ಅನಾಮಿಕರೊಂದಿಗೆ ವಧುವಿನ ಕಾದಾಟ| ವೈರಲ್ ಆಯ್ತು ವಿಡಿಯೋ| ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರಣ ಬಹಿರಂಗಪಡಿಸಿದ ವಧು

ವೇಲ್ಸ್(ಸೆ.10): ವಧುವೊಬ್ಬಳ ಶಾಕಿಂಗ್ ವಿಡಿಯೋ ಇಂಟರ್ಎಟ್‌ನಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮದುಮಗಳು ಅಜ್ಞಾತ ವ್ಯಕ್ತಿಯೊಂದಿಗೆ ಜಗಳವಾಡುತ್ತಿರುವ ದೃಶ್ಯವಿದೆ. ಇನ್ನು ಫಾಕ್ಸ್‌ ನ್ಯೂಸ್‌ ಅನ್ವಯ ದಕ್ಷಿಣ ವೇಲ್ಸ್‌ನ ಸ್ವಾನ್ಸಿಯಲ್ಲಿ ಒಂದು ರಗ್ಬೀ ಕ್ಲಬ್‌ನಲ್ಲಿ ಈ ವಿವಾದವೇರ್ಪಟ್ಟಿದೆ. ಶುಕ್ರವಾರ ಡೇವಿಡ್ ಎಂಬಾತನೊಂದಿಗೆ ಈಕೆಯ ವಿವಾಹ ನಡೆದಿದ್ದು, ಮದುವೆ ಬಳಿಕ ಈ ಜಗಳ ನಡೆದಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಗಳದ ವಿಡಿಯೋವೊಂದನ್ನು ಭಾನುವಾರ ರೆಡಿಟ್‌ಗೆ ಪೋಸ್ಟ್‌ ಮಾಡಲಾಗಿತ್ತು. ಅನೇಕ ಮಂದಿ ಘಟನೆ ಸಂಬಂಧ ಅಚ್ಚರಿ ವ್ಯಕ್ತಪಡಿಸುವ ಸಂದೇಶ ಕಳುಹಿಸಿದ್ದರು. ಹೀಗಾಘಿ ಕೂಡಲೇ ಇದನ್ನು ಡಿಲೀಟ್ ಮಾಡಲಾಗಿತ್ತು. 

ಇನ್ನು ಈ ಸಂಬಂಧ ದ ಸನ್ ವರದಿ ಪ್ರಸಾರ ಮಾಡಿದ್ದು, ಇದರಲ್ಲಿ ವಧು ತಾನು ಯಾರೊಂದಿಗೂ ಜಗಳವಾಡಿಲ್ಲ. ನನಗ್ಯಾರೂ ಹೊಡೆದಿಲ್ಲ. ತಾನು ಗುಂಪಿನ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಲು ಯತ್ನಿಸುತ್ತಿದ್ದೆ ಎಂದು ತಿಳಿಸಿದ್ದಾರೆಂದು ಪ್ರಕಟಿಸಿದೆ.