ಕೊರೋನಾ ವೈರಸ್ ಬೀರೋ ಪರಿಣಾಮ ಒಂದೆರಡಲ್ಲ, ಮದ್ದು ಸಂಶೋಧಿಸಿದ ಬ್ರಿಟನ್
-ಬ್ರಿಟನ್‌ನಲ್ಲಿ ಕೊರೋನಾ ಮದ್ದು ಸಂಶೋಧನೆ -ರೋಗಿಯನ್ನು ಸಾವಿನಿಂದ ಮಾಡಬಹುದು ಪಾರು -ಬ್ರಿಟನ್‌ನಲ್ಲಿ ಬಳಸಲು ಆರೋಗ್ಯ ತಜ್ಞರ ಶಿಫಾರಸು -ಹೈ ಸ್ಪೀಡ್ ವೈರಸ್, ಎಲ್ಲಿಯೂ ಖಾಲಿ ಇಲ್ಲ ಬೆಡ್
ಇಂಗ್ಲೆಂಡ್ (ಜ.8): ಬ್ರಿಟನ್‌ನಲ್ಲಿ ರೂಪಾಂತರಿ ಕೊರೋನಾ ವೈರಸ್ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ಏಪ್ರಿಲ್‌ಗಿಂತಲೂ ಅಲ್ಲಿ ಸೋಂಕಿತರ ಸಂಖ್ಯೆ ಶೇ.39 ಪಟ್ಟು ಹೆಚ್ಚಾಗಿದ್ದು, ಸರಕಾರಕ್ಕೆ ಆತಂಕ ಸೃಷ್ಟಿಸಿದೆ.
ಈ ಬೆನ್ನಲ್ಲೇ ಬ್ರಿಟನ್‌ನಲ್ಲಿ ಹೊಸ ಔಷಧವೊಂದು ಸಂಶೋಧಿಸಿದ್ದು, ಕೊರೋನಾ ರೋಗಿಗಳನ್ನು ಸಾವಿನಿಂದ ಪಾರು ಮಾಡಲು ನೆರವಾಗಲಿದೆ ಎನ್ನಲಾಗುತ್ತಿದೆ. ಈ ಔಷಧ ಬಳಕೆಗೆ ಅಲ್ಲಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಆ ಮೂಲಕ ಸಾವಿನ ದವಡೆ ತಲುಪಿದ ರೋಗಿಗಳನ್ನು ಪಾರು ಮಾಡಲು ನೆರವಾಗುವ ಮದ್ದೊಂದು ಕಂಡು ಹಿಡಿದಂತೆ ಆಗಿದೆ.
ಕರ್ನಾಟಕದಲ್ಲಿ ಕೊರೋನಾ ಅಂಕಿ ಸಂಖ್ಯೆ
ಅಮೆರಿಕ, ಜರ್ಮನಿ, ರಷ್ಯಾ, ಭಾರತದ ಕಂಪನಿಗಳು ಕೊರೋನಾ ವೈರಸ್‌ಕೆ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿವೆ. ಈ ಬೆನ್ನಲ್ಲೇ ಬ್ರಿಟನ್‌ನಲ್ಲಿ ಕೋವಿಡ್ ವಾಸಿ ಮಾಡಬಲ್ಲ ಔಷಧಗಳನ್ನು ಸಂಶೋಧಿಸಿದ್ದು ಮತ್ತಷ್ಟು ಭರವಸೆ ಮೂಡಿಸಿದೆ.
ಮತ್ತಷ್ಟು ನಡೆದಿದೆ ಸಂಶೋಧನೆ:
ಮತ್ತೊಂದೆಡೆ ಕೊರೋನಾ ವೈರಸ್ ಮನುಷ್ಯನ ದೇಹದ ಮೇಲೆ ಅದರಲ್ಲಿಯೂ ಮಕ್ಕಳು, ಯುವಕರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮತ್ತೊಂದಿಷ್ಟು ಅಧ್ಯಯನಗಳು ನಡೆದಿವೆ. ಈ ವೈರಸ್ ಮೆದುಳಿಗೆ ತಗಲುವುದಿಲ್ಲ. ಆದರೆ, ಮೆದುಳಿನ ನರಕೋಶವನ್ನು ಹಾನಿಗೊಳಿಬಹುದೆಂದು ಎಂದು ಸಂಶೋದನೆ ಹೇಳಿದೆ.
ಅಸುನೀಗಿದ19 ಕೋವಿಡ್ ರೋಗಿಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಹೃದಯ ಮಿಡಿತ ಹಾಗೂ ಉಸಿರಾಟವನ್ನು ನಿಯಂತ್ರಿಸುವ ನರ ಕೋಶಗಳನ್ನೇ ಈ ವೈರಸ್ ಹಾನಿಗೊಳಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಈ ರೋಗ ಬೀರಬಹುದಾದ ಪರಿಣಾಮಗಳ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿ ಲಭ್ಯವಾಗುತ್ತಿವೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಕೈ ಗಳ ಸ್ವಚ್ಛತೆ ಕಾಾಪಾಡಿಕೊಂಡರೆ ಒಳ್ಳೇಯದು ಎನ್ನುತ್ತಿರುವುದು. ರೋಗ ಬಂದರೂ ವಾಸಿ ಮಾಡಿಕೊಳ್ಳಬಹುದು ಎಂದು ಉಡಾಫೆಯಿಂದ ಮಾತನಾಡುವವರಿಗೆ ಇದೊಂದು ಎಚ್ಚರಿಕೆಯ ಗಂಟೆ.