Asianet Suvarna News Asianet Suvarna News

ಅಜ್ಜನ ಸಲಹೆಯಂತೆ 18ನೇ ವರ್ಷದ ಹುಟ್ಟುಹಬ್ಬಕ್ಕೆ ಲಾಟರಿ ಖರೀದಿ, 290 ಕೋಟಿ ರೂ ಗೆದ್ದ ಯುವತಿ!

18ನೇ ವರ್ಷದ ಹುಟ್ಟುಹಬ್ಬ. ಈ ದಿನ ಯುವತಿ ಲಾಟರಿ ಖರೀದಿಸಿದ್ದಾಳೆ. ಫಲಿತಾಂಶ ಬಂದಾಗ ಅಚ್ಚರಿಯೋ ಅಚ್ಚರಿ. ಈಕೆ ಬರೋಬ್ಬರಿ 290 ಕೋಟಿ ರೂಪಾಯಿ ಗೆದ್ದಿದ್ದಾಳೆ. ಗೆದ್ದ ಹಣದಲ್ಲಿ 100 ಕೋಟಿ ರೂಪಾಯಿ ನೀಡಿ ಖಾಸಗಿ ಜೆಟ್ ಖರೀದಿಸಿದ್ದಾಳೆ

Canadian girl Wins Rs 290 Crore in Lottery on her birthday purchase rs 100 crore private jet ckm
Author
First Published Feb 7, 2023, 8:56 PM IST

ಕೆನಡಾ(ಫೆ.07): ಲಾಟರಿ ಹಲವರ ಬದುಕನ್ನೇ ಬದಲಿಸಿದೆ. ಗೆಲ್ಲಲೇಬೇಕೆಂದು ಖರೀದಿಸಿದ ಹಲವರಿಗೆ ಇದುವರೆಗೂ ಬಹುಮಾನ ಬಂದಿಲ್ಲ. ಆದರೆ ಕೆಲವರ ಅದೃಷ್ಠಕ್ಕೆ ಎಲ್ಲೆ ಇರಲ್ಲ. ಹೀಗೆ ಕೆನಡಾದ ಯುವತಿ ತನ್ನ 18ನೇ ವರ್ಷದ ಹುಟ್ಟು ಹಬ್ಬಕ್ಕೆ ಲಾಟರಿ ಖರೀದಿಸಿದ್ದಾಳೆ. ಇದೂ ಕೂಡ ತನ್ನ ಅಜ್ಜ ನೀಡಿದ ಸಲಹೆ. ಈಕೆಗೆ ಲಾಟರಿ ಖರೀದಿಸುವುದು, ಅದರಲ್ಲಿನ ನಂಬರ್ ಯಾವುದರ ಬಗ್ಗೆಯೂ ಎಳ್ಳಷ್ಟು ಜ್ಞಾನವಿಲ್ಲ. ಆದರೆ ಅಜ್ಜ ಸಲಹೆ ನೀಡಿದ್ದು ಮಾತ್ರವಲ್ಲ ಒತ್ತಾಯ ಮಾಡಿದ್ದಾರೆ. ಹೀಗಾಗಿ ಕೆನಡಾದ ಲುಟ್ಟೋ ಲಾಟರಿ ಖರೀದಿಸಿದ್ದಾಳೆ. ಬಳಿಕ ಮರೆತು ಬಿಟ್ಟಿದ್ದಾಳೆ. ಫಲಿತಾಂಶ ನೋಡಿದಾಗ ಈಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾರಣ ಬರೋಬ್ಬರಿ 290 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾಳೆ. ಈ ಕೋಟಿ ಒಡತಿಯ ಹೆಸರು ಜೂಲಿಟ್ ಲ್ಯಾಮೋರ್. 

ಜುಲಿಟ್ ಲ್ಯಾಮೋರ್ ತನ್ನ 18ನೇ ವರ್ಷದ ಹುಟ್ಟು ಹಬ್ಬದ ದಿನ ಅಜ್ಜನೊಂದಿಗೆ ಶಾಂಪಿಂಗ್ ಹೋಗಿದ್ದಾಳೆ. ಬಟ್ಟೆ, ತಿನಿಸುಗಳನ್ನು ಖರೀದಿಸಿದ್ದಾಳೆ. ಇದೇ ವೇಳೆ ಅಜ್ಜ ಲಾಟರಿ ಖರೀದಿಸುವಂತೆ ಸಲಹೆ ನೀಡಿದ್ದಾರೆ. ಆದರೆ ಲಾಟರಿ ಕುರಿತು ಯಾವುದೇ ಅರಿವಿಲ್ಲದ ಯುವತಿ ನಿರಾಕರಿಸಿದ್ದಾಳೆ. ಆದರೆ ಅಜ್ಜ ಒಂದು ಲಾಟರಿ ಖರೀದಿಸು, ನಷ್ಟವೇನು ಇಲ್ಲ ಎಂದಿದ್ದಾರೆ. ಬಳಿಕ ಅಜ್ಜನ ಸಲಹೆ ಪಡೆದು ಲಾಟರಿ ಖರೀದಿಸಿ ಮನೆಗೆ ಹಿಂತಿರುಗಿದ್ದಾಳೆ.

ವೃದ್ಧಾಪ್ಯದಲ್ಲಿ ಒಲಿದ ಲಕ್ಷ್ಮಿ: 5 ಕೋಟಿಯ ಲಾಟರಿ ಗೆದ್ದ 88ರ ಅಜ್ಜ

ಫಲಿತಾಂಶಕ್ಕೆ ಕೆಲ ತಿಂಗಳು ಬಾಕಿ ಇತ್ತು. ಹೀಗಾಗಿ ಈಕೆಗೆ ಲಾಟರಿ ಖರೀದಿಸಿರುವ ವಿಚಾರವೇ ಮರೆತು ಹೋಗಿದೆ. ಫಲಿತಾಂಶ ಬಂದಾಗಿದೆ. ಆದರೂ ಈಕೆಗೆ ಇದರ ಅರಿವಿಲ್ಲ. ಆದರೆ ನೆರಮನೆಯವರೂ ಇದೇ ಒಂಟಾರಿಯೋ ಲಾಟರಿ ಹಾಗೂ ಗೇಮಿಂಗ್ ಕಾರ್ಪೋರೇಶನ್ ಲಾಟರಿ ಖರೀದಿಸಿ ಸಾವಿರ ರೂಪಾಯಿ ಗೆದ್ದುಕೊಂಡಿದ್ದರು. ಇದರ ಸಂಭ್ರಮ ಕಾಲೋನಿಯಿಡಿ ವಿಸ್ತರಿಸಿತ್ತು. ಈ ವೇಳೆ ತಾನೂ ಲಾಟರಿ ಖರೀದಿಸಿರುವ ವಿಚಾರ ನೆನಪಿಗೆ ಬಂದಿದೆ. ತಕ್ಷಣವೇ ಆ್ಯಪ್ ಮೂಲಕ ತನ್ನ ಲಾಟರಿ ನಂಬರ್‌ಗೆ ಏನಾದರೂ ಬಹುಮಾನ ಬಂದಿದೆಯಾ ಎಂದು ನೋಡಿದ್ದಾಳೆ. 

ಜೂಲಿಟ್ ಲ್ಯಾಮೋರ್‌ಗೆ ಅಚ್ಚರಿ ಕಾದಿತ್ತು. ಸಾವಿರ, ಲಕ್ಷ ಅಲ್ಲ, ಬರೋಬ್ಬರಿ 290 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾಳೆ. ಬಹುಮಾನ ಪಡೆಯಲು ಬೇಕಾದ ಆನ್‌ಲೈನ್ ದಾಖಲೆ ಪತ್ರಗಳನ್ನು ಸಲ್ಲಿಸಿದ್ದಾಳೆ. ಕೆಲ ದಿನಗಳಲ್ಲೇ ಈಕೆಯ ಖಾತೆಗೆ ಕೋಟಿ ಕೋಟಿ ಬಹುಮಾನ ಬಣ ಜಮಾ ಆಗಿದೆ. ಬಹುಮಾನ ಮೊತ್ತ ಬಂದ ಬೆನ್ನಲ್ಲೇ ಆಕೆ ತನ್ನ ಕುಟುಂಬದ ಎಲ್ಲಾ ಸದಸ್ಯರಿಗೆ 2 ಕೋಟಿ ರೂಪಾಯಿ ಬೆಲೆಯ ಮರ್ಸಡೀಸ್ ಬೆಂಜ್ ಕಾರು ಖರೀದಿಸಿ ನೀಡಿದ್ದಾಳೆ. ಇಷ್ಟಕ್ಕೆ ಈಕೆಯ ಕನಸುಗಳು ಮುಗಿದಿಲ್ಲ. ಕುಟುಂಬ ಸದಸ್ಯರಿಗೆ 2 ಕೋಟಿ ರೂಪಾಯಿ ಕಾರು ನೀಡಿದರೆ ಈಕೆಯ ಕನಸು ಬೇರೆಯೇ ಇತ್ತು. ಬರೋಬ್ಬರಿ 100 ಕೋಟಿ ರೂಪಾಯಿ ನೀಡಿ ಖಾಸಗಿ ವಿಮಾನ ಖರೀದಿಸಿದ್ದಾಳೆ. 

55 ಕೋಟಿ ರೂ ಲಾಟರಿ ಗೆದ್ದ ದುಬೈನಲ್ಲಿರುವ ಭಾರತೀಯ ಹೋಟೆಲ್ ಉದ್ಯೋಗಿ!

40 ಕೋಟಿ ರೂಪಾಯಿ ನೀಡಿ ಲಂಡನ್‌ನಲ್ಲಿ ಮನೆ ಖರೀದಿಸಿದ್ದಾಳೆ. ಹಾಗಂತ ಎಲ್ಲಾ ಹಣವನ್ನು ಈಕೆ ಖರ್ಚು ಮಾಡಿಲ್ಲ. 150 ಕೋಟಿ ರೂಪಾಯಿ ಹಣವನ್ನು ತನ್ನ ಭವಿಷ್ಯಕ್ಕಾಗಿ ತೆಗೆದಿಟ್ಟಿದ್ದಾಳೆ. ವೈದ್ಯೆಯಾಗಬೇಕೆಂಬ ಹಂಬಲದಲ್ಲಿರುವ ಜ್ಯೂಲಿಟ್, ತಾನು ಎಲ್ಲಾ ಪರಿಶ್ರಮದೊಂದಿಗೆ ಡಾಕ್ಟರ್ ಆಗುತ್ತೇನೆ ಎಂದಿದ್ದಾಳೆ. 
 

Follow Us:
Download App:
  • android
  • ios