ಈಕೆ ಎಷ್ಟು ಚಾಲಾಕಿ ಲೇಡಿ ಎಂದರೆ, ಒಂದಲ್ಲ ಎರಡಲ್ಲ ನಾಲ್ಕು ರಾಜ್ಯಗಳಲ್ಲಿ ಈಕೆ ಮಾಡಿಕೊಂಡಿದ್ದು 8 ಮದುವೆ. ಪ್ರತಿ ಮದುವೆ ಮಾಡಿಕೊಂಡ ಬಳಿಕ ಚಿನ್ನ ಹಾಗೂ ಹಣ ಎತ್ತಿಕೊಂಡು ನಾಪತ್ತೆಯಾಗುತ್ತಿದ್ದಳು.
ಚೆನ್ನೈ (ಜು.13): ಪೊಲೀಸರು, ಸೈಬರ್ ತಜ್ಞರು ಹಾಗೂ ಸೋಶಿಯಲ್ ಮೀಡಿಯಾ ತಜ್ಞರು ಸಾಕಷ್ಟು ಬಾರಿ ಈ ಎಚ್ಚರಿಕೆಯನ್ನು ನೀಡಿಯೇ ಇರುತ್ತಾರೆ. ಆನ್‌ನೈಲ್‌ನಲ್ಲಿ ಪರಿಚಿತವಾದ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡುವುದು ಒಳ್ಳೆಯದಲ್ಲ ಎನ್ನುವ ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ. ಆದರೆ, ಇಂಥ ಪ್ರಕರಣಳು ಆಗೋದು ನಿಲ್ಲೋದೇ ಇಲ್ಲ. ಆನ್‌ಲೈನ್‌ನಲ್ಲಿ ಪರಿಚಯವಾದ ಹುಡುಗಿ ಅಥವಾ ಹುಡುಗನೊಂದಿಗೆ ಡೇಟಿಂಗ್ ನಡೆಸಿ ಕೊನೆಗೆ ಮೋಸಹೋಗುವ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂಥ ಘಟನೆಗಳು ಆದಾಗ ಹುಡುಗಿ ಅಥವಾ ಹುಡುಗಿ ಸಿಕ್ಕಿದ್ದನ್ನು ಬಾಚಿಕೊಂಡು ಓಡಿ ಹೋಗಿದ್ದನ್ನು ನೋಡಿದ್ದೇವೆ. ಕೆಲವೊಂದು ಪ್ರಕರಣಗಳಳಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾದ ಹುಡುಗ ಅಥವಾ ಹುಡುಗಿಯೊಂದಿಗೆ ಪ್ರೀತಿ, ಡೇಟಿಂಗ್ ಮಾತ್ರವಲ್ಲದೆ ಮದುವೆಯಾಗಿದ್ದನ್ನೂ ನೋಡಿದ್ದೇವೆ.ಮದುವೆಯಾದ ಬಳಿಕ ಸಿಕ್ಕಿದ್ದನ್ನು ದೋಚಿಕೊಂಡು ಪರಾರಿಯಾಗುವವರನ್ನು ಕಂಡಿದ್ದೇವೆ. ಆದರೆ, ತಮಿಳುನಾಡಿನಲ್ಲಿ ಆದ ಪ್ರಕರಣ ಭಿನ್ನವಾದದ್ದು.
ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂ ಪ್ರದೇಶದಲ್ಲಿ ಫೈನಾನ್ಸ್ ವ್ಯಾಪಾರಿಯಾಗಿರುವ ಮೂರ್ತಿ ಎಂಬ ವ್ಯಕ್ತಿ ರಶೀದಾ ಎಂಬ ಯುವತಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪರಿಚಯಮಾಡಿಕೊಂಡಿದ್ದರು. ಈ ಪರಿಚಯದ ಭಾಗವಾಗಿ, ಇಬ್ಬರೂ ನಿರಂತರ ಚಾಟ್ ಕೂಡ ಮಾಡುತ್ತಿದ್ದರು. ದಿನೇ ದಿನೇ ಈ ಚಾಟ್ ಪ್ರೀತಿಗೆ ತಿರುಗಿತು. ಹಾಗಾಗಿ ಅವರು ಕೆಲವು ದಿನಗಳ ಕಾಲ ರಿಲೇಷನ್‌ಷಿಪ್‌ನಲ್ಲೂ ಇದ್ದರು. ನಂತರ ಮೂರ್ತಿ ಮತ್ತು ರಶೀದಾ ಈ ವರ್ಷ ಮಾರ್ಚ್ 30 ರಂದು ವಿವಾಹವಾಗುವ ನಿರ್ಧಾರ ಮಾಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಕಲಹ ಉಂಟಾಗಿತ್ತು. ದಿನ ಕಳೆದಂತೆ ಜಗಳಗಳು ಕೂಡ ಹೆಚ್ಚಾಗಿದ್ದವು. ಇದರಿಂದ ಜುಲೈ 4ರಂದು ರಶೀದಾ ಮನೆಯಲ್ಲಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ 5 ತೊಲೆ ಚಿನ್ನಾಭರಣ ತೆಗೆದುಕೊಂಡು ಓಡಿ ಹೋಗಿದ್ದಳು. ಈ ವಿಷಯ ಗೊತ್ತಾದ ತಕ್ಷಣ ಮೂರ್ತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.\
'ಸೊಂಟದ ವಿಷ್ಯ' ಮಾತಿಗೆ ಫುಲ್ ಟ್ರೋಲ್, ಕವಿತೆ ಬರೆದು ಸೈಲೆಂಟ್ ಮಾಡಿದ ಬಿಗ್ ಬಾಸ್ ಸ್ಪರ್ಧಿ!
ಪೊಲೀಸರು ಮೂರ್ತಿ ಅವರ ಪತ್ನಿ ರಶೀದಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭ ಮಾಡಿದ್ದರು. ರಶೀದಾ ತನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿದ್ದನ್ನು ಮೂರ್ತಿ ಪೊಲೀಸರಿಗೆ ತಿಳಿಸಿದ್ದಾರೆ. ಅದನ್ನು ಆಧರಿಸಿ ರಶೀದಾಳನ್ನು ತನಿಖೆಗೆ ಒಳಪಡಿಸಿದ ಪೊಲೀಸರಿಗೆ ಆಕೆಯ ಅಚ್ಚರಿಯ ಸಂಪರ್ಕಗಳು ಬೆಳಕಿಗೆ ಬಂದಿವೆ. ರಶೀದಾಗೆ ವಧು ಆಗಿರುವುದೇ ಹವ್ಯಾಸ ಎನ್ನುವುದನ್ನು ಕಖಡುಕೊಂಡರು. ರಶೀದಾ ಅನೇಕ ಯುವಕರೊಂದಿಗೆ ಇನ್ಸ್‌ಟಾಗ್ರಾಮ್‌ನಲ್ಲಿ ಚಾಟ್ ಮಾಡಿದ್ದಾಳೆ. ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರಿಕ್ವೆಸ್ಟ್ ಕಳಿಸುತ್ತಿದ್ದ ಆಕೆ ಆ ಬಳಿಕ ಅವರೊಂದಿಗೆ ಚಾಟ್ ಮಾಡುತ್ತಿದ್ದರು. ಬಳಿಕ ಮದುವೆ ಪ್ರಸ್ತಾಪವಿಡುತ್ತಿದ್ದ ರಶೀದಾ, ಮದುವೆ ಬಳಿಕ ನಗದು ಹಾಗೂ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗುತ್ತಿದ್ದಳು.
ಚಾರಿಟಿಗೆ ಹಣ ನೀಡಿದ್ರೆ ಅಭಿಮಾನಿಗಳಿಗೆ ನನ್ನ ಬೆತ್ತಲೆ ಚಿತ್ರವೇ ಗಿಫ್ಟ್: ನೀಲಿ ತಾರೆಯ ಆಫರ್!
ರಶೀದಾ ಇದುವರೆಗೆ 4 ರಾಜ್ಯಗಳಲ್ಲಿ 8 ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಹಣ, ಬಂಗಾರದೊಂದಿಗೆ ಪರಾರಿಯಾಗಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ತಮಿಳುನಾಡಿನಲ್ಲಿ ಮೂರ್ತಿ ಎಂಬ ಉದ್ಯಮಿಗೆ ವಂಚಿಸುವ ಮೊದಲು ಆಕೆ ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ 7 ಜನರನ್ನು ಮದುವೆಯಾಗಿದ್ದಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಶೀದಾಗಾಗಿ ತೀವ್ರ ಶೋಧ ನಡೆಸಿದ್ದಾರೆ. ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.
