Asianet Suvarna News Asianet Suvarna News

ಟಿವಿ ಡಿಬೇಟ್‌ನಲ್ಲಿ ಕ್ಯಾಮರಾ ಮುಂದೆಯೇ ಹೊಡೆದಾಡಿಕೊಂಡ ಪಾಕ್ ನಾಯಕರು: ವೀಡಿಯೋ

 ಸುದ್ದಿ ವಾಹಿನಿಯ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಇಬ್ಬರು ನಾಯಕರು ಟಿವಿ ಮುಂದೆಯೇ ಪರಸ್ಪರ ತಲೆ ಕೂದಲು ಎಳೆದುಕೊಂಡು ಹೊಡೆದಾಡಿಕೊಂಡ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Pakistan political leaders slaps each other on TV debate video gone viral akb
Author
First Published Sep 29, 2023, 3:00 PM IST

ಕರಾಚಿ:  ಸುದ್ದಿ ವಾಹಿನಿಯ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಇಬ್ಬರು ನಾಯಕರು ಟಿವಿ ಮುಂದೆಯೇ ಪರಸ್ಪರ ತಲೆ ಕೂದಲು ಎಳೆದುಕೊಂಡು ಹೊಡೆದಾಡಿಕೊಂಡ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಪರವಾಗಿ ವಕೀಲ ಶೇರ್ ಅಫ್ಜಲ್ ಮರ್ವಾತ್ (Sher Afzal Marwat) ಹಾಗೂ ಪಾಕಿಸ್ತಾನದ ಮುಸ್ಲಿಂ ಲೀಗ್‌ ನವಾಜ್‌ ಪಕ್ಷದ ಪರವಾಗಿ (PML-N) ಸಂಸದ ಅಫ್ನಾನುಲ್ಲಾ ಖಾನ್ ಅವರು ಟಿವಿ ಚರ್ಚೆಯಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿದೆ. ಕ್ಯಾಮರಾ ಮುಂದೆಯೇ ಇಬ್ಬರು ಪರಸ್ಪರ ಹೊಡೆದಾಡಿಕೊಂಡು ಕೂದಲು ಎಳೆದು ನಾಚಿಕೆಗೇಡಿನ ವರ್ತನೆ ತೋರಿದ್ದಾರೆ. ಪಾಕಿಸ್ತಾನ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಈ ಘಟನೆ ನಡೆದಿದೆ. 

ಪರಸ್ಪರ ವಿರೋಧಿ ಬಣಗಳ ಈ ನಾಯಕರ ಚರ್ಚೆಯೂ ಕೆಟ್ಟ ತಿರುವು ಪಡೆದುಕೊಂಡು ಪರಸ್ಪರ ಹೊಯ್‌ಕೈ ಹಂತ ತಲುಪಿತು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಬಿಳಿ ಗೀಟುಗಳಿರುವ ಮೆರೂನ್ ಬಣ್ಣದ ಶರ್ಟ್‌ ಧರಿಸಿರುವ ಶೇರ್ ಅಫ್ಷಜಲ್ ಮರ್ವಾತ್ (Sher Afzal Marwat), ಮೊದಲಿಗೆ ಕುಳಿತಿದ್ದ ಚೇರ್‌ನಿಂದ ಎದ್ದು ನಿಂತಿದ್ದಾರೆ. ನಂತರ ತಮ್ಮ ವಿರೋಧಿ ಬಣದ ಅಫ್ನಾನುಲ್ಲಾ ಖಾನ್ (Afnanullah Khan) ಕೆನ್ನೆಗೆ ಬಾರಿಸಿದ್ದಾರೆ. 

ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ

ಈ ವೇಳೆ ಅಫ್ನಾನುಲ್ಲಾ ಖಾನ್ ಕೂಡ ತಿರುಗಿಸಿ ಬಾರಿಸಿದ್ದು, ಇಬ್ಬರು ಪ್ಯಾನಲ್‌ನಿಂದ ಎದ್ದು ಹೋಗಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸುದ್ದಿ ನಿರೂಪಕ ಇವರಿಬ್ಬರನ್ನು ತಡೆಲು ಯತ್ನಿಸಿದರಾದರು ಫಲ ಕೊಡಲಿಲ್ಲ, ಸ್ವಲ್ಪ ಹೊತ್ತಿನಲ್ಲೇ ಅವರು ಕಿತ್ತಾಡುತ್ತಾ ನ್ಯೂಸ್‌ ಡೆಸ್ಕ್‌ ತಲುಪಿದ್ದಾರೆ. ಈ ವೇಳೆ ಸುದ್ದಿ ನಿರೂಪಕರು ಹಾಗೂ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ನ್ಯೂಸ್‌ ಚಾನೆಲ್‌ (News Channel) ಇತರ ಸಿಬ್ಬಂದಿ ಈ ಇಬ್ಬರ ಜಗಳವನ್ನು ತಡೆಯಲು ಯತ್ನಿಸಿ ಇಬ್ಬರನ್ನು ಪ್ರತ್ಯೇಕಗೊಳಿಸಲು ಯತ್ನಿಸಿದ್ದಾರೆ.

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

ಈ ವೀಡಿಯೋ ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದೆ. 36 ಸೆಕೆಂಡ್‌ಗಳ ಈ ವೀಡಿಯೋಗೆ ಅನೇಕರು ಹಲವು ಪ್ರತಿಕ್ರಿಯೆ ನೀಡುತ್ತಿದ್ದಾರೆ.  ಸೆನೆಟರ್ ಅಫ್ನುಲ್ಲಾ ಖಾನ್‌ ಕೂಡ  ಸ್ವತಃ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ನಿನ್ನೆ ಟಾಕ್‌ ಶೋ ಒಂದರಲ್ಲಿ ಮರ್ವಾತ್ ನನ್ನ ಮೇಲೆ  ದಾಳಿ ಮಾಡಿದರು. ಆದರೆ ನಾನು ಅಹಿಂಸೆಯಲ್ಲಿ ನಂಬಿಕೆ ಇರಿಸಿದ್ದೇನೆ. ಆದರೆ ನಾನು ನವಾಜ್ ಶರೀಫ್ ಅವರ ಸೈನಿಕ ಮರ್ವಾತ್ ಅವರ ಈ ಟ್ರಿಕ್‌ ಪಿಟಿಐಗೆ ಹಾಗೂ ವಿಶೇಷವಾಗಿ ಇಮ್ರಾನ್‌ ಖಾನ್ ಅವರಿಗೆ ಒಳ್ಳೆ ಪಾಠ ಕಲಿಸಿದೆ. ಅವರಿಗೆ ಅವರ ಆಕಾರವನ್ನು ನೋಡಲು ಸಾಧ್ಯವಿಲ್ಲ, ಅವರು ಇದಕ್ಕಾಗಿ ದೊಡ್ಡ ಕಪ್ಪು ಕನ್ನಡಕವನ್ನು ಧರಿಸಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.  

ಹೆಲಿಕಾಪ್ಟರ್ ಶಾಟ್‌ ಹೊಡೆಯುವ ಶ್ವಾನ... ಟಾಯ್ಲೆಟ್‌ಗೆ ಹೋಗಿ ಪ್ಲಶ್ ಮಾಡೋ ಬೆಕ್ಕು :ವೈರಲ್ ವೀಡಿಯೋ

ಹೊಡೆದಾಡಿದ್ದಲ್ಲದೇ ಕೆಲವು ಅವಾಚ್ಯ ಪದಗಳಿಂದ ಇವರು ಪರಸ್ಪರ ನಿಂದಿಸಿಕೊಂಡಿದ್ದಾರೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ಅಫ್ಜಲ್ ಪರ ಮತ್ತೆ ಕೆಲವರು ಅಫ್ನುಲ್ ಪರ ಮಾತನಾಡಿದ್ದಾರೆ. ಅಫ್ಜಲ್ ಜೊತೆ ಗಲಾಟೆ ಮಾಡದಂತೆ ಸಲಹೆ ನೀಡಿದ್ದಾರೆ. ಈ ಫೈಟ್‌ನಲ್ಲಿ ಶೇರ್ ಅಫ್ಜಲ್ ಮರ್ವಾತ್ ಚಾಂಪಿಯನ್ ಆಗಿದ್ದಾರೆ ಎಂದು ಮತ್ತೋರ್ವ ಪಿಎಂಎಲ್‌ ಎನ್‌ ಪಕ್ಷದ ಬೆಂಬಲಿಗ ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios