ಯುವತಿಯ ಮದುವೆ ಕಥೆ ಸಿನಿಮಾ ಸಸ್ಪೆನ್ಸ್‌ಗಿಂತ ಕಡಿಮೆಯಿಲ್ಲ. ಪ್ರೀತಿ, ಮೋಸ ಮತ್ತು ಮುರಿದ ಸಂಬಂಧದ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರನ್ನು ಬೆಚ್ಚಿಬೀಳಿಸಿದೆ.

ಕ್ಯಾನೆಬೆರಾ: ಯುವತಿಯಿಬ್ಬಳು ಬರೋಬ್ಬರಿ 6 ವರ್ಷ ಲಿವ್ ಇನ್‌ನಲ್ಲಿ ಇದ್ದಳು, ಮನಸಾರೆ ಪ್ರೀತಿಸಿದಳು. ನಂತರ ಇಬ್ಬರು ತಮ್ಮ ಸಂಬಂಧಕ್ಕೆ ಮುದ್ರೆ ಒತ್ತಲು ಮದುವೆಯಾದರು. ಆದರೆ ಆಕೆಯ ಮದುವೆ 24 ಗಂಟೆಗಳೂ ಉಳಿಯುವುದಿಲ್ಲ ಎಂದು ಆಕೆಗೆ ತಿಳಿದಿರಲಿಲ್ಲ. ಇಷ್ಟು ದೀರ್ಘ ಸಂಬಂಧದ ಹೊರತಾಗಿಯೂ, ಆಕೆ ತನ್ನ ಸಂಗಾತಿಯ ನೀಚ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ರೇಡಿಯೋ ಕಾರ್ಯಕ್ರಮ 'ಲೇಟ್ ಡ್ರೈವ್ ವಿತ್ ಬೆನ್, ಲಿಯಾಮ್ & ಬೆಲ್ಲೆ'ಗೆ ಕರೆ ಮಾಡಿ ತನ್ನ ಕಥೆಯನ್ನು ಯುವತಿ ಹೇಳಿಕೊಂಡು ಭಾವುಕಳಾಗಿದ್ದಾಳೆ.

ಮೋಸಕ್ಕೊಳಗಾದ ಯುವತಿ ಹೆಸರು ಹೆಸರು ಕೈಲೀ (Kylie), ಇವರ ಮದುವೆ 24 ಗಂಟೆಗಳೂ ಉಳಿಯಲಿಲ್ಲ. ಕೈಲೀ ತನ್ನ ಸಂಗಾತಿಯೊಂದಿಗೆ 6 ವರ್ಷಗಳಿಂದ ಸಂಬಂಧದಲ್ಲಿದ್ದೆ ಎಂದು ಹೇಳಿಕೊಂಡಿದ್ದಾರೆ. ಮದುವೆಯ ದಿನ ತುಂಬಾ ಸುಂದರವಾಗಿತ್ತು, ವಿಧಿವಿಧಾನಗಳು ನಡೆದವು, ಫೋಟೋಶೂಟ್ ನಡೆಯಿತು, ಮತ್ತು ಎಲ್ಲವೂ ಪರಿಪೂರ್ಣ ಕಾಲ್ಪನಿಕ ಕಥೆಯಂತೆ ತೋರುತ್ತಿತ್ತು. ಆದರೆ ಆರತಕ್ಷತೆ ಪ್ರಾರಂಭವಾದ ತಕ್ಷಣ ಹುಡುಗ ಹಠಾತ್ತನೆ ಕಣ್ಮರೆಯಾದ. ಮದುವೆಯ ರಾತ್ರಿ ನಾನು ನನ್ನ ಸೂಟ್‌ನಲ್ಲಿ ಒಬ್ಬಂಟಿಯಾಗಿದ್ದೆ ಎಂದು ಆಕೆ ಹೇಳುತ್ತಾರೆ. ನಾನು ತಿಂಗಳುಗಳ ಕಾಲ ಅವನಿಂದ ಏನನ್ನೂ ಕೇಳಲಿಲ್ಲ.”

ಗಂಡ ಇನ್ನೊಬ್ಬಳ ಜೊತೆ ಸಂಬಂಧದಲ್ಲಿದ್ದ

ತುಂಬಾ ಚಿಂತೆಗೀಡಾದ ನಂತರ, ಕೈಲೀಗೆ ತಿಳಿದ ಸತ್ಯ ಅವರನ್ನು ಬೆಚ್ಚಿಬೀಳಿಸಿತು. ಹುಡುಗನಿಗೆ ಮದುವೆಯಾಗಬೇಕೆಂಬ ಇರಲಿಲ್ಲ. ಅವನು ಸದಾ ಇನ್ನೊಬ್ಬಳ ಜೊತೆ ಸಂಬಂಧದಲ್ಲಿದ್ದ. ಆದರೆ ಕಥೆಯಲ್ಲಿ ನಿಜವಾದ ತಿರುವು ಬಂದದ್ದು ಕೈಲೀಗೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದ ಹುಡುಗಿ ಬೇರೆ ಯಾರೂ ಅಲ್ಲ, ತನ್ನದೇ ಸೋದರಸಂಬಂಧಿ ಎಂದು ತಿಳಿದಾಗ ಕೈಲಿ ಶಾಕ್ ಆಗಿದ್ದಳು

ಈಗ ಗಂಡನೂ ಇಲ್ಲ, ಸೋದರಸಂಬಂಧಿಯೂ ಇಲ್ಲ

ಕೈಲೀ ರೇಡಿಯೋ ಕಾರ್ಯಕ್ರಮದಲ್ಲಿ ಈಗ ಇಬ್ಬರೂ ತನ್ನ ಜೀವನದಿಂದ ಸಂಪೂರ್ಣವಾಗಿ ಹೊರಗಿದ್ದಾರೆ ಎಂದು ಹೇಳಿದರು. ನಾನು ಈಗ ಅವನನ್ನೂ ಭೇಟಿಯಾಗುವುದಿಲ್ಲ, ನನ್ನ ಸೋದರಸಂಬಂಧಿಯನ್ನೂ ಭೇಟಿಯಾಗುವುದಿಲ್ಲ. ತುಂಬಾ ವಿಚಿತ್ರ ಪರಿಸ್ಥಿತಿ ಉಂಟಾಗುತ್ತಿತ್ತು. ಕೈಲೀ ವಿಚ್ಛೇದನ ಪಡೆದು ತನ್ನ ನೋವಿನ ಅನುಭವದಿಂದ ಹೊರಬಂದಿದ್ದಾರೆ. ಆದರೂ ಆಕೆ ಮತ್ತೆ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಕೈಲೀ ಕಣ್ಣೀರಿನ ಕಥೆ ಸೋಶಿಯಲ್ ಮೀಡಿಯದಲ್ಲಿ ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.

ಮದುವೆ ನಿರಾಕರಿಸಿದ ವಧು

ತಾಳಿ ಕಟ್ಟುವ ವೇಳೆ ವಧು ಮದುವೆ ನಿರಾಕರಿಸಿದ ಪರಿಣಾಮ ಮದುವೆ ನಿಂತು ಹೋದ ಘಟನೆ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ. ಚಳ್ಳಕೆರೆ ಸುಕನ್ಯಾ ಹಾಗೂ ಜಿ.ಟಿ. ಮಧು ದಂಪತಿ ಮಗಳು ಯಮುನಾ ಜಿ.ಎಂ ಹಾಗೂ ಚಿಕ್ಕಬ್ಯಾಲದಕೆರೆ ನಾಗರತ್ನಮ್ಮ ಹಾಗೂ ಸಿ.ಬಿ. ಲಕ್ಷ್ಮಣ್ಣ ದಂಪತಿ ಮಗ ಮಂಜುನಾಥ್ ಅವರೊಂದಿಗೆ ಚಿಕ್ಕಬ್ಯಾಲದಕೆರೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು‌. ಶಾಸ್ತ್ರೋಕ್ತವಾಗಿ ಮದುವೆ ನಡೆಸಲು ಹಿರಿಯರೆಲ್ಲಾ ನಿರ್ಧರಿಸಿದ್ದರು. ಅದರಂತೆ ಅದ್ಧೂರಿಯಾಗಿ ಮದುವೆ ಆಯೋಜನೆ ಮಾಡಿದ್ದರು.

ಎಲ್ಲರ ಒಪ್ಪಿಗೆಯಂತೆ ಬುಧವಾರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಹಲವು ಶಾಸ್ತ್ರಗಳು ನಿಯಮವಾಗಿಯೇ ನಡೆದಿದ್ದವು. ಬೆಳಗ್ಗೆ 9.30ಕ್ಕೆ ತಾಳಿ ಕಟ್ಟುವ ಸಮಯದಲ್ಲಿ ವಧು ಬಲಗೈಯಲ್ಲಿ ತಾಳಿ ತಳ್ಳಿದ್ದಾಳೆ. ಹಿರಿಯರು, ಸಂಬಂಧಿಕರು ಎಷ್ಟೇ ಮನವೊಲಿಸಿದರು ವಧು ಮಾತ್ರ ಮದುವೆ ನಿರಾಕರಿಸಿದ್ದಾಳೆ. ವಧುವಿನ ವರ್ತನೆಯಿಂದ ವರ ಹಾಗೂ ಆತನ ಕುಟುಂಬ ವಿಚಲಿತರಾಗಿದ್ದಾರೆ. ವಧುವಿನ ಪೋಷಕರು ಹಾಗೂ ವರನ ಪೋಷಕರ ನಡುವೆ ಕೆಲಕಾಲ ಮಾತಿನ ಚಕಮುಕಿ ನಡೆದಿದೆ. ನಂತರ ಮದುವೆ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Bride Cheating: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 8 ಮದುವೆ..ಇವ್ಳು ಕಿಲಾಡಿ ಲೇಡಿ!