ಖ್ವೆಟ್ಟಾ ರೈಲು ನಿಲ್ದಾದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 24 ಸಾವು, ಸಿಸಿಟಿವಿ ದೃಶ್ಯ ಲಭ್ಯ!
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಖ್ವೆಟ್ಟಾ ರೈಲು ನಿಲ್ದಾಣದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 24 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಖ್ವೆಟ್ಟಾ(ನ.09) ಬಲೂಚಿನಸ್ತಾನದ ಮೇಲೆ ದೌರ್ಜನ್ಯ ಎಸಗುತ್ತಿರುವ ಪಾಕಿಸ್ತಾನಕ್ಕೆ ಇದೀಗ ಎಲ್ಲೆಡೆಗಳಿಂದ ಸಂಕಷ್ಟ ಎದುರಾಗುತ್ತಿದೆ.ಬಲೂಚಿಸ್ತಾನ ಸ್ವಂತ್ರತಗೊಳಿಸುವಂತೆ ನಡೆಸುತ್ತಿರುವ ಹೋರಾಟದ ಭಾಗವಾಗಿ ಇದೀಗ ಭೀಕರ ದುರಂತವೊಂದು ಸಂಭವಿಸಿದೆ. ಪಾಕಿಸ್ತಾನದ ಬಲೂಚಿನಸ್ತಾನ ಪ್ರಾಂತ್ಯದ ಖ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರ ಪರಿಮಾಮ 24 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖ್ವೆಟ್ಟಾ ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಇದು ಆತ್ಮಾಹುತಿ ಬಾಂಬ್ ಸ್ಫೋಟವಾಗಿರುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ಬಲೂಚಿಸ್ತಾನದ ಕ್ವೆಟ್ಟಾದ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಘಟನೆಯು ಪಾಕಿಸ್ತಾನದ ಆಂತರಿಕ ಭದ್ರತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕ್ವೆಟ್ಟಾದ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಬಲೋಚ್ ಅವರು, ಪ್ರಾಥಮಿಕವಾಗಿ ಇದು ಆತ್ಮಾಹುತಿ ಬಾಂಬ್ ದಾಳಿ ಎಂದಿದ್ದಾರೆ. ಪೆಶಾವರಕ್ಕೆ ಹೋಗುವ ಎಕ್ಸ್‌ಪ್ರೆಸ್ ರೈಲು ಕ್ವೆಟ್ಟಾ ರೈಲು ನಿಲ್ದಾಣದಿಂದ ಹೊರಡುವ ಮುನ್ನವೇ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ ಎಂದಿದ್ದಾರೆ. ಆದರೆ ಇದು ಆತ್ಮಾಹುತಿ ದಾಳಿಯೇ ಎಂಬುದನ್ನು ಕ್ವೆಟ್ಟಾ ಪೊಲೀಸರು ಇನ್ನೂ ದೃಢಪಡಿಸಿಲ್ಲ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ಈ ಘಟನೆಯಲ್ಲಿ ಕ್ವೆಟ್ಟಾ ನಿಲ್ದಾಣದ ಮೂಲಸೌಕರ್ಯಕ್ಕೆ ಹೆಚ್ಚಿನ ಹಾನಿಯಾಗಿದೆ. ಸ್ಫೋಟ ಸಂಭವಿಸಿದ ಸ್ಥಳವನ್ನು ಪೊಲೀಸರು ಮತ್ತು ಸೇನಾಪಡೆಗಳು ಸುತ್ತುವರೆದಿವೆ.
ಪಾಕಿಸ್ತಾನದಲ್ಲಿ ಅಂತರ್ಯುದ್ಧದ ಪರಿಸ್ಥಿತಿ
ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳು ಹೆಚ್ಚುತ್ತಿವೆ. ಪ್ರತ್ಯೇಕತಾವಾದಿಗಳು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪಾಕಿಸ್ತಾನದ ವಾಯುವ್ಯ ಭಾಗದಲ್ಲಿಯೂ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದ ಘಟನೆಯು ಪಾಕಿಸ್ತಾನದ ಭದ್ರತಾ ಪಡೆಗಳ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಲೋಚ್ ಲಿಬರೇಶನ್ ಆರ್ಮಿಯಿಂದ ಹೊಣೆ ಹೊತ್ತುಕೊಳ್ಳುವಿಕೆ
ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದ ಹೊಣೆಯನ್ನು ಬಲೋಚ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ. ಈ ಗುಂಪಿನ ವಕ್ತಾರ ಜಿಯಾಂದ್ ಬಲೋಚ್, 'ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ನಾವು ಹೊಣೆ ಹೊತ್ತುಕೊಳ್ಳುತ್ತೇವೆ. ಇಂದು ಬೆಳಿಗ್ಗೆ ಪಾಕಿಸ್ತಾನ ಸೇನೆಯ ಒಂದು ತುಕಡಿಯ ಸೈನಿಕರು ಪದಾತಿ ದಳದ ಶಾಲೆಯಲ್ಲಿ ತರಬೇತಿ ಮುಗಿಸಿ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಹಿಂತಿರುಗುತ್ತಿದ್ದರು. ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಅವರ ಮೇಲೆ ಫಿದಾಯಿನ್ ದಾಳಿ ನಡೆಸಲಾಗಿದೆ. ಬಲೋಚ್ ಲಿಬರೇಶನ್ ಆರ್ಮಿಯ ಫಿದಾಯಿನ್ ಘಟಕವಾದ ಮಜೀದ್ ಬ್ರಿಗೇಡ್ ಈ ದಾಳಿಯನ್ನು ನಡೆಸಿದೆ. ಶೀಘ್ರದಲ್ಲೇ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲಾಗುವುದು' ಎಂದು ಹೇಳಿದ್ದಾರೆ.