Asianet Suvarna News Asianet Suvarna News

ಕಣ್ಣೆದುರೇ ಇದ್ರು ಕಾಣ್ಸಲ್ಲ....! ವೈರಲ್ ಆಗ್ತಿರೋ ಫೋಟೋದಲ್ಲಿ ಹಾವು ಹುಡುಕ್ಬಹುದಾ?

ಲಾಕ್‌ಡೌನ್ ನಡುವೆ ಮನೆಯಲ್ಲಿರುವವರಿಗೊಂದು ಚಾಲೆಂಜ್| ಕಣ್ಣೆದುರಿರುವ ಹಾವಿಗೆ ಆರಂಭವಾಗಿದೆ ಹುಡುಕಾಟ| ವೈರಲ್ ಆಗ್ತಿರೋ ಫೋಟೋದಲ್ಲಿ ನೀವು ಹುಡುಕಬಲ್ಲಿರಾ ಹಾವನ್ನು?
Can you spot the snake in this viral pic all are busy in finding it
Author
Bangalore, First Published Apr 16, 2020, 3:24 PM IST
ಕ್ಯಾನ್‌ಬೆರಾ(ಏ.16): ಹಲವಾರು ಬಾರಿ ಅನೇಕ ವಿಚಾರಗಳು, ವಸ್ತುಗಳು ನಮ್ಮ ಕಣ್ಣೆದುರಿಗೇ ಇದ್ದರೂ ಕಾಣಿಸುವುದಿಲ್ಲ. ಕೇವಲ ನಾವು ಹುಡುಕಾಡುವ ಸಂಗತಿ ಬಿಟ್ಟು ಬೇರೆ ಎಲ್ಲಾ ವಿಚಾರಗಳೂ ಕಾಣ ಸಿಗುತ್ತವೆ. ಸದ್ಯ ವೈರಲ್ ಆಗುತ್ತಿರುವ ಫೋಟೋ ಕುಡಾ ಇಂತಉದೇ ಅನುಭವ ನೀಡುತ್ತದೆ. ಲಾಕ್‌ಡೌನ್‌fನಲ್ಲಿ ಹೊರಗೆ ಓಡಾಡಲಾಗದೇ  ಮನೆಯಲ್ಲೇ ಉಳಿದು ಬೇಜಾರಾದ ಜನ ಇಂತಹ ಕೆಲ ಚಾಲೆಂಜ್‌ಗಳಿಗೆ ಉತ್ತರ ಕಂಡುಕೊಂಡುವಲ್ಲಿ ಬ್ಯೂಸಿಯಾಗಿದ್ದಾರೆ. 



ಹೌದು ಸದ್ಯ ಗಿಡ ಮರಗಳಿರುವ ಕಾಡಿನ ಫೋಟೋ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿ ಅಡಗಿರುವ ಹಾವು ನಿಮಗೆ ಕಾಣಿಸುತ್ತಾ ಎಂಬ ಚಾಲರೆಂಜ್ ನಿಡಲಾಗಿದೆ. ಅನೇಕ ಮಂದಿ ಈ ಹಾವು ಹುಡುಕುವಲ್ಲಿ ತಲ್ಲೀನರಾಗಿದ್ದಾರೆ. ಹಾಗಾದ್ರೆ ನೀವೂ ಹುಡುಕುತ್ತೀರಾ ಹಾವನ್ನು?

ಚಿರತೆ ಆಯ್ತು ಈಗ ಹಾವಿನ ಸರದಿ!: ಫೋಟೋದಲ್ಲಿರುವ ಹಾವು ನಿಮ್ಗೂ ಕಾಣಿಸ್ತಾ?

ಆಸ್ಟ್ರೇಲಿಯಾದ ಸ್ನೇಕ್ ಕ್ಯಾಚರ್ಸ್ ನಾರ್ದರ್ನ್ ರಿವರ್ಸ್ 24/7 ಎಂಬ ಫೇಸ್‌ಬುಕ್‌ ಪೇಜ್‌ನಲಲಿ ಶೇರ್ ಮಾಡಲಾಗಿದ್ದು, ಸದ್ಯ ಭಾರೀ ವೈರಲ್ ಆಗಿದೆ. ಅಲ್ಲದೇ ನೀವು ಕೂಡಾ ಹಾವನ್ನು ಹುಡುಕಿ, ನಿಮಗೂ ಕಂಡು ಬರುತ್ತಾ? ಎಂದು ನೊಡೋಣ ಎಂಬ ಸಂದೇಶವನ್ನೂ ಬರೆಯಲಾಗಿದೆ.



ಇನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬಂದ ಹಾವಿನ ಫೋಟೋವನ್ನು ಮಾರ್ಕ್ ಮಾಡಿ ಹಲವಾರು ಮಂದಿ ಈ ಸವಾಲಿಗೆ ಉತ್ತರಿಸಿದ್ದಾರೆ. ಇನ್ನು ಸವಾಲೆಸೆದ ಫೇಸ್‌ಬುಕ್‌ ಪೇಜ್‌ನಲ್ಲೂ ಹಾವನ್ನು ಮಾರ್ಕ್‌ ಮಾಡಿ ನೆಟ್ಟಿಗರ ಗೊಂದಲ ನಿವಾರಿಸಲಾಗಿದೆ.
Follow Us:
Download App:
  • android
  • ios