ಟೆಹ್ರಾನ್(ಜು.21): ಬ್ರಿಟನ್ ಮೂಲದ ತೈಲ ಟ್ಯಾಂಕರ್’ವೊಂದನ್ನು ಇರಾನ್ ವಶಪಡಿಸಿಕೊಂಡಿದ್ದು 23 ಸಿಬ್ಬಂದಿಯನ್ನು ಬಂಧಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕಾರ್ಗೊ ಕಂಪನಿ ಸ್ಟೆನಾ ಬಲ್ಕ್, ಬಂಧಿತ ಸಿಬ್ಬಂದಿಯಲ್ಲಿ 18 ಸಿಬ್ಬಂದಿ ಭಾರತೀಯರು ಎಂದು ಹೇಳಿದೆ.

ಇದೇ ವೇಳೆ ಬಂಧಿತ ತನ್ನ ಸಿಬ್ಬಂದಿಯ ರಕ್ಷಣೆ ತನಗೆ ಪ್ರಮುಖ ಆದ್ಯತೆ ಎಂದು ಸ್ಟೆನಾ ಬಲ್ಕ್ ತಿಳಿಸಿದೆ. 

ಅಂತಾರಾಷ್ಟ್ರೀಯ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಇಂಗ್ಲೆಂಡಿನ ತೈಲ ಟ್ಯಾಂಕರ್’ನ್ನು ಇರಾನ್ ವಶಪಡಿಸಿಕೊಂಡಿದೆ ಎನ್ನಲಾಗಿದೆ.