110 ಕೆಜಿ ಗಾಂಜಾ ಕಳ್ಳಸಾಗಾಣೆ, ವಿಮಾನ ನಿಲ್ದಾಣದಲ್ಲಿ 22 ಬುದ್ಧ ಸನ್ಯಾಸಿಗಳು ಅರೆಸ್ಟ್ ಆಗಿದ್ದಾರೆ. ಥಾಯ್‌ಲೆಂಡ್‌ನಿಂದ ಮರಳಿದ 22 ಸನ್ಯಾಸಿಗಳ ಬಳಿಯಿಂದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 

ಕೊಲೊಂಬೊ (ಏ.29) ವಿಮಾನ ನಿಲ್ದಾಣಗಳಲ್ಲಿ ಡ್ರಗ್ಸ್ ಸೇರಿದಂತೆ ಹಲವು ವಸ್ತುಗಳ ಕಳ್ಳಸಾಗಾಣೆಗಳು ಪತ್ತೆಯಾದಾಗ ತನಿಖಾ ಎಜೆನ್ಸಿ ಸೇರಿದಂತೆ ಹಲವರು ಬೆಚ್ಚಿ ಬಿದ್ದಿದ್ದಾರೆ. ಅನುಮಾನವೇ ಬರದಂತೆ ಕಳ್ಳಸಾಗಾಣೆ ಮಾಡಲಾಗುತ್ತದೆ. ಇದೀಗ ಮೇಲ್ನೋಟಕ್ಕೆ ಯಾವುದೇ ರೀತಿಯ ಅನುಮಾನ ಬರದಂತೆ, ಇನ್ನು ಅಷ್ಟೇ ವೇಗದಲ್ಲಿ ಎಸ್ಕೇಪ್ ಆಗುವಂತೆ ಪ್ಲಾನ್ ಮಾಡಿ ಗಾಂಜಾ ಕಳ್ಳಸಾಗಾಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಹಿಡಿದಿದ್ದಾರೆ. ಥಾಯ್‌ಲೆಂಡ್‌ನಿಂದ ಶ್ರೀಲಂಕಾದ ಕೊಲೊಂಬೊ ವಿಮಾನ ನಿಲ್ದಾಣಕ್ಕೆ ಬಂದಿಳಿದ 22 ಬುದ್ಧ ಸನ್ಯಾಸಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರಿಂದ 110 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಕೊಲೊಂಬೊ ವಿಮಾನ ನಿಲ್ದಾಣದ ಅತೀ ದೊಡ್ಡ ದಾಳಿ

ಕೊಲೊಂಬೊ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದ ಅತೀ ದೊಡ್ಡ ಮಾದಕ ದ್ರವ್ಯ ಘಟನೆ ಇದಾಗದೆ. 22 ಬುದ್ಧ ಸನ್ಯಾಸಿಗಳು ಒಟ್ಟು 110 ಕೆಜಿ ಗಾಂಜಾವನ್ನು ಕಳ್ಳ ಸಾಗಾಣೆ ಮಾಡಿದ್ದಾರೆ. ಒಬ್ಬೊಬ್ಬ ಸನ್ಯಾಸಿ ತಲಾ 5 ಕೆಜಿಯಂತೆ ಗಾಂಜಾ ಹಿಡಿದು ಆಗಮಿಸಿದ್ದಾರೆ.ಈ ಗಾಂಜಾದ ಒಟ್ಟು ಮೊತ್ತ 3.45 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಸನ್ಯಾಸಿಗಳಾಗಿದ್ದ ಕಾರಣ ಬಹುತೇಕ ಕಡೆಗಳಲ್ಲಿ ಚೆಕಿಂಗ್ ಇರುವುದಿಲ್ಲ. ಇದನ್ನೇ ದುರಪಯೋಗ ಪಡಿಸಿಕೊಂಡ ಬುದ್ಧ ಸನ್ಯಾಸಿಗಳು ತಮ್ಮ ಲಗೇಜ್ ಬ್ಯಾಗೇಜ್‌ನಲ್ಲಿ ತಲಾ 5 ಕೆಜಿಯಂತೆ ಗಾಂಜಾ ಇಟ್ಟುಕೊಂಡು ಸಾಗಾಟ ಮಾಡಿದ್ದಾರೆ. ಆದರೆ ಕೊಲೊಂಬೊ ವಿಮಾನ ನಿಲ್ದಾಣ ಅಧಿಕಾರಿಗಳು ಈ ಕಳ್ಳಸಾಗಾಣೆ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಬುದ್ಧ ಸನ್ಯಾಸಿಗಳು ಈ ರೀತಿಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಹಿಂದೆ ಅತೀ ದೊಡ್ಡ ಜಾಲ ಕೆಲಸ ಮಾಡುತ್ತಿರುವ ಅನುಮಾನವನ್ನು ತನಿಖಾ ಎಜೆನ್ಸಿಗಳು ವ್ಯಕ್ತಪಡಿಸಿದೆ. ಬುದ್ಧ ಸನ್ಯಾಸಿಗಳನ್ನು ಬಳಸಿಕೊಂಡಿದ್ದಾರೆ. ಇದರ ಹಿಂದಿನ ಕೈಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಶ್ರೀಲಂಕಾ ತನಿಖಾ ಎಜೆನ್ಸಿ ಹೇಳಿದೆ.

ಎಪ್ರಿಲ್ 22 ರಂದು ಶ್ರೀಲಂಕಾದಿಂದ ಈ ಬುದ್ಧ ಸನ್ಯಾಸಿಗಳು ಶ್ರೀಲಂಕಾಗೆ ಪ್ರಯಾಣ ಬೆಳೆಸಿದ್ದರು. ಉಚಿತ ಟಿಕೆಟ್ ಮೂಲಕ ಈ ಸನ್ಯಾಸಿಗಳು ಶ್ರೀಲಂಕಾಗೆ ಪ್ರಯಾಣ ಮಾಡಿದ್ದರು. ಈ ಪ್ರಯಾಣವೇ ಕಳ್ಳ ಸಾಗಾಣಿಕೆ ಉದ್ದೇಶದಿಂದ ಕೂಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.