ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಕತೆ 'ಸ್ಪೇರ್' ಮೊದಲ ದಿನವೇ ದಾಖಲೆಯ ಮಾರಾಟ
ಪ್ರಿನ್ಸ್ ಹ್ಯಾರಿಯ ಆತ್ಮಕಥೆ ‘ಸ್ಪೇರ್’ ಬಿಡುಗಡೆಯಾದ ಮೊದಲ ದಿನವೇ 14.3 ಲಕ್ಷ ಪ್ರತಿಗಳ ಮಾರಾಟ ಕಾಣುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಲಂಡನ್: ಪ್ರಿನ್ಸ್ ಹ್ಯಾರಿಯ ಆತ್ಮಕಥೆ ‘ಸ್ಪೇರ್’ ಬಿಡುಗಡೆಯಾದ ಮೊದಲ ದಿನವೇ 14.3 ಲಕ್ಷ ಪ್ರತಿಗಳ ಮಾರಾಟ ಕಾಣುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ ಪ್ರಿನ್ಸ್ ಹ್ಯಾರಿಯ ಪುಸ್ತಕ ಅತಿ ವೇಗವಾಗಿ ಮಾರಾಟವಾಗುತ್ತಿರುವ ನಾನ್-ಫಿಕ್ಷನ್ ಪುಸ್ತಕವಾಗಿದೆ. ಈ ಮೂಲಕ ಈ ಹಿಂದೆ 8.8 ಲಕ್ಷ ಪ್ರತಿಗಳ ಮಾರಾಟ ಕಂಡಿದ್ದ ಬರಾಕ್ ಒಬಾಮಾ ಅವರ ‘ಎ ಪ್ರಾಮಿಸ್ ಲ್ಯಾಂಡ್’ ದಾಖಲೆಯನ್ನು ಹಿಂದಿಕ್ಕಿದೆ.
ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಪತ್ನಿ ಮೇಘನ್ ಮಾರ್ಕೆಲ್ ಅವರು ಕೆಲ ವರ್ಷಗಳ ಹಿಂದೆ ರಾಜಮನೆತನದ ಸ್ಥಾನಮಾನವನ್ನು ತೊರೆದಿದ್ದರು. ಆರ್ಥಿಕವಾಗಿ ಸ್ವತಂತ್ರರಾಗುವ ನಿಟ್ಟಿನಲ್ಲಿ ನಾವು ರಾಜಮನೆತನದ 'ಹಿರಿಯ' ಸದಸ್ಯ ಸ್ಥಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎನ್ನುವ ಮೂಲಕ ಲಂಡನ್ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ದಂಪತಿ ರಾಜ ಪ್ರಭುತ್ವ ತೊರೆಯಲು ಮುಂದಾಗಿದ್ದರು. ಇದಕ್ಕೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ರಾಣಿ ಎಲಿಜಬೆತ್-2 ಒಪ್ಪಿಗೆ ಸೂಚಿಸಿದ್ದರು. ನಂತರ 2020ರ ಮಾರ್ಚ್ 31ರಂದು ಈ ದಂಪತಿ ಅಧಿಕೃತವಾಗಿ ರಾಜಮನೆತನ, ಅರಮನೆಯಿಂದ ಹೊರ ಬಂದಿದ್ದರು.
ರಾಣಿ ಅದ್ರೇನೂ ಸಮಸ್ಯೆ ತಪ್ಪಿರಲಿಲ್ಲ, ಮಗ, ಸೊಸೆ, ಮರಿಸೊಸೆಯ ವಿವಾದಗಳಿಗೆ ಮದ್ದು ಅರೆದಿದ್ದ ಎಲಿಜಬೆತ್!
ರಾಜಪ್ರಭುತ್ವಕ್ಕೆ ಗುಡ್‌ಬೈ: ಹ್ಯಾರಿ ದಂಪತಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು ಹೀಗೆ!