Real life story: ಇದೊಂದು ನೈಜ ಕಥೆ. ಆದರೆ ಯಾವುದೇ ಹಾಲಿವುಡ್ ಸಿನೆಮಾಗೂ ಕಡಿಮೆಯಿಲ್ಲ. ಮೀನು ಹಿಡಿಯಲು ಸಮುದ್ರಕ್ಕೆ ಹೋದಾತ ಹನ್ನೊಂದು ದಿನಗಳ ಕಾಲ ತೇಲುವ ಫ್ರೀಜರ್ ಮೇಲೆ ಕುಳಿತು ಸಾವನ್ನೇ ಗೆದ್ದು ಬಂದ ಕಥೆ. ಇನ್ನೊಂದು ಮುಖ್ಯ ಅಂಶವೆಂದರೆ ಆತನಿಗೆ ಈಜಲೂ ಬರುವುದಿಲ್ಲ. ನೈಜ ಘಟನೆಯ ರೋಚಕ ಕಥೆ ಇಲ್ಲಿದೆ.
ನವದೆಹಲಿ: ಈ ಘಟನೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಈಜು ಬರದೇ ಸ್ವಿಮ್ಮಿಂಗ್ ಪೂಲ್‌ನಲ್ಲಿ ಒಬ್ಬರೇ ಇಳಿದರೆ ಬದುಕುಳಿಯುವುದು ಕಷ್ಟ. ಅಂತದ್ದರಲ್ಲಿ ಸಮುದ್ರ ಮಧ್ಯದಲ್ಲಿ ಹಡಗು ಮುಳುಗಿದರೆ ಈಜು ಬರದವ ಬದುಕುಳಿಯಲು ಸಾಧ್ಯವೇ? ಅಸಾಧ್ಯ ಎಂದು ಅನಿಸಿದರೂ ಅದನ್ನು ಸಾಧ್ಯವಾಗಿಸಿದ್ದಾನೆ ಬ್ರೆಜಿಲ್‌ನ ಈ ವ್ಯಕ್ತಿ. ಮೀನು ಹಿಡಿಯಲೆಂದು ಆಗಸ್ಟ್ ತಿಂಗಳಲ್ಲಿ ಸಮುದ್ರಕ್ಕೆ ಬೋಟ್‌ನಲ್ಲಿ ಬ್ರೆಜಿಲ್ ವ್ಯಕ್ತಿ ಹೋಗಿದ್ದಾನೆ. ಮೂರು ದಿನಗಳ ಕಾಲ ಮೀನುಗಾರಿಕೆ ಮಾಡುವುದು ಆತನ ಪ್ಲಾನ್ ಆಗಿತ್ತು. ಆದರೆ ಅದು ಮೂರು ದಿನಕ್ಕೆ ಮುಗಿಯಲಿಲ್ಲ. ಮೀನು ಹಿಡಿಯಲು ಹೋದವ ಸಾವು ಬದುಕಿನ ನಡುವೆ ಹೋರಾಡುವಂತಾಯ್ತು. ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆಯಲ್ಲದ ಈ ನೈಜ ಮತ್ತು ರೋಚಕ ಕಥೆ ಇಲ್ಲಿದೆ.
ರೊಮುವಾಲ್ಡೊ ಮಕೆಡೊ ರೋಡ್ರಿಗಸ್ ಆತನ ಹೆಸರು. ಮೂರು ದಿನಗಳಿಗೆ ಮೀನು ಹಿಡಿಯಲು ಸಮುದ್ರಕ್ಕೆ ಏಕಾಂಗಿಯಾಗಿ ಸವಾರಿ ಹೊರಟ. ಮೂರು ದಿನಕ್ಕೆ ಬೇಕಾಗುವಷ್ಟು ನೀರು, ಅಡುಗೆಗೆ ಬೇಕಾದ ಸಾಮಗ್ರಿ ಎಲ್ಲವನ್ನೂ ಆತ ಬೋಟ್‌ನಲ್ಲಿ ಕೊಂಡೊಯ್ದಿದ್ದ. ಆದರೆ ವಿಧಿ ಬೇರೆಯದನ್ನೇ ಯೋಚಿಸಿತ್ತು. ಮೊದಲ ದಿನವೇ ಹಡಗು ಮುಳುಗಲು ಆರಂಭಿಸಿತು. ಮೊದಲೇ ರೋಡ್ರಿಗಸ್‌ಗೆ ಈಜು ಬರುವುದಿಲ್ಲ. ಇನ್ನೇನು ಸಾವು ಬಂದೇ ಬಿಟ್ಟಿತು ಎನ್ನುವಾಗ, ಆತನ ಮನಸ್ಸಿನಲ್ಲಿ ಮಡದಿ ಮಕ್ಕಳು ನೆನಪಿಗೆ ಬಂದರಂತೆ. ಹೇಗಾದರೂ ಮಾಡಿ ಬದುಕುಳಿಯಬೇಕು. ಮಡದಿ ಮಕ್ಕಳ ಬಳಿಗೆ ವಾಪಸ್ ಹೋಗಬೇಕು ಎಂದು ನಿರ್ಧರಿಸಿದ.
"ಸಾವು ನನ್ನ ಕಣ್ಣ ಮುಂದೆಯೇ ಇತ್ತು. ಇನ್ನೇನು ನನ್ನ ಜೀವನ ಮುಗಿಯಿತು ಅಂದುಕೊಂಡೆ. ಆದರೆ ದೇವರು ನನಗೆ ಬದುಕಲು ಇನ್ನೊಂದು ಅವಕಾಶ ಕಲ್ಪಿಸಿಕೊಟ್ಟ," ಎನ್ನುತ್ತಾರೆ ರೋಡ್ರಿಗಸ್. ಬ್ರೆಜಿಲ್‌ನ ರೆಕಾರ್ಡ್ ವಾಹಿನಿಯ ಸಂದರ್ಶನದಲ್ಲಿ ರೋಡ್ರಿಗಸ್ ತನ್ನ ಭಯಾನಕ ಸಾಹಸ ಕಥೆಯನ್ನು ಹಂಚಿಕೊಂಡಿದ್ದಾನೆ.
ಬೋಟ್ ಇನ್ನೇನು ಸಂಪೂರ್ಣ ಮುಳುಗಬೇಕು ಎಂಬ ಸಮಯದಲ್ಲಿ ಬೋಟ್‌ನಲ್ಲಿದ್ದ ಫ್ರೀಜರ್ ಮಾತ್ರ ಮುಳುಗಿರಲಿಲ್ಲ. ಇದನ್ನು ಗಮನಿಸಿದ ರೋಡ್ರಿಗಸ್ ಅದೊಂದೇ ಬದುಕುಳಿಯಲು ಇರುವ ಕಡೆಯ ಅವಕಾಶ ಎಂದು ನಿರ್ಧರಿಸಿದ. "ಬೋಟ್ ಸಂಪೂರ್ಣ ಮುಳುಗುವ ಹಂತದಲ್ಲಿತ್ತು. ಈ ವೇಳೆ ಬೋಟ್‌ನಲ್ಲಿದ್ದ ಫ್ರೀಜರ್ ಮಾತ್ರ ತೇಲುತ್ತಿತ್ತು. ಇದನ್ನು ಗಮನಿಸಿದ ತಕ್ಷಣ ಅದರ ಮೇಲೆ ಹಾರಿದೆ. ನನ್ನ ಭಾರವನ್ನೂ ತಡೆದುಕೊಂಡು ಫ್ರೀಜರ್ ತೇಲುತ್ತಿತ್ತು," ಎನ್ನುತ್ತಾರೆ ರೋಡ್ರಿಗಸ್.
ಇದನ್ನೂ ಓದಿ: Real Stories: ಮನೆಯಲ್ಲಿ ನಗ್ನವಾಗಿರ್ತಾರೆ ಅಮ್ಮ ಮಗಳು…! ಬೆತ್ತಲಾಗಿರೋದೆ ಖುಷಿಯಂತೆ!
11 ದಿನಗಳ ಕಾಲ ಊಟ, ನೀರು, ನಿದ್ದೆ ಯಾವುದೂ ಇರಲಿಲ್ಲ. ಇಡೀ ದಿನ ಬಿಸಿಲು, ರಾತ್ರಿ ಗಾಳಿಯ ರಭಸ ಎಲ್ಲವೂ ರೋಡ್ರಿಗಸ್ ಜೀವವನ್ನು ಹಿಂಡುತ್ತಿತ್ತು. ಇಡೀ ದೇಹ ನೀರಿಲ್ಲದೇ, ಬಿಸಿಲಿನ ಹೊಡೆತಕ್ಕೆ ನಿರ್ಜಲೀಕರಣವಾಗಿತ್ತು. ಆದರೂ ರೋಡ್ರಿಗಸ್ ಜೀವದ ಮೇಲಿನ ಆಸೆಯನ್ನು ಬಿಡಲಿಲ್ಲ. ಕಡೆಯ ಕ್ಷಣದ ವರೆಗೂ ಹೋರಾಡುವ ನಿರ್ಧಾರ ಮಾಡಿದ. ಒಂದು ಸಮಯದಲ್ಲಿ ಶಾರ್ಕ್‌ಗಳು ಪ್ರೀಜರ್‌ನ ಸುತ್ತ ಸುತ್ತು ಹಾಕಲು ಆರಂಭಿಸಿದವು. ರೋಡ್ರಿಗಸ್‌ಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಆದರೆ ಸುಮಾರು ಸುತ್ತು ಹೊಡೆದ ನಂತರ ಅವು ಅಲ್ಲಿಂದ ಹೊರಟವು. ಶಾರ್ಕ್ ಹೋಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಪ್ರೀಜರ್ ಒಳಗೆ ನೀರು ನುಗ್ಗಲು ಆರಂಭವಾಯ್ತು. ಎರಡೂ ಕೈಗಳಿಂದ ಕಷ್ಟಪಟ್ಟು ನೀರನ್ನು ರೋಡ್ರಿಗಸ್ ಆಚೆ ಹಾಕಿದ.
ಇದನ್ನೂ ಓದಿ: ಗಂಡನ ಸಾವಿನ ನೋವಿನಲ್ಲಿ ಬಿಕ್ಕುತ್ತಿದ್ದರೆ ತಂಗಿ - ತಾಯಿಗೆ ಆಕೆಯ ಗೌನ್ ಮೇಲೆ ಕಣ್ಣು
ಹನ್ನೊಂದು ದಿನಗಳ ಕಾಲ ರೋಡ್ರಿಗಸ್ ಜೀವ ಅಂಗೈಯಲ್ಲಿ ಹಿಡಿದು ಸಹಾಯಕ್ಕಾಗಿ ಕಾಯುತ್ತಿದ್ದ. ಕಡೆಗೂ ಆತನ ನಂಬಿಕೆ ಸುಳ್ಳಾಗಲಿಲ್ಲ. ಹನ್ನೊಂದು ದಿನದ ಬಳಿಕ ಬೋಟ್ ಒಂದು ಹತ್ತಿರ ಬಂತು. ಬೋಟ್ ಒಳಗೆ ಯಾರೂ ಇದ್ದಂತೆ ಕಾಣಲಿಲ್ಲ. ಆದರೂ ಇರುವ ಎಲ್ಲಾ ಶಕ್ತಿ ಒಗ್ಗೂಡಿಸಿ ಸಹಾಯಕ್ಕಾಗಿ ಕಿರುಚಿದ. ಕೈಗಳನ್ನು ಬೀಸಿ ಸನ್ಹೆ ಮಾಡಿದ. ಬೋಟ್ ಖಾಲಿ ಇರಲಿಲ್ಲ. ಬೋಟಿನೊಳಗಿದ್ದವರು ಗಮನಿಸಿದರು. ನಂತರ ರೋಡ್ರಿಗಸ್‌ರನ್ನು ಪ್ರೀಜರ್‌ನಿಂದ ರಕ್ಷಣೆ ಮಾಡಿದರು. ಫ್ರೀಜರ್ ತೇಲುತ್ತಾ ಹನ್ನೊಂದು ದಿನಗಳಲ್ಲಿ ಬರೋಬ್ಬರಿ 280 ಮೈಲಿ ದೂರ ಕ್ರಮಿಸಿತ್ತು. 5 ಕೆಜಿಗಿಂತಲೂ ಅಧಿಕ ತೂಕ ಕಳೆದುಕೊಂಡಿದ್ದ.
ಇದನ್ನೂ ಓದಿ: ಹಸುಗೂಸನ್ನು ಬಿಟ್ಟು ನೀರಿಗೆ ಹಾರಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ಮಹಿಳೆ
ರೋಡ್ರಿಗಸ್ ಕಣ್ಣಿಗೆ ಪೆಟ್ಟಾಗಿತ್ತು. ದೇಹ ಸಂಪೂರ್ಣವಾಗಿ ದಣಿದಿತ್ತು. ದೇಹದಲ್ಲಿ ನೀರಿನ ಅಂಶವೇ ಇರಲಿಲ್ಲ ಎಂದರೂ ಅತಿಶಯೋಕ್ತಿ ಆಗದು. ಬಿಸಿಲು - ಗಾಳಿಯ ರಭಸಕ್ಕೆ ಕಣ್ಣಿಗೆ ಪೆಟ್ಟಾಗಿತ್ತು. ರಕ್ಷಣೆಯ ನಂತರ ಫಸ್ಟ್ ಏಡ್ ನೀಡಲಾಯಿತು. ಆತ ಸಮುದ್ರದಲ್ಲಿ ತುಂಬಾ ದೂರ ಕ್ರಮಿಸಿದ್ದ ಮತ್ತು ಆತ ಸರಿನೇಮ್ ಎಂಬ ದಕ್ಷಿಣ ಅಮೆರಿಕಾದ ದೇಶವೊಂದರ ಕರಾವಳಿ ಪ್ರದೇಶಕ್ಕೆ ಬಂದಿದ್ದ. ಅಧಿಕೃತವಾಗಿ ಅಲ್ಲಿ ಪ್ರವೇಶಿಸಲು ಆತನ ಬಳಿ ಅನುಮತಿ ಇರಲಿಲ್ಲ. ಎರಡು ವಾರಗಳ ಕಾಲ ಪೊಲೀಸರು ರೋಡ್ರಿಗಸ್ ವಶಕ್ಕೆ ಪಡೆದರು. ನಂತರ ಬ್ರೆಜಿಲ್‌ಗೆ ರೋಡ್ರಿಗಸ್‌ನನ್ನು ಹಸ್ತಾಂತರಿಸಲಾಗಿದೆ.
