ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಮಸೀದಿ ಬಳಿ ಸ್ಫೋಟ: 52 ಜನರ ಸಾವು, 130ಕ್ಕೂ ಹೆಚ್ಚು ಜನರಿಗೆ ಗಾಯ
ಪಾಕಿಸ್ತಾನದ ಕರಾಚಿಯ ಬಳಿ ಮಸೀದಿಯೊಂದರ ಸಮೀಪ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ 52 ಜನ ಮೃತಪಟ್ಟಿದ್ದು, 130ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕರಾಚಿ: ಪಾಕಿಸ್ತಾನದ ಕರಾಚಿಯ ಬಳಿ ಮಸೀದಿಯೊಂದರ ಸಮೀಪ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ 52 ಜನ ಮೃತಪಟ್ಟಿದ್ದು, 130ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಈದ್ ಮಿಲಾದುನ್ ನಬಿ ಆಚರಿಸಲು ಹಾಗೂ ಶುಕ್ರವಾರದ ಪ್ರಾರ್ಥನೆಯ ಸಲುವಾಗಿ ಜನ ಸೇರಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಈ ದುರಂತ ನಡೆದಿದೆ. ಇದೊಂದು ಆತ್ಮಾಹುತಿ ಬಾಂಬ್ ಸ್ಫೋಟವೆಂದು ತಿಳಿದು ಬಂದಿದೆ. ಪ್ರವಾದಿಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಜನ ಸೇರಿದ್ದ ವೇಳೆ ಈ ಅನಾಹುತಕಾರಿ ಘಟನೆ ನಡೆದಿದೆ.
ಘಟನೆ ವೇಳೆ ಇಲ್ಲಿ ಕರ್ತವ್ಯದಲ್ಲಿದ್ದ ಮಸ್ತುಂಗ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ನವಾಜ್ ಗಶ್ಕೋರಿ ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಸ್ತುಂಗ್ ನಗರದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮೊಹಮ್ಮದ್ ಜಾವೇದ್ ಲೆಹ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸ್ಫೋಟವು ಆತ್ಮಹತ್ಯಾ ದಾಳಿಯಿಂದ ಸಂಭವಿಸಿದೆ. ಆತ್ಮಾಹುತಿ ಬಾಂಬರ್ ಡಿಎಸ್‌ಪಿಯ ಕಾರಿನ ಪಕ್ಕದಲ್ಲೇ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ
ಈ ಅನಾಹುತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿ ಘೋಷಿಸಲಾಗಿದೆ. ದುರಂತದಲ್ಲಿ ಕನಿಷ್ಠ 52 ಮಂದಿ ಬಲಿಯಾಗಿ, 130ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಶಹೀದ್ ನವಾಬ್ ಘೌಸ್ ಭಕ್ಷ್ ರೈಸಾನಿ ಸ್ಮಾರಕ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಯೀದ್ ಮಿರ್ವಾನಿ ಅವರ ಹೇಳಿಕೆ ಉಲ್ಲೇಖಿಸಿ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಟಿವಿ ಡಿಬೇಟ್‌ನಲ್ಲಿ ಕ್ಯಾಮರಾ ಮುಂದೆಯೇ ಹೊಡೆದಾಡಿಕೊಂಡ ಪಾಕ್ ನಾಯಕರು: ವೀಡಿಯೋ
ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಮಸ್ತುಂಗ್‌ಗೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳನ್ನು ಕ್ವೆಟ್ಟಾದ (Quetta) ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ ಎಂದು ಬಲೂಚಿಸ್ತಾನದ (Balochistan) ಮಧ್ಯಂತರ ಮಾಹಿತಿ ಸಚಿವ ಜಾನ್ ಅಚಕ್ಝೈ (Jan Achakzai) ಅವರು ಹೇಳಿದ್ದಾರೆ.
ಶತ್ರುಗಳು ವಿದೇಶದ ಆಶೀರ್ವಾದದೊಂಗೆ ಬಲೂಚಿಸ್ತಾನದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಶಾಂತಿಯನ್ನು ನಾಶ ಮಾಡಲು ಬಯಸುತ್ತಿದ್ದಾರೆ. ಈ ಸ್ಫೋಟ ಪರಿಣಾಮವನ್ನು ಸಹಿಸಲಾಗುತ್ತಿಲ್ಲ. ಸ್ಫೋಟಕ್ಕೆ ಕಾರಣರಾದವರನ್ನು ಬಂಧಿಸುವಂತೆ ನಿಯೋಜಿತ ಮುಖ್ಯಮಂತ್ರಿ (Chief Minister) ಅಲಿ ಮರ್ದಾನ್ ಡೊಮ್ಕಿ(Mardan Domki) ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಚಕ್ಜೈ ಹೇಳಿದ್ದಾರೆ.