ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಕೆಂಪು ಮಣ್ಣು ಸಮುದ್ರಕ್ಕೆ ಸೇರಿ ರಕ್ತದ ಹೊಳೆಯಂತೆ ಕಾಣುತ್ತಿದೆ. ಕಬ್ಬಿಣದ ಆಕ್ಸೈಡ್ ಅಂಶ ಹೆಚ್ಚಿರುವ ಮಣ್ಣಿನಿಂದಾಗಿ ಈ ವಿಶಿಷ್ಟ ವಿದ್ಯಮಾನ ಸಂಭವಿಸಿದೆ.
ಇರಾನ್‌ನಲ್ಲಿ ಧಾರಾಕಾರ ಮಳೆಯಾಗಿದ್ದು, ಈ ಮಳೆ ನೀರು ಅಲ್ಲಿನ ಕಡುಗೆಂಪು ಮಣ್ಣಿನೊಂದಿಗೆ ಮಿಶ್ರಿತಗೊಂಡು ಅದನ್ನು ಸಮುದ್ರಕ್ಕೆ ಹೊತ್ತೊಯ್ಯುತ್ತಿರುವುದರಿಂದ ಆ ಪ್ರದೇಶವಿಡೀ ಕೆಂಪು ರಕ್ತದ ಹೊಳೆಯಂತೆ ಗೋಚರಿಸುತ್ತಿದೆ. ಇರಾನ್‌ನಿಂದ ಹೊರ ಪ್ರಪಂಚದಲ್ಲಿ ವಾಸ ಮಾಡುವ ಜನರಿಗೆ ಅಪರೂಪವೆನಿಸುವ ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಳೆನೀರು ಕಡುಗೆಂಪು ಮಣ್ಣನ್ನು ಬೀಚ್‌ಗೆ ತೊಳೆದುಕೊಂಡು ಹೋಗಿದ್ದು, ಸಮುದ್ರದ ನೀರಿನೊಂದಿಗೆ ಬೆರೆತು ಎದ್ದುಕಾಣುವ ಕೆಂಪು ನೀರು ಅಲ್ಲಿ ಅಲೆಗಳ ಉಬ್ಬರವಿಳಿತಗಳನ್ನು ಸೃಷ್ಟಿಸುವುದನ್ನು ನೋಡಬಹುದಾಗಿದೆ. ಅಂದಹಾಗೆ ಈ ದೃಶ್ಯ ಕಾಣ ಸಿಗುವುದು ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ. ಈ ಬೀಚ್ ತನ್ನ ಕೆಂಪು ಮಣ್ಣಿನಿಂದಾಗಿ ಅಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯು ಈ ಬೀಚನ್ನು ರಕ್ತದ ದೊಡ್ಡ ಮಡುವಿನಂತೆ ಕಾಣುವಂತೆ ಮಾಡಿದೆ.
ಹಾರ್ಮುಜ್ ದ್ವೀಪದ ಅದ್ಭುತ ದೃಶ್ಯ
ಹಾರ್ಮುಜ್ ದ್ವೀಪವೂ ಅಲ್ಲಿನ ಮಣ್ಣಿನಲ್ಲಿ ಹೆಚ್ಚಿನ ಸಾಂದ್ರತೆಯ ಕಬ್ಬಿಣದ ಆಕ್ಸೈಡ್‌ಗೆ ಹೆಸರುವಾಸಿಯಾಗಿದೆ. ಇದು ಕಡಲತೀರಕ್ಕೆ ವಿಶಿಷ್ಟವಾದ ಕೆಂಪು ಬಣ್ಣವನ್ನು ನೀಡುತ್ತದೆ. ಮಳೆಯ ಸಮಯದಲ್ಲಿ, ಈ ಪ್ರದೇಶವು ಕೆಂಪು ಹೊಳೆಯಂತೆ ಕಾಣಿಸುತ್ತಿದೆ. ಈ ಕೆಂಪು ನೀರು ನೀರು ಬಂಡೆಗಳ ಕೆಳಗೆ ಚಿಮ್ಮುತ್ತಾ ಸಮುದ್ರವನ್ನು ಪ್ರವೇಶಿದಾಗ ಕಾಣಿಸುವ ಅದ್ಭುತ ದೃಶ್ಯಗಳು ಅಲ್ಲಿನ ಸ್ಥಳೀಯ ಫೋನ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಪ್ರವಾಸಿ ಮಾರ್ಗದರ್ಶಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಅದ್ಭುತ ದೃಶ್ಯಗಳನ್ನು ಹಲವು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋಗಳು ಪ್ರಪಂಚದ ವಿವಿಧೆಡೆ ಇರುವ ಜನರಿಗೆ ಇರಾನ್‌ನ ಪ್ರಾಕೃತಿಕ ವೈವಿಧ್ಯವನ್ನು ನೋಡುವಂತೆ ಮಾಡಿದೆ.
ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ 11 ವರ್ಷದ ಬಾಲಕಿ ಸಾವು
ಈ ಪ್ರಾಕೃತಿಕ ವಿದ್ಯಮಾನದ ಹೆಸರೇನು?
ಈ ವಿದ್ಯಮಾನವು ವಿಲಕ್ಷಣ ಘಟನೆ ಏನಲ್ಲ, ಗೆಲಾಕ್ ಎಂದು ಕರೆಯಲ್ಪಡುವ ಈ ಮಣ್ಣು ಹೆಚ್ಚಿನ ಪ್ರಮಾಣದ ಕಬ್ಬಿಣದ ಆಕ್ಸೈಡ್ ಅನ್ನು ಹೊಂದಿರುತ್ತದೆ, ಆದ್ದರಿಂದ ಪ್ಲಾಸ್ಮಾ-ಪ್ರಚೋದಕ ವರ್ಣವನ್ನು ಹೊಂದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇರಾನ್‌ನ ಪ್ರವಾಸಿ ಮಾರ್ಗದರ್ಶಿ ಓಮಿದ್ ಬದ್ರೋಜ್ ಹಂಚಿಕೊಂಡಿರುವ ಈ ವೀಡಿಯೊಗಳು ವೀಕ್ಷಕರಲ್ಲಿ ಅಚ್ಚರಿ ಮತ್ತು ಕುತೂಹಲದ ಮಿಶ್ರಣವನ್ನು ಹುಟ್ಟುಹಾಕಿವೆ. ಪ್ರವಾಸಿಗರು ಬಂಡೆಯ ಮೇಲೆ ನಿಂತು ಇರಾನ್‌ನ ಜನಪ್ರಿಯ ದ್ವೀಪದ ರಕ್ತ ಮಳೆಯನ್ನು ಅನುಭವಿಸುತ್ತಿರುವುದನ್ನು ಇವರ ವೀಡಿಯೋಗಳು ತೋರಿಸಿದೆ.
ಪ್ರವಾಸಿಗರ ದಂಡು
ಹಾರ್ಮುಜ್‌ನ ಕೆಂಪು ಕರಾವಳಿಯಲ್ಲಿ ಪ್ರಸಿದ್ಧ ಭಾರೀ ಮಳೆ ಆರಂಭವಾಗಿದೆ. ಈ ಅದ್ಭುತ ಮಳೆಯನ್ನು ನೋಡಲು ಪ್ರವಾಸಿಗರು ಧಾವಿಸುತ್ತಿದ್ದಾರೆ ಎಂದು ಫೆಬ್ರವರಿ ಅಂವ ತ್ಯದಲ್ಲಿ ಅಪ್‌ಲೋಡ್ ಮಾಡಲಾದ ತಮ್ಮ ವೀಡಿಯೊ ಪೋಸ್ಟ್‌ಗಳಲ್ಲಿ ಒಂದಕ್ಕೆ ಓಮಿಡ್ ಅವವರು ಶೀರ್ಷಿಕೆ ನೀಡಿದ್ದರು. ಮಳೆಬಿಲ್ಲು ದ್ವೀಪ ಎಂದು ಕರೆಯಲ್ಪಡುವ ಹಾರ್ಮುಜ್ ದ್ವೀಪವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡುವ ಇರಾನ್‌ನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಈ ಬೀಚ್ 70 ಕ್ಕೂ ಹೆಚ್ಚು ಖನಿಜಗಳಿಗೆ ನೆಲೆಯಾಗಿದೆ ಎಂಬ ಮಾಹಿತಿ ಇದೆ.
ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್‌ಬುಲ್ ನಾಯಿ
ವೈರಲ್ ಆದ ವೀಡಿಯೋ ಇಲ್ಲಿದೆ ನೋಡಿ
