ರಾಣಿ ಅದ್ರೇನೂ ಸಮಸ್ಯೆ ತಪ್ಪಿರಲಿಲ್ಲ, ಮಗ, ಸೊಸೆ, ಮರಿಸೊಸೆಯ ವಿವಾದಗಳಿಗೆ ಮದ್ದು ಅರೆದಿದ್ದ ಎಲಿಜಬೆತ್‌!

2ನೇ ರಾಣಿ ಎಲಿಜಬೆತ್‌ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆದರೆ, ತಮ್ಮ70 ವರ್ಷಗಳ ಅಧಿಕಾರದ ಅವಧಿಯಲ್ಲಿ ಆಕೆಯ ಹಾದಿ ಬರೀ ಹೂವಿನ ಹಾಸಿಗೆಯಾಗಿರಲಿಲ್ಲ. ಬ್ರಿಟಿಷ್‌ ರಾಜಮನೆತನ ವಿವಾದಕ್ಕೆ ಸಿಲುಕಿಕೊಂಡಾಗಲೆಲ್ಲಾ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆ ಮೂಲಕ ರಾಜಮನೆತನದ ಗೌರವವಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿದ್ದರು.

Queen Elizabeth II and five biggest controversy in Britain royal family while She was monarch san

ಲಂಡನ್‌ (ಸೆ.9): ಬ್ರಿಟನ್ ರಾಣಿ ಎಲಿಜಬೆತ್ ಇನ್ನಿಲ್ಲ. 96ನೇ ವರ್ಷದಲ್ಲಿ ಅವರು ನಿಧನರಾಗಿದ್ದಾರೆ. 70 ವರ್ಷಗಳ ಆಳ್ವಿಕೆಯಲ್ಲಿ ಅವರ ಇಮೇಜ್‌ಗೆ ಯಾವುದೇ ಕಳಂಕವಿಲ್ಲದೆ ಬದುಕಿದ್ದರು. ಆದರೆ ಈ ಸಮಯದಲ್ಲಿ ರಾಜಮನೆತನದಲ್ಲಿ ಬಿರುಕು ಮಾತ್ರ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ರಾಜಮನೆತನದಲ್ಲಿ ಪರಸ್ಪರ ನಂಬಿಕೆ ಮುರಿದುಹೋದ, ಸಾಕಷ್ಟು ಪ್ರಶ್ನೆಗಳನ್ನು ಉದ್ಭವಿಸಿದ ಸಾಕಷ್ಟು ಪ್ರಸಂಗಗಳು ವರದಿಯಾಗಿದ್ದವು. ಆದರೆ, ಇದೆಲ್ಲವೂ ಮನೆಯ ಹಿರಿಯ ವ್ಯಕ್ತಿಯಾಗಿ 2ನೇ ಎಲಿಜಬೆತ್‌ ಸಮರ್ಥವಾಗಿ ನಿಭಾಯಿಸಿದ್ದರು. ಹಾಗೂ ಪ್ರತಿ ಬಾರಿಯೂ ರಾಜಮನೆತನದ ಕುಟುಂಬ ಸದಸ್ಯರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ರಾಣಿಯ ಹಿರಿಯ ಮಗ ಪ್ರಿನ್ಸ್‌ ಚಾರ್ಲ್ಸ್‌ ವಿಚಾರದಲ್ಲಿ ರಾಣಿ ಮಾಡಿದ್ದ ನಿರ್ಧಾರಗಳಿಗೆ ಕೆಲವೊಂದು ಟೀಕೆಗಳು ಬಂದ ನಡುವೆಯೂ, ರಾಜಮನೆತನದ ನಿಟ್ಟಿನಲ್ಲಿ ಅತ್ಯಂತ ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಹಿಂಜರಿಯುತ್ತಿರಲಿಲ್ಲ. 40 ವರ್ಷದ ಹಿಂದೆ ಪ್ರಿನ್ಸ್‌ ಚಾರ್ಲ್ಸ್‌, ಕ್ಯಾಮಿಲ್ಲಾ ಪಾರ್ಕರ್‌ ಎನ್ನುವ ಹುಡುಗಿಯ ಜೊತೆ ಅಫೇರ್‌ ಇರಿಸಿಕೊಂಡಿದ್ದು ರಾಯಲ್‌ ಫ್ಯಾಮಿಲಿಗೆ ಇರಿಸುಮುರಿಸು ಉಂಟುಮಾಡಿತ್ತು. ಅದಾದ ಬಳಿಕ ರಾಜಕುಮಾರಿ ಡಯಾನಾ, ಮರಿಸೊಸೆ ಕೇಟ್‌ ಮಿಡ್ಲಟನ್‌ ಹಾಗೂ ಮೇಗನ್‌ ಮರ್ಕಲ್‌ ಕುರಿತಾಗಿಯೂ ವಿವಾದ ಏರ್ಪಟ್ಟಿತ್ತು. ಇನ್ನು ರಾಣಿಯ 2ನೇ ಮಗ ಆಂಡ್ರ್ಯೂ, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪವೂ ಕೇಳಿಬಂದಿತ್ತು.

ರಾಜಕುಮಾರಿ ಡಯಾನಾ: ಬ್ರಿಟನ್‌ ರಾಜಮನೆತನದ (Britain Royal Family) ಅತ್ಯಂತ ಸ್ಪರದ್ರೂಪಿಯಾಗಿದ್ದ ರಾಜಕುಮಾರಿ ಡಯಾನಾರನ್ನು (Royal Family Princess Diana)  ಇಂದಿಗೂ ಬ್ರಿಟನ್‌ ಜನತೆ ನೆನಪಿಸಿಕೊಳ್ಳುತ್ತಾರೆ. 1981ರ ಫೆಬ್ರವರಿ 24 ರಂದು ರಾಯಲ್‌ ಫ್ಯಾಮಿಲಿಯ 32 ವರ್ಷ ಪ್ರಿನ್ಸ್‌ ಚಾರ್ಲ್ಸ್‌ ಹಾಗೂ ಡಯಾನಾ ನಡುವೆ ನಿಶ್ಚಿತಾರ್ಥವಾಗಿದೆ ಎಂದು ಘೋಷಣೆಯಾಗಿತ್ತು. ಎಲಿಜಬೆತ್‌ ರಾಣಿಯ ಹಿರಿ ಮಗ ಚಾರ್ಲ್ಸ್‌ಗಿಂತ (Prince Charles) 13 ವರ್ಷ ಚಿಕ್ಕವರು ಡಯಾನಾ. ಇನ್ನೇನು ಕಾಲೇಜು ಹೋಗಬೇಕಿದ್ದ ವಯಸ್ಸಿನಲ್ಲಿ ಅಂದರೆ 19ನೇ ವರ್ಷದಲ್ಲಿ ಡಯಾನಾ ಸ್ಪೆನ್ಸರ್‌ (Diana Spencer) ರಾಜಮನೆತನ ಸೇರುವುದು ನಿಶ್ಚಯವಾಗಿತ್ತು. ನಿಶ್ಚಿತಾರ್ಥವಾದ ಐದು ತಿಂಗಳ ಬಳಿಕ ಡಯಾನಾ ಹಾಗೂ ಚಾರ್ಲ್ಸ್‌ ಸತಿ-ಪತಿಯಾಗಿದ್ದರು. ಆದರೆ, ಡಯಾನಾಗೆ ರಾಜಮನೆತನ ಹೊಸದು. ಅಲ್ಲಿನ ಸಂಪ್ರದಾಯ, ಶಿಷ್ಟಾಚಾರ ಆಕೆಗೆ ಉಸಿರುಗಟ್ಟಿಸುವಂತಾಗಿತ್ತು. ಇದರ ನಡುವೆ ಪ್ರಿನ್ಸ್‌ ಚಾರ್ಲ್ಸ್‌ ಹಾಗೂ ಕ್ಯಾಮಿಲಾ ಪಾರ್ಕರ್‌ ನಡುವೆ ಅಫೇರ್‌ ಬಗ್ಗೆಯೂ ಡಯಾನಾಗೆ ತಿಳಿದುಹೋಗಿತ್ತು. ಮದುವೆಗೂ ಮುಂಚೆ ಇದು ತಿಳಿದಿದ್ದರೆ, ತಾನು ಚಾರ್ಲ್ಸ್‌ನನ್ನು ಮದುವೆಯೇ ಆಗುತ್ತಿರಲಿಲ್ಲ ಎಂದಿದ್ದರು. 11 ವರ್ಷಗಳ ಬಳಿಕ ಇಬ್ಬರೂ ಬೇರೆ ಬೇರೆಯಾದರು. 1992ರ ಡಿಸೆಂಬರ್‌ನಲ್ಲಿ ಎಲಿಜಬೆತ್‌, ಚಾರ್ಲ್ಸ್‌ ಹಾಗೂ ಡಯಾನಾ ಇಬ್ಬರೂ ಬೇರೆಬೇರೆಯಾಗಿ ಬದುಕಲು ಅನುಮತಿಸಿದರು. 1992ರಲ್ಲಿ ಒಂದು ಪುಸ್ತಕ ಬಂತು. ಡಯಾನಾ: ಹರ್‌ ಟ್ರ್ಯೂ ಸ್ಟೋರಿ. ಡಯಾನಾಳ ಮುರಿದುಹೋದ ದಾಂಪತ್ಯದ ಸಂಪೂರ್ಣ ವಿವರಗಳು, ಚಾರ್ಲ್ಸ್‌ ಹಾಗೂ ಕ್ಯಾಮಿಲ್ಲಾ (Camilla Parker) ಅಫೇರ್‌ ಮತ್ತು ಡಯಾನಾಳ ಖಿನ್ನತೆಯ ಬಗ್ಗೆ ವಿವರಗಳಿದ್ದವು. ಆದರೆ, ಈ ಪುಸ್ತಕ ರಾಯಲ್‌ ಫ್ಯಾಮಿಲಿಗೆ ದೊಡ್ಡ ಮುಜುಗರ ನೀಡಿತ್ತು. ಸ್ವತಃ ರಾಣಿಯೇ 1992 ತನ್ನ ಅತ್ಯಂತ ಕೆಟ್ಟ ವರ್ಷ ಎಂದು ಕರೆದಿದ್ದರು.

Queen Elizabeth II and five biggest controversy in Britain royal family while She was monarch san

ಮದುವೆಯಾದ ಮಹಿಳೆಯ ಜೊತೆ ಮಗನ ಅಫೇರ್‌: ಡಯನಾಳನ್ನು ಮದುವೆಯಾಗುವ ಮುನ್ನವೇ ಪ್ರಿನ್ಸ್‌ ಚಾರ್ಲ್ಸ್‌, ಅದಾಗಲೇ ಮದುವೆಯಾಗಿದ್ದ ಕ್ಯಾಮಿಲ್ಲಾ ಪಾರ್ಕರ್‌ ಜೊತೆ ಅಫೇರ್‌ ಇರಿಸಿಕೊಂಡಿದ್ದರು. ಈ ಸಂಬಂಧ ರಾಜಮನೆತನದಲ್ಲಿ ಇರಿಸುಮುರಿಸು ಉಂಟು ಮಾಡಿತ್ತು. ಮನೆತನದ ಮರ್ಯಾದೆಯ ಬಗ್ಗೆ ಚಾರ್ಲ್ಸ್‌ಗೆ ರಾಣಿ ಎಲಿಜಬೆತ್‌ ಬುದ್ಧಿಯನ್ನೂ ಹೇಳಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. 1997 ಆಗಸ್ಟ್‌ 31 ರಂದು ಡಯಾನಾ ಪ್ಯಾರಿಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದರು. ಈ ವೇಳೆ 36 ವರ್ಷದ ಡಯಾನಾ ಜೊತೆ ಆಕೆಯ ಗೆಳೆಯ ದೋದಿ ಅಲ್‌ ಫಯಾದ್‌ ಇದ್ದ. ಇದಾದ ಬಳಿಕ 199ರಿಂದ ಮತ್ತೊಮ್ಮೆ ಚಾರ್ಲ್ಸ್‌ ಹಾಗೂ ಡಯಾನಾ ಸಂಬಂಧ ಆರಂಭಿಸಿದರು. ಸುದೀರ್ಘ ಕಾಲದ ಸಂಬಂಧದ ನಂತರ 2005ರ ಏಪ್ರಿಲ್‌ನಲ್ಲಿ ಚಾರ್ಲ್ಸ್‌, ಕ್ಯಾಮಿಲಾ ಪಾರ್ಕರ್‌ನ ವಿವಾಹವಾಗಿದ್ದರು. ರಾಣಿ ಆಳ್ವಿಕೆಯ 70ನೇ ವರ್ಷದ ವೇಳೆ, ಹಾಗೇನಾದರೂ ಚಾರ್ಲ್ಸ್‌ ಬ್ರಿಟನ್‌ನ ಮುಂದಿನ ರಾಜನಾದಲ್ಲಿ, ಕ್ಯಾಮಿಲ್ಲಾ ಬ್ರಿಟನ್‌ನ ಮುಂದಿನ ರಾಣಿ ಆಗುತ್ತಾಳೆ ಎಂದು ಸ್ವತಃ ಎಲಿಜಬೆತ್‌ ಘೋಷಿಸಿದ್ದರು. ಇದರೊಂದಿಗೆ ಕ್ಯಾಮಿಲ್ಲಾರನ್ನು ರಾಜಮನೆತನಕ್ಕೆ ಅವರು ಸೇರಿಸಿಕೊಂಡಿದ್ದರು.

ರಾಜಮನೆತನ ಬಿಟ್ಟ ಡಯಾನಾಳ 2ನೇ ಮಗ: ಡಯಾನಾ ಅವರ ಕಿರಿಯ ಮಗ ಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮಗನ್ 9 ಜನವರಿ 2020 ರಂದು ರಾಜಮನೆತನದಿಂದ ಬೇರ್ಪಟ್ಟರು. ಅವರು ಬ್ರಿಟನ್‌ನಿಂದ ಅಮೆರಿಕಕ್ಕೆ ತೆರಳಿದರು. ರಾಜಕುಮಾರ ಹ್ಯಾರಿ ಮತ್ತು ಮೇಘನ್ ರಾಜಮನೆತನದಿಂದ ಬೇರ್ಪಟ್ಟಿರುವುದು ತುಂಬಾ ಕಷ್ಟಕರವಾದ ಅನುಭವ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.  ತಾಯಿ ಪ್ರಿನ್ಸೆಸ್ ಡಯಾನಾಗೆ ಆದಂತೆ ತನಗಾಗಿತ್ತು ಎಂದು ಹ್ಯಾರಿ ಹೇಳಿದ್ದರು. ಹ್ಯಾರಿ ತನ್ನ ತಾಯಿಯ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ಊಹಿಸಲು ಸಹ ಸಾಧ್ಯವಿಲ್ಲ ಎಂದು ಈ ವೇಳೆ ಹೇಳಿದ್ದರು. ಹ್ಯಾರಿಯ ಪತ್ನಿ ಮಗನ್ ಮಾಜಿ ಚಲನಚಿತ್ರ ತಾರೆ ಮತ್ತು ಬ್ರಿಟಿಷ್‌ ಆಗಿರಲಿಲ್ಲ. ತನ್ನ ಅತ್ತೆಯಂತೆ ಮೇಘನ್‌ ಬದುಕಬೇಕು ಎಂದು ಆಸೆ ಪಟ್ಟಿದ್ದರು. ಆದರೆ, ಮೇಘನ್‌ ಕೂಡ ಡಯಾನಾಳ ರೀತಿ ಹೊರಗಿನವರು. ಮೇಘನ್‌ ತನ್ನ ಜೀವನಶೈಲಿಯ ಕಾರಣಕ್ಕೆ ರಾಜಮನೆತನದ ಕೋಪ ಎದುರಿಸಿದರು. ಹೆಂಡತಿಯ ಸಲುವಾಗಿ ರಾಜಕುಮಾರ ಹ್ಯಾರಿ ಕೂಡ ಮನೆತನದಿಂದ ದೂರವಾದ. ಇವೆಲ್ಲದರ ಹಿಂದಿದ್ದ ಪಾತ್ರ ಎಲಿಜಬೆತ್‌ ರಾಣಿ.

Queen Elizabeth II Passes Away: ದೀರ್ಘ ಅವಧಿಯ ಕಾಲ ಬ್ರಿಟನ್‌ ರಾಣಿಯಾಗಿದ್ದ ಎಲಿಜಬೆತ್ II ನಿಧನ

ವಿಲಿಯಂ ಪತ್ನಿಯ ಟಾಪ್‌ಲೆಸ್‌ ಫೋಟೋ: 2012ರಲ್ಲಿ ಡಯಾನಾಳ ಹಿರಿಯ ಮಗ ಪ್ರಿನ್ಸ್ ವಿಲಿಯಂನ (Prince Willia) ಪತ್ನಿ ಕೇಟ್‌ ಮಿಡ್ಲ್‌ಟನ್‌ನ (Kate Middleto) ಟಾಪ್‌ಲೆಟ್‌ ಫೋಟೋ ಫ್ರೆಂಚ್‌ ಮ್ಯಾಗಝೀನ್‌ನಲ್ಲಿ ಪ್ರಕಟವಾಗಿತ್ತು. ಇದು ರಾಯಲ್‌ ಫ್ಯಾಮಿಲಿ ಆಕ್ರೋಶಕ್ಕೆ ಕಾರಣವಾಯಿತು. ಸ್ವತಃ ವಿಲಿಯಂ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ. ಮ್ಯಾಗಝೀನ್‌ನ 6 ಮಂದಿ ಸದಸ್ಯರ ವಿರುದ್ಧ ದೂರು ಕೂಡ ದಾಖಲಾಯಿತು. ಕೇಟ್ ಮಿಡಲ್ಟನ್ ತನ್ನ ಮೈದುನ ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಗನ್ ಮರ್ಕೆಲ್ ಅವರೊಂದಿಗೆ ಜಗಳವಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಬಗ್ಗೆ ರಾಜಮನೆತನದವರು ಮೌನ ವಹಿಸಿದ್ದರು. ಕೇಟ್ ಮಿಡಲ್ಟನ್ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿರುವಾಗ, ಅವಳನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಆತ್ಮಹತ್ಯೆ ಮಾಡಿಕೊಂಡಳು. ಈ ಬಗ್ಗೆ ರಾಜಮನೆತನದ ಮೇಲೂ ಪ್ರಶ್ನೆಗಳು ಎದ್ದಿದ್ದವು.
Queen Elizabeth II and five biggest controversy in Britain royal family while She was monarch san

ಇಂಗ್ಲೆಂಡ್ ರಾಣಿ ಸದಾ ಕಾಲ ಧರಿಸ್ತಿದ್ದ ಈ ನೆಕ್ಲೇಸ್‌ ಭಾರತ ಮೂಲದ್ದು

ಅತ್ಯಾಚಾರದ ಆರೋಪ ಹೊತ್ತು ರಾಜಪದವಿ ತೊರೆದ ಎಲಿಜಬೆತ್‌ ರಾಣಿಯ ಮಗ: ರಾಜಮನೆತನದ ಇತಿಹಾಸದಲ್ಲಿ ಅತಿದೊಡ್ಡ ಮುಜುಗರವು ರಾಜಕುಮಾರ ಆಂಡ್ರ್ಯೂನಿಂದ ಎದುರಾಗಿತ್ತು. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಅವರ ಮೇಲಿತ್ತು. 2019 ರಲ್ಲಿ ಬೆಳಕಿಗೆ ಬಂದ ಪ್ರಕರಣವನ್ನು 'ಎಪ್ಸ್ಟೀನ್ ಹಗರಣ' ಎಂದು ಕರೆಯಲಾಯಿತು. ಇದರ ನಂತರ ಪ್ರಿನ್ಸ್ ಆಂಡ್ರ್ಯೂಗೆ ನೀಡಲಾದ ಡ್ಯೂಕ್ ಆಫ್ ಯಾರ್ಕ್ ರಾಜಪದವಿಯನ್ನು ಹಿಂತೆಗೆದುಕೊಳ್ಳಲಾಯಿತು. ಅವರ ಹೆಸರಿನೊಂದಿಗೆ ಅವರ ರಾಯಲ್ ಹೈನೆಸ್ ಅನ್ನು ಬಳಸುವ ಹಕ್ಕನ್ನು ಕೂಡ ಹೊಂದಿರಲಿಲ್ಲ. ಬ್ರಿಟಿಷ್ ಸಿಂಹಾಸನದ ಹಕ್ಕುಗಳಲ್ಲಿ ಪ್ರಿನ್ಸ್ ಆಂಡ್ರ್ಯೂ ಒಂಬತ್ತನೇ ಸ್ಥಾನದಲ್ಲಿದ್ದರು. ಆರೋಪದ ಹಿನ್ನೆಲೆಯಲ್ಲಿ ಆಂಡ್ರ್ಯೂ ತಮ್ಮ ರಾಜತ್ವದ ಹುದ್ದೆಯಿಂದ ಕೆಳಗಿಳಿದರು.

Latest Videos
Follow Us:
Download App:
  • android
  • ios