ಹ್ಯಾರಿ ಪಾಟರ್ ಥೀಮ್ ಸಾಂಗ್ ಹಾಡುವ ಪುಟ್ಟ ಹಕ್ಕಿ: ವಿಡಿಯೋ ವೈರಲ್
- ಪುಟ್ಟ ಹಕ್ಕಿಯ ವಿಡಿಯೋ ವೈರಲ್
- ಹ್ಯಾರಿ ಪಾಟರ್ ಥೀಮ್ ಸಾಂಗ್ ಹಾಡುವ ಹಕ್ಕಿ
- ಹಕ್ಕಿಯ ಕಂಠಸಿರಿಗೆ ನೆಟ್ಟಿಗರು ಫಿದಾ
ಮೊದಲ ಬಾರಿಯ ಹ್ಯಾರಿ ಪಾಟರ್ ಚಿತ್ರ ಹೊರಬಂದು ಸುಮಾರು 20 ವರ್ಷಗಳೇ ಕಳೆದಿರಬಹುದು. ಆದಾಗ್ಯೂ, ಈ ಹ್ಯಾರಿ ಪಾಟರ್ ಸಿನಿಮಾದಲ್ಲಿ ಬರುವ ಮಾಂತ್ರಿಕ ಶಾಲೆ ಹಾಗ್ವಾರ್ಟ್ಸ್‌ಗೆ ಸಂಬಂಧಿಸಿದಂತೆ ಅಭಿಮಾನಿಗಳ ನೆನಪು ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಆ ಸೀರಿಸ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಮಧ್ಯೆ ಈ ಸೀರಿಸ್‌ನ ಥೀಮ್ ಹಾಡನ್ನು ಹಕ್ಕಿಯೊಂದು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ಬೆರಗುಗೊಳಿಸುತ್ತಿದೆ.
ಅತೀಂದ್ರೀಯ ಶಕ್ತಿಯ ವಿಚಾರದ ಸಿನಿಮಾಗಳಲ್ಲಿ ಹಕ್ಕಿಗಳು ದೊಡ್ಡ ಸಂಗೀತಗಾರನಂತೆ ಹಾಡುವ ದೃಶ್ಯಗಳನ್ನು ನಾವು ನೋಡಿರಬಹುದು. ಆದರೆ ಇಲ್ಲೊಂದು ನಿಜವಾದ ಹಕ್ಕಿ ಯುರೋಪಿಯನ್ ಸ್ಟಾರ್ಲಿಂಗ್ (European starling) ತನ್ನ ಸಂಗೀತಾ ಸಾಧನೆ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಇದು ಹ್ಯಾರಿ ಪಾಟರ್ ಸಿನಿಮಾದ ಥೀಮ್ ಸಾಂಗನ್ನು ಯಾವುದೇ ಅಡ್ಡಿಗಳಿಲ್ಲದೇ ಹಾಡುತ್ತಿದೆ. ಇದರ ವಿಡಿಯೋ ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿತ್ತು.
ನಟನೆಗೆ ಬಾಯ್ ಬಾಯ್ ಹೇಳಿದ ಹ್ಯಾರಿ ಪಾಟರ್ ಚೆಲುವೆ ಎಮ್ಮ ವಾಟ್ಸನ್
ಇದರ ವಿಡಿಯೋವನ್ನು ಪಕ್ಷಿಯ ಪೋಷಕರಾದ @farijuana ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಈಗಾಗಲೇ ಮಾತನಾಡುವ ಹಕ್ಕಿಯ ವಿವಿಧ ವೀಡಿಯೊಗಳನ್ನು ತಮ್ಮ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. 20 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ಇತ್ತೀಚಿನ ಈ ವೀಡಿಯೋ ಎಲ್ಲರನ್ನೂ ಬೆರಗುಗೊಳಿಸಿದೆ. ಹಕ್ಕಿಯೂ ಹಾಡಿನ ಮಧ್ಯದಲ್ಲಿ ಉಸಿರು ತೆಗೆದುಕೊಳ್ಳುವ ರೀತಿ, ತನ್ನ ಕೌಶಲ್ಯಗಳನ್ನು ಪ್ರದರ್ಶಿಸುವ ಹಕ್ಕಿಯ ವರ್ತನೆ ಎಲ್ಲರನ್ನು ಸೆಳೆಯುತ್ತಿದೆ. ಈ ಶಿಳ್ಳೆಯ ಮಧ್ಯದಲ್ಲಿ ನಾನು ತೆಗೆದುಕೊಳ್ಳುವ ಉಸಿರನ್ನು ಅವನು ಹೇಗೆ ಅನುಕರಿಸುತ್ತಾನೆಂಬುದನ್ನು ನಾನು ಇಷ್ಟಪಡುತ್ತೇನೆ ಎಂದು ಬರೆದು ಮಹಿಳೆ ಟಿಕ್‌ಟಾಕ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಗಿಳಿಗಳು ಮನುಷ್ಯರ ಮಾತನ್ನು ಅನುಕರಿಸುವುದನ್ನು ನೀವು ಕೇಳಿರಬಹುದು. ಜೊತೆಗೆ ಹಾಡುವ ಗಿಳಿಗಳು ಮಾತನಾಡುವ ಗಿಳಿಗಳು ಮುಂತಾದವುಗಳನ್ನು ನೀವು ನೋಡಿರಬಹುದು. ಆದರೆ ನಾವು ಇಲ್ಲಿ ನಿಮಗೆ ತೋರಿಸ ಹೊರಟಿರುವ ಗಿಳಿ ಐಫೋನ್ ರಿಂಗ್‌ಟೋನ್ ಅನ್ನು ಅನುಕರಿಸುತ್ತಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸಾಕು ಗಿಳಿ ಇದಾಗಿದ್ದು, ಕೆಂಪು ಬಣ್ಣವನ್ನು ಹೊಂದಿದೆ. ಈ ಗಿಳಿ ಐಫೋನ್ ರಿಂಗ್‌ಟೋನ್ ಅನ್ನು ಅನುಕರಿಸುವುದನ್ನು ಕೇಳಿದರೆ ನಿಮ್ಮ ಬಳಿ ಐಫೋನ್ ಇದೇ ಎಂದಾದಲ್ಲಿ ನೀವು ಫೋನ್ ರಿಂಗ್ ಆಗ್ತಿದೆ ಎಂದು ಕರೆ ಸ್ವೀಕರಿಸಲು ಫೋನಿಗಾಗಿ ತಡಕಾಡುವುದಂತು ನಿಜ. ಅಷ್ಟೊಂದು ಸುಂದರವಾಗಿ ನಿಜವಾದ ರಿಂಗ್‌ಟೋನ್‌ಗೆ ಸ್ಪರ್ಧೆ ಕೊಡುವಂತೆ ಈ ಗಿಳಿ ಐಫೋನ್ ರಿಂಗ್‌ಟೋನ್ ಅನ್ನು ಅನುಕರಿಸುತ್ತಿದೆ.
ಐಫೋನ್ ರಿಂಗ್‌ಟೋನ್ ಉಲಿಯುವ ಗಿಳಿ... ವಿಡಿಯೋ ವೈರಲ್
ಇದನ್ನು ನೋಡಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಗುಸ್ಸಿ ಗೌಡ( Gucci Gowda) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್‌ನಿಂದ ಈ ವಿಡಿಯೋ ವೈರಲ್ ಆಗಿದೆ. ಈ ಖಾತೆಯ ತುಂಬೆಲ್ಲಾ ಈ ಸುಂದರ ಗಿಳಿ ಗುಸ್ಸಿ ಗೌಡದೇ ಫೋಟೋಗಳಿವೆ. ಈ ಖಾತೆಯನ್ನು ಈ ಗಿಳಿಯ ಮಾಲೀಕರಾದ ಪೂಜಾ ದೇವರಾಜ್ (Pooja Devaraj)ಹಾಗೂ ಹರ್ಷಿತ್ ( Harshith) ಎಂಬವರು ನಿರ್ವಹಿಸುತ್ತಿದ್ದಾರೆ. ಸೋಮವಾರ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಂತರ ವೈರಲ್ ಹಗ್ ಈ ವಿಡಿಯೋವನ್ನು ಶೇರ್ ಮಾಡಿದೆ. ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಇದು ತುಂಬಾ ಪ್ರಭಾವಶಾಲಿ ಸೌಂಡ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.