Nature Wonder : ನೋಡು ನೋಡುತ್ತಿದ್ದಂತೆ ಹಿಮವಾಯ್ತು ಹರಿಯುತ್ತಿದ್ದ ಹೊಳೆ... ಇಲ್ಲಿದೆ ವಿಡಿಯೋ
- ಹಿಮವಾಯ್ತು ಹರಿಯುತ್ತಿದ್ದ ನದಿ
- ಕೆನಡಾದ ಸ್ಕ್ವಾಮಿಶ್‌ನಲ್ಲಿ ಪ್ರಕೃತಿ ವೈಚಿತ್ರ್ಯ
- ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ
ಕೆನಡಾ(ಜ.3): ಹರಿಯುತ್ತಿರುವ ನದಿಯ ನೀರು ತನ್ನಷ್ಟಕ್ಕೆ ಗಟ್ಟಿಯಾಗುತ್ತಾ ಹೋಗುತ್ತಿರುವ ದೃಶ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ. ಕಳೆದೊಂದು ವಾರದಲ್ಲಿ ಕೆನಡಾದ ತಾಪಮಾನ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಇದರ ಪರಿಣಾಮ ನೀರು ಗಟ್ಟಿಯಾಗುತ್ತಿದೆ. ವ್ಯಾಂಕೋವರ್ (Vancouver) ಸೇರಿದಂತೆ ಸ್ಕ್ವಾಮಿಶ್ (Squamish) ಮತ್ತು ಹತ್ತಿರದ ಪ್ರದೇಶಗಳು ಕಳೆದ ವಾರದಲ್ಲಿ ಇದುವರೆಗಿನ ದಾಖಲೆ ಮುರಿಯುವಷ್ಟು ಶೀತ ತಾಪಮಾನಕ್ಕೆ ಸಾಕ್ಷಿಯಾಗಿದೆ.
ಪರಿಣಾಮ ಅಪರೂಪ ಎನಿಸುವ ಪ್ರಕೃತಿ ವೈಚಿತ್ರ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹರಿಯುತ್ತಿರುವ ನೀರು ಸ್ವಲ ಸ್ವಲ್ಪವೇ ಗಟ್ಟಿಯಾಗಿ ಹೊಳೆಯೇ ಪೂರ್ತಿ ಮಂಜುಗಡ್ಡೆಯಾಗುವ ದೃಶ್ಯ ವಿಡಿಯೋದಲ್ಲಿ ಕಾಣಿಸುತ್ತಿದೆ. ಕೆನಡಾದ ಸ್ಕ್ವಾಮಿಶ್‌ನಲ್ಲಿ ಈ ಪ್ರಾಕೃತಿಕ ಅದ್ಭುತವೊಂದು ನಡೆದಿದೆ. ತಾಪಮಾನವು ಹೊಸ ಕನಿಷ್ಠ ಮಟ್ಟಕ್ಕೆ ಇಳಿದಾಗ, ಅಪರೂಪದ ಫ್ರೆಜಿಲ್ ಐಸ್ ಎಂದು ಕರೆಯಲ್ಪಡುವ ಪ್ರಕ್ರಿಯೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಬ್ರಾಡ್ ಅಚಿಸನ್ ( Brad Atchison) ಎಂಬವರು ಪೋಸ್ಟ್ ಮಾಡಿದ್ದಾರೆ. ಸ್ಕ್ವಾಮಿಶ್‌ನಲ್ಲಿರುವ ಶಾನನ್ ( Shannon) ಫಾಲ್ಸ್‌ನಲ್ಲಿ ಕಂಡು ಬಂದ ಅಪರೂಪವಾದ ಫ್ರೆಜಿಲ್ ಐಸ್ ಆಗಿದೆ. ಹೊಳೆಯೊಂದು ನಿಮ್ಮ ಕಣ್ಣುಗಳ ಮುಂದೆ ತಕ್ಷಣವೇ ಕಣ್ಮರೆಯಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.
ವೀಡಿಯೊ ನಕಲಿ ಎಂಬ ಊಹಾಪೋಹಗಳು ಕೇಳಿ ಬಂದ ಹಿನ್ನೆಲೆ ಈ ವಿಚಾರವನ್ನು ಅಲ್ಲಗಳೆದ ಅಚಿನ್ಸನ್, ಇಲ್ಲಿ ನನ್ನ ಅನುಯಾಯಿಗಳಿಗಾಗಿ. ನಾನು ಮೂಲ ವೀಡಿಯೊವನ್ನು ಸ್ವಲ್ಪಮಟ್ಟಿಗೆ ಜೂಮ್ ಮಾಡಿದ್ದೇನೆ. ಕೆಲವೇ ಜನರು ಅದನ್ನು ನಕಲಿ ಎಂದು ಭಾವಿಸಿದ್ದರು ಮತ್ತು ಕೆಲವರು ವ್ಯತಿರಿಕ್ತವಾಗಿದೆ ಎಂದಿದ್ದರು. ಆದರೆ ಖಂಡಿತವಾಗಿಯೂ ಇದು ನಕಲಿ ಅಲ್ಲ. ಹಾಗಿದ್ದಲ್ಲಿ ನಾನು ಅದನ್ನು ಎಂದಿಗೂ ಪೋಸ್ಟ್ ಮಾಡುತ್ತಿರಲಿಲ್ಲ ಎಂದು ಅಚಿಸನ್ ಹೇಳಿದ್ದಾರೆ.
ಹಿಮದಲ್ಲಿ ಆನೆ ಮರಿಯ ಆಟ... ಮನಮೋಹಕ ದೃಶ್ಯ ವೈರಲ್
ಈ ವೀಡಿಯೋವನ್ನು ಇದುವರೆಗೆ 8 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಿದ ನೆಟ್ಟಿಗರು ಬೆರಗಾಗಿದ್ದು, ಅದ್ಭುತ ನಾನು ಅದರ ಬಗ್ಗೆ ಎಂದಿಗೂ ಕೇಳಿಲ್ಲ ಆದರೆ ಅದು ಗಂಭೀರವಾಗಿ ತಂಪಾಗಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.ವ್ಯಾಂಕೋವರ್ ಸೇರಿದಂತೆ ಸ್ಕ್ವಾಮಿಶ್ ಮತ್ತು ಹತ್ತಿರದ ಪ್ರದೇಶಗಳು ಕಳೆದ ವಾರದಲ್ಲಿ ದಾಖಲೆ ಮುರಿಯುವ ಶೀತ ತಾಪಮಾನಕ್ಕೆ ಸಾಕ್ಷಿಯಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು. ಸ್ಕ್ವಾಮಿಶ್‌ನಲ್ಲಿ ಡಿಸೆಂಬರ್ 27 ರಂದು -15C (5ºF) ತಾಪಮಾನ ದಾಖಲಾಗಿತ್ತು. ಇದು 1968 ರಲ್ಲಿ ದಾಖಲಾಗಿದ್ದ ಹಿಂದಿನ ದಾಖಲೆ-12.8º(ಅಂದಾಜು 9ºF) ದಾಖಲೆಯನ್ನು ಮುರಿದಿದೆ ಎಂದು ತಿಳಿದು ಬಂದಿದೆ.
ದಿ ವೆದರ್ ನೆಟ್‌ವರ್ಕ್ (The Weather Network)ನ ಹವಾಮಾನ ಶಾಸ್ತ್ರಜ್ಞ ಜೆಸ್ಸಿ ಉಪ್ಪಲ್ (Jessie Uppal) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿರುವುದು ನಿಜಕ್ಕೂ ಅಪರೂಪದ ವಿದ್ಯಮಾನವಾಗಿದ್ದು, ಜಲಮೂಲಗಳು ಅತ್ಯಂತ ಶೀತ ತಾಪಮಾನವನ್ನು ಅನುಭವಿಸಿದಾಗ ಸಂಭವಿಸುವ ಅಪರೂಪದ ವಿದ್ಯಮಾನ ಇದಾಗಿದೆ ಎಂದು ವಿವರಿಸಿದರು.
Military Clothing System: -50ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಸೇನಾ ಉಡುಪು ಭಾರತದಲ್ಲೇ ಅಭಿವೃದ್ಧಿ!
ಈ ಹೊಳೆಗಳ ಸುತ್ತಲಿನ ಗಾಳಿಯ ಉಷ್ಣತೆಯು ಘನೀಕರಣಕ್ಕಿಂತ(freezing) ಕಡಿಮೆಯಾಗಿದೆ ಮತ್ತು ನೀರಿಗೆ ಹೋಲಿಸಿದರೆ ಹೆಚ್ಚು ತಂಪಾಗಿರುತ್ತದೆ. ಈ ಸಣ್ಣ ನೀರಿನ ಮೂಲಗಳು ಸೂಪರ್ ಕೂಲ್ಡ್ ಆಗಿವೆ, ಅಂದರೆ ನೀರಿನ ತಾಪಮಾನವು ಅದರ ಸಾಮಾನ್ಯ ಘನೀಕರಿಸುವ ಹಂತಕ್ಕಿಂತಲೂ ಕೆಳಗೆ ಇಳಿಯುತ್ತದೆ, ಆದರೆ ದ್ರವವಾಗಿ ಉಳಿಯುತ್ತದೆ, ಎಂದು ಜೆಸ್ಸಿ ಉಪ್ಪಲ್ ಹೇಳಿಕೆಯನ್ನು ದಿ ವೆದರ್ ನೆಟ್‌ವರ್ಕ್ ಉಲ್ಲೇಖಿಸಿದೆ. ಇಲ್ಲಿಯೇ ನಾವು ನೀರಿನ ಮೇಲ್ಮೈಯಲ್ಲಿ ಐಸ್ ಸ್ಫಟಿಕಗಳ ರಚನೆಯನ್ನು ನೋಡಲು ಪ್ರಾರಂಭಿಸುತ್ತೇವೆ. ಈ ಐಸ್ ಸ್ಫಟಿಕಗಳು ಸ್ವಲ್ಪ ಮೃದುವಾಗಿರುತ್ತವೆ ಮತ್ತು ಸಣ್ಣ ರಚನೆಯನ್ನು ಹೊಂದಿರುತ್ತವೆ. ನೀರಿನ ಹರಿವು ನಿರಂತರ ಮತ್ತು ಪ್ರಕ್ಷುಬ್ಧವಾಗಿರುವುದರಿಂದ, ರೂಪುಗೊಳ್ಳುವ ಮೃದುವಾದ ಐಸ್ ಸ್ಫಟಿಕಗಳು ನೀರನ್ನು ಸಂಪೂರ್ಣವಾಗಿ ಘನೀಕರಿಸಲು ಸಾಧ್ಯವಾಗುವುದಿಲ್ಲ ಎಂದೂ ಅವರು ಹೇಳಿದರು.