ವೇಶ್ಯೆಯರಿಗೆ ಕೊಕೇನ್ : ಸಂಸದ ಸಸ್ಪೆಂಡ್

ವೇಶ್ಯೆಯರಿಗಾಗಿ ಕೊಕೇನ್ ಖರೀದಿಗೆ ಒಪ್ಪಿಕೊಂಡ ಪ್ರಕರಣದಲ್ಲಿ ಸಂಸದರೋರ್ವರನ್ನು ಆರು ತಿಂಗಳ ಕಾಲ ಸಸ್ಪೆಂಡ್ ಮಾಡಲಾಗಿದೆ. 

British Parliament suspends Indian-origin MP Keith Vaz

ಲಂಡನ್ [ನ.02]: ಪುರುಷ ವೇಶ್ಯೆಯರಿಗಾಗಿ ಕೊಕೇನ್ ಖರೀದಿಗೆ ಒಪ್ಪಿಕೊಂಡ ಪ್ರಕರಣದಲ್ಲಿ ಭಾತೀಯ ಸಂಜಾತ, ಲೇಬರ್ ಪಕ್ಷದ ಸಂಸದ ಕೀಥ್ ವಾಜ್‌ರನ್ನು ಇಂಗ್ಲೆಂಡ್ ಸಂಸತ್ತಿನ ಶಿಸ್ತು ಸಮಿತಿ 6 ತಿಂಗಳ ಕಾಲ ಅಮಾನತು ಮಾಡಿದೆ.

ಲೀಸೆಸ್ಟೆರ್ ಈಸ್ಟ್ ಕ್ಷೇತ್ರ ಪ್ರತಿನಿಧಿಸುವ ಕೀಥ್, ನಿಯಮಗಳನ್ನು ಮೀರಿ ಕೊಕೇನ್ ಖರೀದಿಗೆ ಒಪ್ಪಿ ಗೆ ಸೂಚಿಸಿದ್ದರು. 3 ವರ್ಷಗಳ ಹಿಂದೆ ಪುರುಷ ವೇಶ್ಯೆಯರೊಂದಿಗೆ ಕೀಥ್ ಸಂಬಂಧ ಹೊಂದಿದ್ದಾರೆ ಎಂದು ಬ್ರಿಟನ್ ಪತ್ರಿಕೆಗಳು ವರದಿ ಮಾಡಿದ್ದವು. 

ತೈಲ ಟ್ಯಾಂಕರ್ ವಶಪಡಿಸಿಕೊಂಡ ಇರಾನ್: ಭಾರತೀಯ ಸಿಬ್ಬಂದಿ ಬಂಧನ!...

ಈ ಹಿನ್ನೆಲೆ ಕೀಥ್ ಅವರನ್ನು, ಸಂಸತ್‌ನ ಗೃಹ ವ್ಯವಹಾರಗಳ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಇದೀಗ ಸಂಸದ ಸ್ಥಾನದಿಂದ ಅಮಾನತು ಮಾಡಲಾಗಿದೆ. 

ನವೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Latest Videos
Follow Us:
Download App:
  • android
  • ios