೆಟಿಗನ ಕುರಿತಾದ ವಿಡಿಯೋ ವೈರಲ್‌ ಆಗುತ್ತಿದೆ. ಮಾಡೆಲ್‌ಗಳು, ನಟಿಯರ ಹಾಟ್‌ ಹಾಗೂ ಹಸಿಬಿಸಿ ಫೋಟೋಗಳಿಗೆ ಲೈಕ್‌ ಒತ್ತಿರುವುದು ಇದರಲ್ಲಿ ದಾಖಲಾಗಿದೆ. ಅವರೇ ಮಾಡಿದ್ದೋ ಅಥವಾ ಅವರ ಅಕೌಂಟ್‌ ಹ್ಯಾಕ್ ಆಗಿದೆಯೋ ಎನ್ನುವ ಅನುಮಾನ ಎಲ್ಲರಲ್ಲೂ ಕಾಡಿದೆ.
 

What is the reason Lord Shivam Mavi is trending heavily on social media san
Author
First Published Dec 29, 2023, 9:00 PM IST

ಬೆಂಗಳೂರು (ಡಿ.29): ಸೋಶಿಯಲ್‌ ಮೀಡಿಯಾದಲ್ಲಿ ಟೀಮ್‌ ಇಂಡಿಯಾ ಯುವ ವೇಗಿ ಟ್ರೆಂಡ್‌ ಆಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಒಳ್ಳೆಯ ವಿಚಾರಕ್ಕಾಗಿ ಈತ ಸುದ್ದಿಯಾಗುತ್ತಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಮಾಡಿಕೊಂಡಿರುವ ಎಡವಟ್ಟಿನ ಕಾರಣದಿಂದಾಗಿ ಇವರು ಸುದ್ದಿಯಾಗಿದ್ದಾರೆ. ಹೌದು, ಇತ್ತೀಚೆಗೆ ಐಪಿಎಲ್‌ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವ ಟೀಮ್‌ ಇಂಡಿಯಾದ ಉವ ವೇಗಿ ಶಿವಂ ಮಾವಿ ಅವರನ್ನು 'ಲಾರ್ಡ್‌ ಶಿವಂ ಮಾವಿ' ಎನ್ನುವ ಹ್ಯಾಶ್‌ಟ್ಯಾಗ್‌ ಬಳಸಿ ಟ್ರೋಲ್‌ ಮಾಡುತ್ತಿದ್ದಾರೆ. ಇದರಿಂದಾಗಿ ಶಿವಂ ಮಾವಿ ಎಕ್ಸ್‌ನಲ್ಲಿ ದಿನಪೂರ್ತಿ ಟ್ರೆಂಡಿಂಗ್‌ನಲ್ಲಿದ್ದರು. ಇನ್ನು ಈ ಹ್ಯಾಶ್‌ಟ್ಯಾಗ್‌ನ ಕ್ಲಿನಕ್‌ ಮಾಡಿದರೆ, ಸಾಕಷ್ಟು ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಪ್ರಮುಖವಾಗಿ ಶಿವಂ ಮಾವಿ ಅವರ ಟ್ವಿಟರ್‌ ಪೇಜ್‌ಅನ್ನು ರೆಕಾರ್ಡ್‌ ಮಾಡಿರುವುದು ಕಾಣಿಸಿಕೊಳ್ಳುತ್ತದೆ. ಇದು ಸ್ವತಃ ಶಿವಂ ಮಾವಿ ಅವರ ಎಕ್ಸ್‌ ಪೇಜ್‌ ಎನ್ನೋದಕ್ಕೆ ಅವರ ಪೇಜ್‌ಗೆ ಬ್ಲ್ಯೂಟಿಕ್‌ ಕೂಡ ಇದೆ.
 

ಇನ್ನು ಆ ವಿಡಿಯೋದಲ್ಲಿ ಭಾರತದ ಕೆಲವು ನಟಿಯರಾದ ಮೃಣಾಲ್‌ ಠಾಕೂರ್‌,  ಜಾನ್ಹವಿ ಕಪೂರ್‌, ಇಶಾ ಗುಪ್ತಾ ಅವರ ಹಾಟ್‌ ಫೋಟೋಗಳು ಹಾಗೂ ಇತರ ಮಾಡೆಲ್‌ಗಳ ಹಸಿಬಿಸಿ ಚಿತ್ರಗಳನ್ನು ಶಿವಂ ಮಾವಿ ಅಕೌಂಟ್‌ನಿಂದ ಲೈಕ್‌ ಮಾಡಿದ್ದು ಮಾತ್ರವಲ್ಲದೆ ಶೇರ್‌ ಮಾಡಿದ್ದು ಕಂಡಿದೆ. ಇದಾದ ಬಳಿಕ ಶಿವಂ ಮಾವಿ ತಮ್ಮ ಟ್ವಿಟರ್‌ ಖಾತೆಯನ್ನು ಪ್ರೈವೇಟ್‌ನಲ್ಲಿ ಇರಿಸಿದ್ದಾರೆ. ಇನ್ನು ಶಿವಂ ಮಾವಿ ತನ್ನ ಅಕೌಂಟ್‌ಅನ್ನು ಪ್ರೈವೇಟ್‌ ಮಾಡುವ ಮುನ್ನವೇ ಸಾಕಷ್ಟು ಮಂದಿ ಅವರ ಪೇಜ್‌ಗೆ ಕಾಮೆಂಟ್‌ ಮಾಡಿ, ನಿಮ್ಮ ಅಕೌಂಟ್‌ ಹ್ಯಾಕ್‌ ಆಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಶಿವಂ ಮಾವಿ ಅವರ ಅಕೌಂಟ್‌ನ ಸ್ಕ್ರೀನ್‌ ರೆಕಾರ್ಡ್‌ ಎಕ್ಸ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ. ಈ ಸುದ್ದಿ ಬರೆಯುವ ವೇಳೆಗೆ ಈ ವಿಡಿಯೋವನ್ನು 1.27 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ಬಂದಿರುವ ಕಾಮೆಂಟ್‌ಗಳ ಪೈಕಿ ಹೆಚ್ಚಿನವರು, ಬಹುತೇಕ ಮಂದಿ ಶಿವಂ ಮಾವಿ ತಮ್ಮ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಹೇಳಬೇಕು ಎಂದು ಒತ್ತಾಯಿಸುತ್ತಿರುವಂತೆ ಕಂಡಿದೆ ಎಂದಿದ್ದಾರೆ.  'ಒಕೆ ಬ್ರದರ್‌, ನೀವು ಯುವತಿಯರ ಚಿತ್ರಗಳಿಗೆ ಲೈಕ್‌ ಒತ್ತಿದ್ದೀರಿ ಇದು ಖುಷಿಯ ವಿಚಾರ. ಹಾಗೇನಾದರೂ ನೀವು ಯುವಕರ ಚಿತ್ರಕ್ಕೆ ಲೈಕ್‌ ಒತ್ತಿದ್ದರೆ ಆಗ ಅನುಮಾನ ಕಾಡುತ್ತಿತ್ತು' ಎಂದು ಹೇಳಿದ್ದಾರೆ.


ಶಿವಂ ಮಾವಿ ಟೀಮ್‌ ಇಂಡಿಯಾ ಕ್ರಿಕೆಟಿಗ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತದ ಪರವಾಗಿ ಅಂತಾರಾಷ್ಟ್ರೀಯ ಟಿ20ಯಲ್ಲಿ 6 ಪಂದ್ಯಗಳಲ್ಲಿ ಶಿವಂ ಮಾವಿ ಆಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಅವರು 32 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಪ್ರತಿನಿಧಿಸಿರುವ ಶಿವಂ ಮಾವಿ ಅವರನ್ನು ಕಳೆದ ಐಪಿಎಲ್‌ ಹರಾಜಿನಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ ತಂಡ 6.40 ಕೋಟಿಗೆ ಖರೀದಿ ಮಾಡಿದೆ. ಶಿವಂ ಮಾವಿ ಅವರ ಎಕ್ಸ್ ಖಾತೆಯಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಕೊನೆಯ ಪೋಸ್ಟ್ ಅನ್ನು ಡಿಸೆಂಬರ್ 19 ರಂದು ಮಾಡಲಾಗಿದೆ. ಇದರಲ್ಲಿ ಅವರು ಐಪಿಎಲ್ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯಸಭಾ ಸಂಸದ ರಾಜೀವ್ ಶುಕ್ಲಾ ಅವರ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿದ್ದರು. ವಿವಿಧ ಫ್ರಾಂಚೈಸಿಗಳಿಗೆ ಐಪಿಎಲ್ ಪಂದ್ಯಗಳಲ್ಲಿ ಆಡಲು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಆಯ್ಕೆಯಾದ 11 ಆಟಗಾರರ ತಂಡವನ್ನು ರಾಜೀವ್‌ ಶುಕ್ಲಾ ಪೋಸ್ಟ್‌ ಮಾಡಿದ್ದರು.

ತೃಪ್ತಿ ದಿಮ್ರಿಗಿಂತಲೂ ಬೋಲ್ಡ್‌, 90ರ ದಶಕದಲ್ಲೇ ಇಂಟಿಮೇಟ್‌ ಸೀನ್‌ನಲ್ಲಿ ನಟಿಸಿ ವಿವಾದಕ್ಕೀಡಾಗಿದ್ದ ನಟಿ!

ಇನ್ನು ತಮ್ಮ ಎಕ್ಸ್‌ ಪೇಜ್‌ನ ವಿಚಾರವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಅವರ ಸೋಶಿಯಲ್‌ ಮೀಡಿಯಾವನ್ನು ಫಾಲೋ ಮಾಡಿರುವ ವ್ಯಕ್ತಿಗಳ ಪ್ರಕಾರ, ಡಿಸೆಂಬರ್‌ನ ಮಧ್ಯಭಾಗದಲ್ಲಿಯೇ ಅವರ ಅಕೌಂಟ್‌ ಹ್ಯಾಕ್‌ ಆಗಿರಬಹುದು ಎಂದು ಅಂದಾಜಿಸಿದ್ದಾರೆ.

ಈ ವಾರ ಬಿಗ್‌ಬಾಸ್‌ನಲ್ಲಿ ಡ್ರೋನ್ ಪ್ರತಾಪ್‌ನದ್ದೇ ಹಾರಾಟ, ಹರಿದುಬಂತು ಜನಪ್ರೀತಿ!

Latest Videos
Follow Us:
Download App:
  • android
  • ios