Asianet Suvarna News Asianet Suvarna News

ಹೊಸ ವರ್ಷದ ಭಯಾನಕ ಭವಿಷ್ಯ ಬಿಚ್ಚಿಟ್ಟ ನಾಸ್ಟ್ರಾಡಾಮಸ್

ಹೊಸ ವರ್ಷದಲ್ಲಿ ಏನೆಲ್ಲ ಆಗ್ಬಹುದು ಎಂಬ ಪ್ರಶ್ನೆ ನಮಗೆ ಈಗ್ಲೇ ಕಾಡಲು ಶುರುವಾಗಿದೆ. ಮುಂದೇನಾಗುತ್ತೆ ಅನ್ನೋದನ್ನು ಹೇಳಲು ಕಷ್ಟವಾದ್ರೂ ಕೆಲವರು ಇದ್ರ ಬಗ್ಗೆ ನಿಖರವಾಗಿ ಹೇಳ್ತಾರೆ. ಈಗ ಜೀವಂತ ನಾಸ್ಟ್ರಾಡಾಮಸ್ ಹೇಳಿಕೆ ಆತಂಕ ಸೃಷ್ಟಿಸಿದೆ.
 

Living Nostradamus Athos Salome Gives Warning for year 2024  roo
Author
First Published Dec 6, 2023, 2:14 PM IST

ಭವಿಷ್ಯದಲ್ಲಿ ಏನಾಗುತ್ತದೆ, ನಾವು ಹೇಗಿರುತ್ತೇವೆ ಎನ್ನುವುದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಕೇವಲ ಕಾಲಜ್ಞಾನಿಗಳಿಗೆ ಮಾತ್ರ ಅಂತಹ ವಿದ್ಯೆ ಸಿದ್ಧಿಯಾಗಿರುತ್ತದೆ. ಹಾಗಾಗಿ ಮುಂದೆ ನಡೆಯುವ ಆಗುಹೋಗುಗಳನ್ನು ಗ್ರಹಗತಿಗಳನ್ನು ತಿಳಿಯಲು ಅನೇಕ ಮಂದಿ ಭವಿಷ್ಯವಾಣಿಗಳನ್ನು ಕೇಳುತ್ತಾರೆ. ಇಂತಹ ಭವಿಷ್ಯಗಳ ಬಗ್ಗೆ ಎಲ್ಲರಿಗೂ ನಂಬಿಕೆ ಇರೋದಿಲ್ಲ. 

ಕೆಲವು ಸನ್ನಿವೇಶಗಳು ಘಟನೆಗಳು ಭವಿಷ್ಯವಾಣಿಗಳನ್ನು ನಂಬುವಂತೆ ಮಾಡುತ್ತವೆ. ಕಾಲಜ್ಞಾನವನ್ನು ತಿಳಿದುಕೊಂಡವರು ಮುಂದೆ ನಡೆಯುವ ಘಟನೆಗಳನ್ನು, ಅನಾಹುತಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ. ಅಂತಹ ಜ್ಞಾನಿಗಳ ಭವಿಷ್ಯವಾಣಿ ನಿಜವಾದಾಗ ಅವರ ಮೇಲೆ ಭರವಸೆ ಮೂಡುತ್ತದೆ. ಹೀಗೆ ಕಾಲಜ್ಞಾನವನ್ನು ತಿಳಿದುಕೊಂಡವರಲ್ಲಿ ನಾಸ್ಟ್ರಾಡಾಮಸ್ (Nostradamus) ಕೂಡ ಒಬ್ಬರು. ಫ್ರೆಂಚ್ (French) ಪ್ರವಾದಿಯಾದ ಇವರು ಔಷಧ ವ್ಯಾಪಾರಿ ಮತ್ತು ಹೆಸರಾಂತ ಕಾಲಜ್ಞಾನಿಗಳೂ ಹೌದು. ಇವರು ನುಡಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಇವರು ಜಗತ್ತಿನ ಅಂತ್ಯ ಹಾಗೂ ನಡುವೆ ಸಂಭವಿಸುವ ಯುದ್ಧ, ರೋಗಗಳ ಕುರಿತು 500 ವರ್ಷ ಮೊದಲೇ ಅವರ ಪುಸ್ತಕದಲ್ಲಿ ಬರೆದಿದ್ದಾರೆ. 

2024 ರಲ್ಲಿ ಶನಿಯಿಂದ ಯಾರಿಗೆ ಶುಭ ? ಯಾವ ರಾಶಿಗಿದೆ ಶನಿ ಕಾಟ ?

ಲಿವಿಂಗ್ ನಾಸ್ಟ್ರಾಡಾಮಸ್ 2024ರ ಬಗ್ಗೆ ಹೇಳಿದ್ದೇನು ಗೊತ್ತಾ? : ಇಂತಹ ಕಾಲಜ್ಞಾನ ಕೋಟ್ಯಂತರ ಜನರಲ್ಲಿ ಒಬ್ಬರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಅಂಥವರಲ್ಲಿ ಅಥೋಸ್ ಸಲೋಮ್ ಕೂಡ ಒಬ್ಬ. ಈತ ನುಡಿದ ಅನೇಕ ಭವಿಷ್ಯವಾಣಿಗಳು ನಿಜವಾಗಿರುವುದರಿಂದ ಈತನನ್ನು ಜೀವಂತ ನಾಸ್ಟ್ರಾಡಾಮಸ್ ಎನ್ನಲಾಗುತ್ತದೆ. ಬ್ರೆಜಿಲ್ ನಿವಾಸಿಯಾಗಿರುವ ಅಥೋಸ್ ಸಲೋಮ್ ತಾನು ಹೇಳುವ ಭವಿಷ್ಯವಾಣಿಯಿಂದಲೇ ಪ್ರಸಿದ್ಧಿಯಾಗಿದ್ದಾನೆ. ಈತ ರಾಣಿ ಎರಡನೇ ಎಲಿಜಬೆತ್ ಸಾವಿನಿಂದ ಹಿಡಿದು ಎಲಾನ್ ಮಸ್ಕ್ ಅವರ ಟ್ವಿಟರ್ ಖಾತೆಯ ಸುಲಿಗೆ ಮುಂತಾದ ಕೆಲವು ಪ್ರಪಂಚದ ಪ್ರಮುಖ ಘಟನೆಗಳ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ. ಈಗ ಈ ಜೀವಂತ ಲಿವಿಂಗ್ ನಾಸ್ಟ್ರಾಡಾಮಸ್ 2024ನೇ ಇಸವಿಯ ಕುರಿತು ಎಚ್ಚರಿಕೆ ನೀಡಿದ್ದಾನೆ. 2024ರಲ್ಲಿ ಉಂಟಾಗುವ ಅನಾಹುತಗಳ ಬಗ್ಗೆ ಭವಿಷ್ಯ ನುಡಿದಿದ್ದಾನೆ.

ಜೀವಂತ ನಾಸ್ಟ್ರಾಡಾಮಸ್  2024ರಲ್ಲಿ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಿಸಿಟಿವಿ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಚೀನಾ ಮತ್ತು ಅಮೆರಿಕದಲ್ಲಿ ತಯಾರಾಗುತ್ತಿರುವ ಫೇಶಿಯಲ್ ರಿಕಗ್ನಿಶನ್ ಟೆಕ್ನಾಲಜಿ ಒಂದು ಹೊಸ ಯುಗವನ್ನೇ ಸೃಷ್ಟಿಸುತ್ತದೆ. ಇದರಲ್ಲಿ ಯಾವುದೇ ರೀತಿಯ ಗೌಪ್ಯತೆ ಎನ್ನುವುದೇ ಇರೋದಿಲ್ಲ  ಎಂದಿದ್ದಾರೆ. ನಾವು ಈಗ ಅತಿರೇಕ ಎನಿಸುವಷ್ಟು ಆಧುನಿಕ ಕಣ್ಗಾವಲು ಮತ್ತು ಸುರಕ್ಷತೆಯ ಕಡೆ ವಾಲುತ್ತಿದ್ದೇವೆ. ಇದರಿಂದಲೇ ಸರ್ಕಾರ ಮತ್ತು ನಿಗಮಗಳಿಗೆ ಜನರ ವೈಯಕ್ತಿಕ ಮಾಹಿತಿ ದೊರೆಯುತ್ತದೆ. ಇದೊಂದು ದೊಡ್ಡ ಮೋಸದ ಬಲೆಯಾಗಲಿದೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಅಥೋಸ್ ಅವರು ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ.

ಮಂಗಳ ,ಸೂರ್ಯನಿಂದ ಆದಿತ್ಯ ಮಂಗಳ ಯೋಗ ಈ ರಾಶಿಗೆ 2024 ರಲ್ಲಿ ಜಾಕ್‌ಪಾಟ್‌

ಅಥೋಸ್ ಅವರು ಹೀಗೆ ಹೇಳುವ ಮೊದಲೇ ರೂಸ್ ನಲ್ಲಿ 50 ಲಕ್ಷ ಕ್ಯಾಮರಾಗಳನ್ನು ಅಳವಡಿಸಿದ್ದಾರೆ ಎಂಬ ಸುದ್ದಿ ಬಂದಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ತಮ್ಮ ನಾಗರಿಕರ ಕಣ್ಗಾವಲನ್ನು ಹೆಚ್ಚಿಸುತ್ತಾರೆ. ರಷ್ಯಾದ ಡಿಜಿಟಲ್ ಅಭಿವೃದ್ಧಿ ಸಚಿವಾಲಯ ದೇಶದ ಎಲ್ಲ ವ್ಯವಸ್ಥೆಗಳನ್ನು ಕೇಂದ್ರೀಕರಿಸಲು ಬಯಸುತ್ತದೆ ಎಂದು ಸುದ್ದಿಯಾಗಿತ್ತು. ಇಂತಹ ವ್ಯವಸ್ಥೆಗಳ ಮೂಲಕ ರಷ್ಯಾದ ಅಧ್ಯಕ್ಷರ ಕಚೇರಿಯಲ್ಲಿರುವ ಜನರ ಫೂಟೇಜ್ ಅನ್ನು ಸಲೀಸಾಗಿ ಪಡೆಯಬಹುದು. ಹಾಗಾಗಿಯೇ ಅಥೋಸ್ ಸಲೋಮ್ ಅವರು ಜನರಿಗೆ ನಿಮ್ಮ ವೈಯಕ್ತಿಯ ಮಾಹಿತಿಯನ್ನು ಈ ರೀತಿ ಸಂಗ್ರಹಿಸಿ ಬಳಸಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದ. ಲಿವಿಂಗ್ ನಾಸ್ಟ್ರಾಡಾಮಸ್ ಖ್ಯಾತಿಯ ಅಥೋಸ್ ಅವರು, ನನ್ನ ಭವಿಷ್ಯವಾಣಿಗಳು ಮೊದಲು ನನ್ನ ಮನಸ್ಸಿನಲ್ಲಿ ಕಲ್ಪನೆಯಂತೆ ಅನಿಸುತ್ತದೆ. ಆದರೆ ನಂತರ ಅದು ನಿಜವಾಗಿ ಪೂರ್ಣತೆಯನ್ನು ಪಡೆಯುತ್ತದೆ. ಕೆಲವು ಘಟನೆಗಳು ಮತ್ತೆ ಮತ್ತೆ ಘಟಿಸಲೂಬಹುದು  ಎಂದು ಹೇಳಿದ್ದಾರೆ.
 

Follow Us:
Download App:
  • android
  • ios