Asianet Suvarna News Asianet Suvarna News

'ಭಾರತ ಪಂಜಾಬ್ ಅಲ್ಲ, ನರೇಂದ್ರ ಮೋದಿ ಉಗ್ರ' ಕೆನಡಾ ದೇಗುಲದ ಮೇಲೆ ಮತ್ತೆ ಖಲಿಸ್ತಾನ ಉಗ್ರರ ಗೀಚುಬರಹ!

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಉಪಟಳ ಮುಂದುವರೆದಿದ್ದು, ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ದೇಶ ವಿರೋಧಿ ಮತ್ತು ಮೋದಿ ದ್ವೇಷದ ಹೇಳಿಕೆಗಳನ್ನು ಬರೆಯಲಾಗಿದೆ. ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಶ್ರೀ ಮಾತಾ ಭಾಮೇಶ್ವರಿ ದುರ್ಗಾ ದೇವಿ ದೇಗುಲವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. 

Canada Another hindu temple In british columbia vandalised, punjab Is not India graffiti sprayed; visuals surface rav
Author
First Published Sep 9, 2023, 6:10 AM IST

ಟೊರಂಟೋ: ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಉಪಟಳ ಮುಂದುವರೆದಿದ್ದು, ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ದೇಶ ವಿರೋಧಿ ಮತ್ತು ಮೋದಿ ದ್ವೇಷದ ಹೇಳಿಕೆಗಳನ್ನು ಬರೆಯಲಾಗಿದೆ. ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಶ್ರೀ ಮಾತಾ ಭಾಮೇಶ್ವರಿ ದುರ್ಗಾ ದೇವಿ ದೇಗುಲವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. 

ದೇಗುಲದ ಗೋಡೆ ಮೇಲೆ ಕಪ್ಪು ಬಣ್ಣದ ಸ್ಪ್ರೇ ಇಂದ ‘ಮೋದಿ ಈಸ್‌ ಟೆರರಿಸ್ಟ್‌, ಪಂಜಾಬ್‌ ಈಸ್‌ ನಾಟ್‌ ಇಂಡಿಯಾ’ (ಮೋದಿ ಓರ್ವ ಭಯೋತ್ಪಾದಕ, ಪಂಜಾಬ್‌ ಭಾರತದ ಭಾಗವಲ್ಲ) ಎಂದು ಬರೆದಿದ್ದಾರೆ. ಕಳೆದ ತಿಂಗಳು ಆಗಸ್ಟ್‌ನಲ್ಲಿ ಇದೇ ಪ್ರಾಂತ್ಯದ ಶ್ರೀ ಲಕ್ಷ್ಮೇ ನಾರಾಯಣ ಮಂದಿರವನ್ನು ಖಲಿಸ್ತಾನಿ ಉಗ್ರರು ಧ್ವಂಸಗೊಳಿಸಿದ್ದರು. ಇದರಲ್ಲಿ ಇಬ್ಬರು ಖಲಿಸ್ತಾನಿ ಉಗ್ರರು ಭಾಗಿಯಾಗಿರುವುದು ಕಂಡುಬಂದಿತ್ತು. ಹಿಂದೆ ನಡೆದ ಘಟನೆಯಲ್ಲೂ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಗೀಚು ಬರಹವನ್ನು ಬರೆದಿದ್ದ ಉಗ್ರರು ಜಿ20 ಶೃಂಗಸಭೆ

ಕೆನಡಾ ಹಿಂದೂ ದೇಗುಲಕ್ಕೆ ಮತ್ತೆ ಖಲಿಸ್ತಾನಿ ದಾಳಿ: ಒಂದೇ ವರ್ಷದಲ್ಲಿ 4ನೇ ಘಟನೆ

ಕಳೆದ ತಿಂಗಳು, ಆಗಸ್ಟ್‌ನಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ದೇವಾಲಯವನ್ನು ಧ್ವಂಸಗೊಳಿಸಲಾಯಿತು ಮತ್ತು ಇಬ್ಬರು ಖಲಿಸ್ತಾನ್ ಬೆಂಬಲಿಗರು ಘಟನೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಹಿಂದಿನ ಘಟನೆಯಲ್ಲೂ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಗೀಚುಬರಹವನ್ನು ಎರಚಲಾಗಿತ್ತು. ಇದೀಗ ಜಿ20 ಶೃಂಗಸಭೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಮತ್ತು ಪ್ರಧಾನಿ ವಿರುದ್ಧ ಬರೆದಿರುವುದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಲ್ಬರ್ನ್‌ನಲ್ಲಿ ಭಾರತದ ವಿದ್ಯಾರ್ಥಿಗಳ ಮೇಲೆ ಖಲಿಸ್ತಾನಿಗಳಿಂದ ಹಲ್ಲೆ

Follow Us:
Download App:
  • android
  • ios