* ಕೋವಿಡ್‌ ಜೊತೆಗೆ ಬದುಕು ಸಾಗಿಸಲು ಹೊಸ ನಿಯಮ ರೂಪಿಸಿರುವ ಬ್ರಿಟನ್‌ ಸರ್ಕಾರ* ಬ್ರಿಟನ್ನಲ್ಲಿ ಗುರುವಾರದಿಂದಲೇ ಕೊರೋನಾ ಐಸೋಲೇಷನ್‌ ರದ್ದು* ಏಪ್ರಿಲ್‌ನಿಂದ ಸಾಮೂಹಿಕ ಕೊರೋನಾ ಪರೀಕ್ಷೆಯನ್ನೂ ನಿಲ್ಲಿಸುವುದಾಗಿ ಘೋಷಣೆ

ಲಂಡನ್‌(ಫೆ.22): ಕೋವಿಡ್‌ ಜೊತೆಗೆ ಬದುಕು ಸಾಗಿಸಲು ಹೊಸ ನಿಯಮ ರೂಪಿಸಿರುವ ಬ್ರಿಟನ್‌ ಸರ್ಕಾರ, ಇನ್ಮುಂದೆ ಕೋವಿಡ್‌ ಸೋಂಕಿತರು ಸ್ವಯಂ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯ ಅಲ್ಲ, ಗುರುವಾರದಿಂದಲೇ ಈ ನಿಮಯ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಹಾಗೆಯೇ ಏಪ್ರಿಲ್‌ನಿಂದ ಸಾಮೂಹಿಕ ಕೊರೋನಾ ಪರೀಕ್ಷೆಯನ್ನೂ ನಿಲ್ಲಿಸುವುದಾಗಿ ಘೋಷಿಸಿದೆ.

ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಬೋರಿಸ್‌ ಜಾನ್ಸನ್‌, 2020ರಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆಂದು ಜಾರಿಗೆ ತರಲಾಗಿರುವ ಎಲ್ಲಾ ತಾತ್ಕಾಲಿಕ ಕಾನೂನುಗಳು ಮುಂದಿನ ತಿಂಗಳಿನಿಂದ ಅಸ್ತಿತ್ವದಲ್ಲಿ ಇರುವುದಿಲ್ಲ. ದೇಶದ ಆರೋಗ್ಯ ಕಾರ‍್ಯತಂತ್ರವು ಈಗ ಲಸಿಕೆ ಮತ್ತು ಚಿಕಿತ್ಸೆಗಳ ಕಡೆಗೆ ಗಮನ ನೀಡಿದೆ. ಸಾಂಕ್ರಾಮಿಕ ರೋಗ ಅಂತ್ಯವಾಗದಿದ್ದರೂ ಒಮಿಕ್ರೋನ್‌ ರೂಪಾಂತರಿಯ ಉತ್ತುಂಗವನ್ನು ದಾಟಿದ್ದೇವೆ. ಸದ್ಯ ಬ್ರಿಟನ್‌ನಲ್ಲಿ ಕೊರೋನಾ ಕಾರಣದಿಂದ 10,000ಕ್ಕಿಂತ ಕಡಿಮೆ ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮತ್ತು ಸಾವು ಗಣನೀಯವಾಗಿ ತಗ್ಗಿದೆ ಎಂದು ಹೇಳಿದರು.

ಇದೇ ವೇಳೆ ಯೋಜನೆಯ ಭಾಗವಾಗಿ ಏ.1ರ ವರೆಗೆ ಕೊರೋನಾ ಸೋಂಕಿತರು ಮನೆಯಲ್ಲಿಯೇ ಇರಲು ಸಲಹೆ ನೀಡಲಾಗುತ್ತದೆ. ಅನಂತರ ಸೋಂಕಿತರು ಮನೆಯಿಂದ ಹೊರಬಂದು ವೈಯಕ್ತಿಕ ಕೆಲಸ ಕಾರ‍್ಯಗಳನ್ನು ಮಾಡಬಹುದು. ಸೋಂಕಿತರ ಸಂಪರ್ಕ ಪತ್ತೆಯನ್ನೂ ಕೊನೆಗೊಳಿಸಲಾಗುತ್ತದೆ. ಕೋವಿಡ್‌ ನಿರ್ಬಂಧಗಳ ಪಾಲನೆ ಕಾನೂನು ಬದ್ಧವಾಗಿರದೆ, ಕೇವಲ ಸಲಹಾ ರೂಪದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.

ಬ್ರಿಟನ್‌ನಲ್ಲಿ ಈಗಾಗಲೇ 12 ಮತ್ತು ಅದಕ್ಕೆ ಮೇಲ್ಪಟ್ಟವಯಸ್ಸಿನ ಶೇ.85ರಷ್ಟುಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ.70ರಷ್ಟುಜನರು ಮೂರನೇ ಡೋಸ್‌ ಕೂಡಾ ಪಡೆದುಕೊಂಡಿದ್ದಾರೆ. ದೇಶದಲ್ಲಿ ಇದುವರೆಗೆ 1.8 ಕೋಟಿ ಜನರಿಗೆ ಸೋಂಕು ಬಂದಿದ್ದು, 34000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನಿತ್ಯ ಸರಾಸರಿ 35000ದ ಆಸುಪಾಸು ಕೇಸು ದಾಖಲಾಗುತ್ತಿದ್ದು, 100-150 ಜನರು ಸಾವನ್ನಪ್ಪುತ್ತಿದ್ದಾರೆ.

ಬ್ರಿಟನ್‌ ರಾಣಿ ಎಲಿಜಬೆತ್‌ಗೆ ಕೊರೋನಾ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ!

 ರಾಣಿ ಎಲಿಜಬೆತ್ II ಕೂಡ ಕೊರೊನಾ ಪಾಸಿಟಿವ್ ಆಗಿದ್ದಾರೆ. ರಾಣಿಯ ಕೋವಿಡ್-19 ಪಾಸಿಟಿವ್ ವರದಿ ಭಾನುವಾರ ಬಂದಿದ್ದು, ಅವರ ಸಹಾಯಕರು ರೋಗಲಕ್ಷಣಗಳು ಸೌಮ್ಯವಾಗಿವೆ ಎಂದು ಹೇಳಿದರು. ಬ್ರಿಟನ್‌ನ ದೀರ್ಘಾವಧಿಯ ರಾಣಿ ಅವರು ಸಿಂಹಾಸನವೇರಿದ 70 ನೇ ವರ್ಷದಲ್ಲಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ರಾಜಕಾರಣಿಗಳು ಹಾರೈಸಿದ್ದಾರೆ. ಪ್ಲಾಟಿನಂ ಜುಬಿಲಿಯನ್ನು ಆಚರಿಸುತ್ತಿರುವ 95 ವರ್ಷದ ರಾಣಿಗೆ ಇದು ಉದ್ವಿಗ್ನ ಸಮಯ. ರಾಣಿ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಟ್ವೀಟ್

ಬ್ರಿಟನ್ ರಾಣಿ ಎಲಿಜಬೆತ್ II ಅವರು ಕೋವಿಡ್ -19 ರಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಾರೈಸಿದ್ದಾರೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ರಾಣಿ ಎಲಿಜಬೆತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Britain Queen: ಚಾರ್ಲ್ಸ್ ಎರಡನೇ ಪತ್ನಿ ಕ್ಯಾಮಿಲ್ಲಾ ಮುಂದಿನ ರಾಣಿ: 2ನೇ ಎಲಿಜಬೆತ್‌ ಘೋಷಣೆ

ಯುಕೆ ಸರ್ಕಾರಕ್ಕೆ ಬಿಕ್ಕಟ್ಟಿನ ಸಮಯ

ಯುಕೆ ಸರ್ಕಾರಕ್ಕೂ ಇದು ಕೆಟ್ಟ ಸಮಯ. ಒಂದು ವಾರದಲ್ಲಿ ತೊಂದರೆಗೊಳಗಾದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಇಂಗ್ಲೆಂಡ್‌ನಲ್ಲಿ ಉಳಿದಿರುವ ಕಾನೂನು ನಿರ್ಬಂಧಗಳ ಅಂತ್ಯವನ್ನು ಘೋಷಿಸುವ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧ ವಿಜಯವನ್ನು ಘೋಷಿಸುವ ನಿರೀಕ್ಷೆಯಿದೆ.

ರಾಣಿಯ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಕೂಡ ಪಾಸಿಟಿವ್

ರಾಣಿಯ ಉತ್ತರಾಧಿಕಾರಿಯಾದ 73 ವರ್ಷದ ಪ್ರಿನ್ಸ್ ಚಾರ್ಲ್ಸ್ ಕೂಡ ಕೊರೋನಾ ಪಾಸಿಟಿವ್ ಆಗಿದ್ದಾರೆ. ವರದಿ ಬರುವ ಎರಡು ದಿನಗಳ ಮೊದಲು ಅವರು ಫೆಬ್ರವರಿ 10 ರಂದು ತಮ್ಮ ತಾಯಿಯನ್ನು ಭೇಟಿ ಮಾಡಲು ಲಂಡನ್‌ನ ಪಶ್ಚಿಮದಲ್ಲಿರುವ ವಿಂಡ್ಸರ್ ಕ್ಯಾಸಲ್‌ಗೆ ಹೋಗಿದ್ದರು. ಪ್ರಿನ್ಸ್ ಚಾರ್ಲ್ಸ್ ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ಆಗಿದ್ದಾರೆ.