Asianet Suvarna News Asianet Suvarna News

ಭಾರತದಲ್ಲಿ ನಿಂತಂತೆ ವಿದೇಶದಲ್ಲಿ ಮತ್ತೆ ಕೆಟ್ಟು ಹೋದ ಕೆನಡಾ ಪ್ರಧಾನಿ ವಿಮಾನ: 4 ತಿಂಗಳಲ್ಲಿ 2 ಬಾರಿ ಸಮಸ್ಯೆ

ಜಿ20 ಶೃಂಗಸಭೆಯ ವೇಳೆ ಜಸ್ಟಿನ್‌ ಟ್ರೂಡೋ ಆಗಮಿಸಿದ ವೇಳೆ ವಿಮಾನ ದೋಷಪೂರಿತವಾಗಿತ್ತು. ಮತ್ತು ಆ ಕಾರಣ 2 ದಿನಗಳ ಕಾಲ ವಿಳಂಬವಾಗಿ ಹೋಗಿದ್ದರು. ಈಗ ಜಮೈಕಾದಲ್ಲೂ ವಿಮಾನ ಕೆಟ್ಟು ನಿಂತಿತ್ತು.  

canadian pm justin trudeau s plane breaks down again this time in jamaica ash
Author
First Published Jan 6, 2024, 6:55 PM IST

ಹೊಸದಿಲ್ಲಿ (ಜನವರಿ 6, 2024): ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರೂಡೋ ಕಳೆದ ಬಾರಿ ಭಾರತಕ್ಕೆ ಬಂದಾಗ ಅವರ ವಿಮಾನ ಕೆಟ್ಟು ನಿಂತಿತ್ತು. ಈ ಹಿನ್ನೆಲೆ ಜಿ 20 ಶೃಂಗಸಭೆಗೆ ಬಂದಿದ್ದ ವೇಳೆ ಅವರು ಭಾರತದಿಂದ 2 ದಿನ ತಡವಾಗಿ ಹೊರಟಿದ್ದರು. ಈಗ ಕೆರಿಬಿಯನ್‌ಗೆ ಪ್ರವಾಸ ಹೋಗಿದ್ದಾಗಲೂ ಅವರ ವಿಮಾನ ಮತ್ತೆ ಕೆಟ್ಟು ನಿಂತಿದೆ.

ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೋರನ್ನು ಕೆರಿಬಿಯನ್ ದ್ವೀಪಕ್ಕೆ ಕರೆತಂದ ಮಿಲಿಟರಿ ವಿಮಾನವು ಈ ವಾರ ಜಮೈಕಾಕ್ಕೆ ಕೆನಡಾ ಸಶಸ್ತ್ರ ಪಡೆಗಳು 2ನೇ ವಿಮಾನ ಕಳಿಸಬೇಕಾಯ್ತು ಎಂದು ಸಿಬಿಸಿ ನ್ಯೂಸ್‌ ವರದಿ ಮಾಡಿದೆ. 4 ತಿಂಗಳೊಳಗೆ 2ನೇ ಬಾರಿಗೆ ಯಾಂತ್ರಿಕ ಸಮಸ್ಯೆಗಳಿಂದಾಗಿ ಟ್ರೂಡೋವನ್ನು ಸಾಗಿಸುವ ವಿಮಾನ ಹಾರಾಟ ನಡೆಸಲು ಸಾಧ್ಯವಾಗಲಿಲ್ಲ. 

ಇದನ್ನು ಓದಿ: 2 ತಿಂಗಳ ವಿರಾಮದ ಬಳಿಕ ಕೆನಡಾ ಪ್ರಜೆಗಳಿಗೆ ಇ-ವೀಸಾ ಸೇವೆ ಆರಂಭಿಸಿದ ಭಾರತ

ಜಿ20 ಶೃಂಗಸಭೆಯ ವೇಳೆ ಜಸ್ಟಿನ್‌ ಟ್ರೂಡೋ ಆಗಮಿಸಿದ ವೇಳೆ ವಿಮಾನಯಾನ ಪೂರ್ವ ತಪಾಸಣೆಯಲ್ಲಿ CC-150 ಪೋಲಾರಿಸ್‌ನಲ್ಲಿ ದೋಷಪೂರಿತವಾಗಿತ್ತು. ಮತ್ತು ಆ ಕಾರಣ 
2 ದಿನಗಳ ಕಾಲ ವಿಳಂಬವಾಗಿ ಹೋಗಿದ್ದರು. 

ಭದ್ರತಾ ಕಾರಣಗಳಿಗಾಗಿ ಮಿಲಿಟರಿ ವಿಮಾನಗಳಲ್ಲಿ ಪ್ರಯಾಣಿಸುವ ಜಸ್ಟಿನ್‌ ಟ್ರೂಡೋ, ಡಿಸೆಂಬರ್ 26 ರಂದು ಜಮೈಕಾದ ಮಾಂಟೆಗೊ ಬೇಗೆ ತನ್ನ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದ್ದರು. ಅವರು ಜನವರಿ 4 ರಂದು ಕೆನಡಾಕ್ಕೆ ಮರಳಲು ನಿರ್ಧರಿಸಿದ್ದರು. 

ಇದನ್ನೂ ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ಆದರೆ, ಜನವರಿ 2 ರಂದು ನಿರ್ವಹಣೆ ಸಮಸ್ಯೆ ಪತ್ತೆಯಾಗಿದೆ ಮತ್ತು ಜನವರಿ 3 ರಂದು ನಿರ್ವಹಣಾ ತಂಡವನ್ನು ಕಳುಹಿಸಲಾಯಿತು ಮತ್ತು ವಿಮಾನವನ್ನು ಸರ್ವೀಸ್‌ ಮಾಡಲಾಯ್ತು. ನಂತರ ಟ್ರೂಡೋ ವಿಮಾನವು ಜನವರಿ 4 ರಂದು ಕೆನಡಾಕ್ಕೆ ಮರಳಿದೆ ಎಂದು ಸರ್ಕಾರದ ವಕ್ತಾರ ಆಂಡ್ರೀ - ಆನ್ ಪೌಲಿನ್ ಮಾಹಿತಿ ನೀಡಿದ್ದರು. 

ಟ್ರೂಡೋರನ್ನು ಜಮೈಕಾಕ್ಕೆ ಕರೆತಂದ ವಿಮಾನ ಮತ್ತು ಜಮೈಕಾಕ್ಕೆ ನಿರ್ವಹಣಾ ಸಿಬ್ಬಂದಿಯನ್ನು ಕರೆತಂದ ವಿಮಾನವು 2020 ರಲ್ಲಿ ಸ್ವಾಧೀನಪಡಿಸಿಕೊಂಡ ಮಿಲಿಟರಿಯ ಎರಡು ಹೊಸ ಚಾಲೆಂಜರ್ ವಿಮಾನಗಳಾಗಿವೆ.

ಟ್ರೂಡೋ ಅವರ ವಿದೇಶ ಪ್ರವಾಸಗಳು ಕೆಲವೊಮ್ಮೆ ವಿವಾದಾತ್ಮಕವಾಗಿವೆ. 2016 ರಲ್ಲಿ ಖಾಸಗಿ ದ್ವೀಪದಲ್ಲಿ ಆಗಾ ಖಾನ್ ಅವರನ್ನು ಭೇಟಿ ಮಾಡಲು ಹೋಗಿದ್ದ ಪ್ರವಾಸದ ವೇಳೆ ಮಂತ್ರಿಗಳು ಉಡುಗೊರೆಗಳು ಅಥವಾ ಇತರ ಪ್ರಯೋಜನಗಳನ್ನು ಸ್ವೀಕರಿಸುವುದನ್ನು ನಿಷೇಧಿಸುವ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಮಾಜಿ ನೀತಿಶಾಸ್ತ್ರ ಕಮಿಷನರ್ ಮೇರಿ ಡಾಸನ್ ಕಂಡುಕೊಂಡಿದ್ದರು.

ಆದರೆ, ಆಗಾ ಖಾನ್ ಕುಟುಂಬದ ಸ್ನೇಹಿತನಾಗಿದ್ದರಿಂದ ಪ್ರವಾಸವು ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಟ್ರೂಡೋ ವಾದಿಸಿದ್ದರು. ಆದರೆ, ಅವರು ಲಿಬರಲ್ ಪಕ್ಷದ ನಾಯಕರಾಗುವ ಮೊದಲು ಟ್ರೂಡೋ ಮತ್ತು ಆಗಾ ಖಾನ್ ದಶಕಗಳವರೆಗೆ ಕಡಿಮೆ ಸಂಪರ್ಕವನ್ನು ಹೊಂದಿದ್ದರು ಎಂದು ಡಾಸನ್‌ ಹೇಳಿದ್ದರು.

Follow Us:
Download App:
  • android
  • ios