ಕ್ಯಾಲಿಫೋರ್ನಿಯಾ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಜಪಾನ್‌ನ್ನು ಮೀರಿಸಿದೆ. $4.1 ಟ್ರಿಲಿಯನ್ ಜಿಡಿಪಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯೇ ಕಾರಣ. ಗವರ್ನರ್ ನ್ಯೂಸಮ್ ಸಾಧನೆಯನ್ನು ಶ್ಲಾಘಿಸಿದರೂ, ಟ್ರಂಪ್‌ರ ಸುಂಕ ನೀತಿಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಈ ಶ್ರೇಯಾಂಕ ತಾತ್ಕಾಲಿಕವಾಗಿರಬಹುದು, ಭಾರತ ಶೀಘ್ರದಲ್ಲೇ ಮೀರಿಸಬಹುದು.

ಕ್ಯಾಲಿಫೋರ್ನಿಯಾ ರಾಜ್ಯವು ಜಗತ್ತಿನಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಡೆಮಾಕ್ರಟಿಕ್ ಪಕ್ಷದ ಗವರ್ನರ್ ಗ್ಯಾವಿನ್ ನ್ಯೂಸಮ್ ಹೇಳಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಯಿಂದಾಗಿ, ಈ ಸಾಧನೆ ಸಾಧ್ಯವಾಯಿತು. ಕ್ಯಾಲಿಫೋರ್ನಿಯಾ ಈಗ ಜಪಾನ್ ನನ್ನು ಮೀರಿದ್ದು, ಅಮೆರಿಕ, ಚೀನಾ ಮತ್ತು ಜರ್ಮನಿಯ ನಂತರ ಸ್ಥಾನ ಪಡೆದಿದೆ.

ಇತ್ತೀಚೆಗೆ ಬಿಡುಗಡೆಯಾದ ಐಎಂಎಫ್ ದೇಶಮಟ್ಟದ ದತ್ತಾಂಶ ಮತ್ತು ಯುಎಸ್ ಬ್ಯೂರೋ ಆಫ್ ಎಕನಾಮಿಕ್ ಅನಾಲಿಸಿಸ್‌ನ ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಯಾಲಿಫೋರ್ನಿಯಾದ 2024ರ ನಾಮಮಾತ್ರ ಜಿಡಿಪಿ $4.1 ಟ್ರಿಲಿಯನ್ ತಲುಪಿದ್ದು, ಜಪಾನ್‌ನ $4.02 ಟ್ರಿಲಿಯನ್ ಜಿಡಿಪಿಯನ್ನು ಮೀರಿಸಿದೆ.

ಟ್ರಂಪ್ ಆಡಳಿತದ ನೀತಿ: ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ, ವಿಮಾನ ಟಿಕೆಟ್ ದರದಲ್ಲಿಯೂ ಕುಸಿತ

"ಕ್ಯಾಲಿಫೋರ್ನಿಯಾ ಕೇವಲ ಜಗತ್ತಿನೊಂದಿಗೆ ಹೆಜ್ಜೆ ಹಾಕುತ್ತಿಲ್ಲ, ನಾವು ವೇಗವನ್ನು ನಿರ್ಧರಿಸುತ್ತಿದ್ದೇವೆ," ಎಂದು ನ್ಯೂಸಮ್ ಹೇಳಿದರು. ಅವರು ಜನರ ಮೇಲೆ ಹೂಡಿಕೆ, ಪರಿಸರ ಸುಸ್ಥಿರತೆಗೆ ಆದ್ಯತೆ ಮತ್ತು ನಾವೀನ್ಯತೆಯ ಶಕ್ತಿಯನ್ನು ನಂಬುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ನ್ಯೂಸಮ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ "ಅಜಾಗರೂಕ ಸುಂಕ ನೀತಿಗಳು" ರಾಜ್ಯದ ಆರ್ಥಿಕತೆಯನ್ನು ಹಾನಿಗೊಳಿಸುತ್ತಿವೆ ಎಂದು ಎಚ್ಚರಿಸಿದರು. ಅವರು, "ಕ್ಯಾಲಿಫೋರ್ನಿಯಾದ ಆರ್ಥಿಕತೆಯು ರಾಷ್ಟ್ರಕ್ಕೆ ಶಕ್ತಿ ತುಂಬುತ್ತದೆ. ಅದನ್ನು ರಕ್ಷಿಸಬೇಕಾಗಿದೆ," ಎಂದು ಹೇಳಿದರು.

ಕ್ಯಾಲಿಫೋರ್ನಿಯಾದ ಆರ್ಥಿಕತೆ ಅಮೆರಿಕದ ಒಟ್ಟು ಜಿಡಿಪಿಯ ಸುಮಾರು 14% ರಷ್ಟು ಇದೆ ಎಂದು ಕ್ಯಾಲಿಫೋರ್ನಿಯಾ ಪಬ್ಲಿಕ್ ಪಾಲಿಸಿ ಇನ್ಸ್ಟಿಟ್ಯೂಟ್ ತಿಳಿಸಿದೆ. ತಂತ್ರಜ್ಞಾನ, ಹಣಕಾಸು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಹಿನ್ನಲೆ. ವರ್ಷಗಳ ಕುಸಿತದ ನಂತರ, 2024ರಲ್ಲಿ ಕ್ಯಾಲಿಫೋರ್ನಿಯಾದ ಜನಸಂಖ್ಯೆ 2.5 ಲಕ್ಷ ಜನರಷ್ಟು ಬೆಳೆದಿದ್ದು, ಜನನ ದರದ ಚೇತರಿಕೆ ಮತ್ತು ಅಂತರರಾಷ್ಟ್ರೀಯ ವಲಸೆ ಇದರ ಕಾರಣವಾಗಿದೆ.

ಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್

ಇತ್ತ, ನ್ಯೂಸಮ್ ಟ್ರಂಪ್ ಅವರ ತುರ್ತು ಅಧಿಕಾರ ಬಳಸಿಕೊಂಡು ಜಾರಿಗೆ ತಂದ ಸುಂಕಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಈ ಸುಂಕಗಳು ಮೆಕ್ಸಿಕೋ, ಚೀನಾ ಮತ್ತು ಕೆನಡಾ ದೇಶಗಳಿಂದ ಆಮದುಮಾಡುವ ಸರಕುಗಳ ಮೇಲೆ ಹೇರಲಾಗಿದೆ. ಇದರಿಂದ ಕ್ಯಾಲಿಫೋರ್ನಿಯಾದ ಆರ್ಥಿಕತೆ, ಪೂರೈಕೆ ಸರಪಳಿ ಮತ್ತು ವ್ಯವಹಾರಗಳಿಗೆ ಹಾನಿಯಾಗುತ್ತಿದೆ ಎಂದು ಅವರು ವಾದಿಸಿದ್ದಾರೆ. 

ಟ್ರಂಪ್ ಈ ಸುಂಕಗಳನ್ನು ಅಂತರರಾಷ್ಟ್ರೀಯ ಆರ್ಥಿಕ ತುರ್ತು ಅಧಿಕಾರ ಕಾಯ್ದೆಯ (IEEPA) ಅಡಿಯಲ್ಲಿ ಜಾರಿಗೊಳಿಸಿದ್ದಾರೆ. ಆದರೆ, ನ್ಯೂಸಮ್ ಅವರ ಪ್ರಕಾರ, ಇಂತಹ ವಿಸ್ತೃತ ಕ್ರಮಗಳಿಗೆ ಕಾಂಗ್ರೆಸ್‌ನ ಅನುಮೋದನೆ ಅಗತ್ಯವಿದೆ. ಇಲ್ಲದೆ ಬಲಾತ್ಕಾರವಾಗಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ನಾಸಾದಲ್ಲಿ ಭಾರತೀಯ ಮೂಲದ ನೀಲಾ ರಾಜೇಂದ್ರ ವಜಾ: ಕಾರಣವೇನು?

ಕ್ಯಾಲಿಫೋರ್ನಿಯಾ 2024ರಲ್ಲಿ ಸುಮಾರು $675 ಶತಕೋಟಿ ಮೌಲ್ಯದ ದ್ವಿಮುಖ ವ್ಯಾಪಾರ ನಡೆಸಿದ್ದು, ಮೆಕ್ಸಿಕೋ, ಕೆನಡಾ ಮತ್ತು ಚೀನಾ ಪ್ರಮುಖ ವ್ಯಾಪಾರ ಪಾಲುದಾರರಾಗಿದ್ದಾರೆ. ರಾಜ್ಯದ ಆಮದುಗಳಲ್ಲಿ ಸುಮಾರು 40% ಈ ದೇಶಗಳಿಂದ ಬಂದಿದೆ. ಇನ್ನು ಶ್ವೇತಭವನವು ಈ ಮೊಕದ್ದಮೆಯನ್ನು "ಮಾಟಗಾತಿ ಬೇಟೆ" ಎಂದು ಬಣ್ಣಿಸಿದರೂ ಇನ್ನೂ ಹನ್ನೆರಡು ರಾಜ್ಯಗಳು ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡಿವೆ. ಆದಾಗ್ಯೂ, ಕ್ಯಾಲಿಫೋರ್ನಿಯಾದ ಹೊಸ ಶ್ರೇಯಾಂಕವು ಅಲ್ಪಕಾಲಿಕವಾಗಿರಬಹುದು. ಐಎಂಎಫ್ ಮುನ್ಸೂಚನೆಯ ಪ್ರಕಾರ, 2026ರ ವೇಳೆಗೆ ಭಾರತವು ಕ್ಯಾಲಿಫೋರ್ನಿಯಾಗೆ ಮೀರಿಸಲು ಸಾಧ್ಯವಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.