ಖಲಿಸ್ತಾನಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು, ಶುಕ್ರವಾರ ಮುಂಜಾನೆ ಆಸ್ಪ್ರೇಲಿಯಾದ ಮೆಲ್ಬರ್ನ್‌ನ ಭಾರತೀಯ ವಿದ್ಯಾರ್ಥಿಗೆ 4 ರಿಂದ 5 ಖಲಿಸ್ತಾನಿಗಳು ಹಲ್ಲೆ ನಡೆಸಿದ್ದಾರೆ.
ಮೆಲ್ಬರ್ನ್: ಖಲಿಸ್ತಾನಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು, ಶುಕ್ರವಾರ ಮುಂಜಾನೆ ಆಸ್ಪ್ರೇಲಿಯಾದ ಮೆಲ್ಬರ್ನ್‌ನ ಭಾರತೀಯ ವಿದ್ಯಾರ್ಥಿಗೆ 4 ರಿಂದ 5 ಖಲಿಸ್ತಾನಿಗಳು ಹಲ್ಲೆ ನಡೆಸಿದ್ದಾರೆ. ವಿದ್ಯಾಬ್ಯಾಸದ ಜೊತೆ ಡ್ರೈವರ್ ಕೆಲಸ ಮಾಡುತ್ತಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಮುಂಜಾನೆ 5:30ರ ಸುಮಾರಿಗೆ ವಾಹನದಲ್ಲಿ ಕುಳಿತಿದ್ದ. ಈ ವೇಳೆ ಕಬ್ಬಿಣದ ಸರಳುಗಳನ್ನು ಹಿಡಿದು ಬಂದು 4 ರಿಂದ 5 ಖಲಿಸ್ತಾನಿ ಉಗ್ರರು ಯುವಕನ ತಲೆ, ಬೆನ್ನು ಹಾಗೂ ಕಾಲುಗಳಿಗೆ ತೀವ್ರವಾಗಿ ಹಲ್ಲೆ ನಡೆಸಿದರು. ಜೊತೆಗೆ ಖಲಿಸ್ತಾನಿಗಳನ್ನು ವಿರೋಧಿಸಿದರೆ ಇನ್ನು ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಬಳಿಕ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಖಲಿಸ್ತಾನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ವಿದೇಶಗಳಲ್ಲಿ ಖಾಲಿಸ್ತಾನಿ ಉಗ್ರರ ಉಪಟಳ ತೀವ್ರವಾಗಿದೆ. ಕಳೆದ ಮಾರ್ಚ್‌ನಲ್ಲಿ ಖಾಲಿಸ್ತಾನಿ ಉಗ್ರರು ಲಂಡನ್‌ನಲ್ಲಿರುವ ಭಾರತೀಯ ಹೈಕಮೀಷನರ್ ಕಚೇರಿಯಲ್ಲಿ ಹಾರಿಸಲಾಗಿದ್ದ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಅಲ್ಲಿ ಖಲಿಸ್ತಾನ್ ಧ್ವಜ ಹಾರಿಸುವ ಯತ್ನ ಮಾಡಿದ್ದಾರೆ. ಕಚೇರಿಯ ಗಾಜುಗಳನ್ನು ಒಡೆದ ಖಲಿಸ್ತಾನಿ ಬೆಂಬಲಿಗ ಪಡೆ ಬಳಿಕ ಕಚೇರಿಯ ಮುಂದೆ ಹಾರಿಸಿದ್ದ ಭಾರತದ ರಾಷ್ಟ್ರಧ್ವದ ಕೆಳಗಿಳಿಸಿ ತನ್ನ ಧ್ವಜ ಹಾರಿಸುವ ಕೆಲಸ ಮಾಡಿದೆ. ಜೊತೆಗೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆ ಕೂಗಿದೆ. ಈ ವೇಳೆ ಭಾರತೀಯ ಹೈಕಮೀಷನರ್ ಕಚೇರಿಯ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಧಾವಿಸಿ ಖಲಿಸ್ತಾನಿ ಧ್ವಜ ಹಾರಿಸುವ ಯತ್ನವನ್ನು ವಿಫಲಗೊಳಿಸಿದ್ದರು.
ಭಾರತದ ಸೇಡು..ರಸ್ತೆ ಅಪಘಾತದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸಾವು?
ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾರತ ಸರ್ಕಾರ (Indian government) ನವದೆಹಲಿಯಲ್ಲಿನ ಬ್ರಿಟನ್ ರಾಯಭಾರ (British Embassy)ಕಚೇರಿ ಹಿರಿಯ ಅಧಿಕಾರಿಯನ್ನು ಕರೆಸಿ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಜೊತೆಗೆ ಲಂಡನ್ ಕಚೇರಿಗೆ ಸೂಕ್ತ ಭದ್ರತೆ ನೀಡದೇ ಇರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿತ್ತು.ಇದಕ್ಕೂ ಮೊದಲು ಆಸ್ಪ್ರೇಲಿಯಾದಲ್ಲಿಯೂ ಖಲಿಸ್ತಾನಿ ಬೆಂಬಲಿಗರು ಹಿಂದೂ ದೇಗುಲಗಳ ಮೇಲೆ ದ್ವೇಷದ ಬರಹ ಬರೆದಿದ್ದರು. ಜೊತೆಗೆ ಮೆಲ್ಬರ್ನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿನ ಧ್ವಜ ಇಳಿಸಿ ದುಷ್ಕೃತ್ಯ ಮರೆದಿದ್ದರು.
