Asianet Suvarna News Asianet Suvarna News

ರಾಜ ಚಾರ್ಲ್ಸ್‌ಗೆ ಕ್ಯಾನ್ಸರ್, ನಿಜವಾಗುತ್ತಾ 16ನೇ ಶತಮಾನದಲ್ಲಿ ನಾಸ್ಟ್ರಡಾಮಸ್ ನುಡಿದ ಭವಿಷ್ಯ?

ಬ್ರಿಟನ್ ರಾಜ 3ನೇ ಚಾರ್ಲ್ಸ್‌‌ ಆರೋಗ್ಯದ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ರಾಜ ಚಾರ್ಲ್ಸ್‌ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಚಿಕಿತ್ಸೆಗಳು ಆರಂಭಗೊಂಡಿದೆ. ಆದರೆ ಕ್ಯಾನ್ಸರ್ ರೋಗದ ಸುದ್ದಿಗಿಂತ ಚಾರ್ಲ್ಸ್ ಕುರಿತು ಖ್ಯಾತ ಭವಿಷ್ಯ ತಜ್ಞ, 16ನೇ ಶತಮಾನದ ನಾಸ್ಟ್ರಡಾಮಸ್ ಭವಿಷ್ಯ ನಿಜವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

Britain King Charles diagnosed with cancer Nostradamus prediction on Royal family surfaces on social media ckm
Author
First Published Feb 7, 2024, 5:17 PM IST

ಲಂಡನ್(ಫೆ.07) ಫ್ರೆಂಚ್ ದಾರ್ಶನಿಕ, ಭವಿಷ್ಯದ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ನಾಸ್ಟ್ರಡಾಮಸ್ ಭವಿಷ್ಯಗಳು ಸುಳ್ಳಾಗಿಲ್ಲ. ಇದೀಗ ಮತ್ತೆ ನಾಸ್ಟ್ರಡಾಮಸ್ ಭವಿಷ್ಯ ಭಾರಿ ಚರ್ಚೆಯಾಗುತ್ತಿದೆ. ಕಾರಣ ಬ್ರಿಟನ್ ರಾಜನ 3ನೇ ಚಾರ್ಲ್ಸ್ ದೇಹದಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆ. ಬಕಿಂಗ್‌ಹ್ಯಾಮ್ ಆರಮನೆ ಈ ಮಾಹಿತಿ ಖಚಿತಪಡಿಸಿದ್ದು, ಚಿಕಿತ್ಸೆಗಳು ಆರಂಭಗೊಂಡಿದೆ. ಆದರೆ ಚಾರ್ಲ್ಸ್ ಕ್ಯಾನ್ಸರ್ ರೋಗದ ಮಾಹಿತಿ ಹೊರಬೀಳುತ್ತಿದ್ದಂತೆ ಇದೇ ಬ್ರಿಟನ್ ರಾಜರ ಕುರಿತು 16ನೇ ಶತಮಾನದಲ್ಲಿ ನಾಸ್ಟ್ರಡಾಮಸ್ ಹೇಳಿದ ಭವಿಷ್ಯ ನಿಜವಾಗುತ್ತಾ ಅನ್ನೋ ಚರ್ಚೆ ಜೋರಾಗುತ್ತಿದೆ.

ನಾಸ್ಟ್ರಡಾಮಸ್ ಅವರ 1555ನೇ ಭಾಗದಲ್ಲಿ ದ್ವೀಪಗಳ ರಾಜನನ್ನು ಬಲವಂತದಿಂದ ರಾಜ ಸ್ಥಾನದಿಂದ ಹೊರಹಾಕಲಾಗುತ್ತದೆ. ಈ ಸ್ಥಾನವನ್ನು ಯಾವುದೇ ರಾಜ ಗುರುತು ಹೊಂದಿರದ ವ್ಯಕ್ತಿ ಅಲಂಕರಿಸಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಮೂಲಕ ನಾಸ್ಟ್ರಡಾಮಸ್ ಭವಿಷ್ಯವನ್ನು ವಿಸ್ತರಿಸಿದರೆ, 3ನೇ ಚಾರ್ಲ್ಸ್ ರಾಜ ಪಟ್ಟವನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಕಾರಣ ಕ್ಯಾನ್ಸರ್ ರೋಗವೇ ಇದಕ್ಕೆ ಮೂಲಕ ಕಾರಣವಾಗುವ ಸಾಧ್ಯತೆ ಇದೆ. ಇತ್ತ ರಾಜನ ಗುರತಿಲ್ಲದ ವ್ಯಕ್ತಿ ಅಂದರೆ ಪ್ರಿನ್ಸ್ ಹ್ಯಾರಿ ರಾಜ ಪಟ್ಟ ಅಲಂಕರಿಸಲಾಗುತ್ತದೆ ಎಂದಿದ್ದಾರೆ.

ಹೊಸ ವರ್ಷದ ಭಯಾನಕ ಭವಿಷ್ಯ ಬಿಚ್ಚಿಟ್ಟ ನಾಸ್ಟ್ರಾಡಾಮಸ್

ಬ್ರಿಟಿಷ್ ರಾಜಮನೆತದ ಕುರಿತು ನಾಸ್ಟ್ರಡಾಮಸ್ ಹಲವು ಭವಿಷ್ಯ ನುಡಿದ್ದಾರೆ. ಈ ಭವಿಷ್ಯಗಳೆಲ್ಲವೂ ನಿಜವಾಗಿದೆ. ಈ ಪೈಕಿ ರಾಣಿ ಎಲಿಜಬೆತ್ ನಿಧನವನ್ನು ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಡಾಮಸ್ ಭವಿಷ್ಯದಂತೆ 2022ರಲ್ಲಿ ರಾಣಿ ಎಲಿಜಬೆತ್ ಹೇಳಿದ ದಿನಾಂಕದಲ್ಲೇ ನಿಧನಹೊಂದಿದ್ದರು. ಇದೀಗ 3ನೇ ಚಾರ್ಲ್ಸ್ ಕ್ಯಾನ್ಸರ್ ರೋಗ, ನಾಸ್ಟ್ರಡಾಮಸ್ ಭವಿಷ್ಯ ಹಾಗೂ ಸದ್ಯ ರಾಜಮನೆತನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಒಂದಕ್ಕೊಂದು ತಾಳೆಯಾಗುತ್ತಿದೆ.

ಮೂರನೇ ಚಾರ್ಲ್ಸ್ ಕ್ಯಾನ್ಸರ್ ರೋಗದ ಮಾಹಿತಿ ಹೊರಬೀಳುತ್ತಿದ್ದಂತೆ,  ಚಾರ್ಲ್ಸ್‌ನಿಂದ ಬೇರ್ಪಟ್ಟಿರುವ ಪುತ್ರ ಪ್ರಿನ್ಸ್ ಹ್ಯಾರಿ ಮರಳಿ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿನ್ಸ್ ಹ್ಯಾರಿ ತನ್ನ ಪತ್ನಿ, ನಟಿ ಮೆಘಾನ್ ಹಾಗೂ ಮಕ್ಕಳ ಜೊತೆ ಕ್ಯಾಲಿಫೋರ್ನಿಯಾದಲ್ಲಿ ವಾಸವಿದ್ದಾರೆ. ಆದರೆ ಇದೀಗ ಲಂಡನ್ ರಾಜಮನೆತದಲ್ಲಿ ಕಾಣಿಸಿಕೊಂಡಿದ್ದಾರೆ.

'ಏಳು ತಿಂಗಳ ಯುದ್ಧ..' ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ನಿಜವಾದ ನಾಸ್ಟ್ರಾಡಾಮಸ್‌ ಭವಿಷ್ಯ!

ಚಾರ್ಲ್ಸ್ ಆರೋಗ್ಯ ಹದಗೆಟ್ಟ ಬೆನ್ನಲ್ಲೇ ರಾಜಮನೆತನದ ಕೌಟುಂಬಿಕ ಕಲಹ, ಮನಸ್ತಾಪಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗುತ್ತಿದ್ದಾರೆ. ಮತ್ತೊರ್ವ ಪುತ್ರ ಪ್ರಿನ್ಸ್ ವಿಲಿಯಮ್ಸ್ ಕೂಡ ಅರಮನೆಯಲ್ಲೇ ಇದ್ದು, ನಾಸ್ಟ್ರಡಾಮಸ್ ಭವಿಷ್ಯಗಳು ನಿಜವಾಗುತ್ತಾ ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

Follow Us:
Download App:
  • android
  • ios