ಬೆಂಗಳೂರು, (ಜ.07) : ರಾಜ್ಯದಲ್ಲಿ ಇಂದು (ಗುರುವಾರ) ಹೊಸದಾಗಿ 761 ಜನರಿಗೆ ಕೊರೋನಾ ಪಾಸಿಟಿವ್ ಕೇಸ್‌ಗಳು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,24,898ಕ್ಕೆ ಏರಿಕೆಯಾಗಿದೆ. 

ಇನ್ನು ಕಳೆದ 24 ಗಂಟೆಗಳಲ್ಲಿ 812 ಜನರು ಸೇರಿದಂತೆ ಇದುವರೆಗೆ 9,03,629 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ತೀವ್ರ ವೇಗದಲ್ಲಿ ಹರಡುತ್ತಿದೆ ರೂಪಾಂತರಿ ಕೊರೋನಾ ವೈರಸ್‌, ಲಸಿಕೆಗೂ ಬಗ್ಗೋದು ಡೌಟ್!

ಅಲ್ಲದೇ ಗುರುವಾರ ಕೊರೋನಾ ಸೋಂಕಿಗೆ 7 ಜನರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 12,131ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಈಗ 9,119 ಸಕ್ರೀಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.