ವಾಯು ಮಾಲೀನ್ಯ ಹೆಚ್ಚಿದಷ್ಟೂ ಕೊರೋನಾ ವೈರಸ್‌ನಿಂದಾಗಿರುವುದಕ್ಕಿಂತಲೂ ಹೆಚ್ಚು ಸಾವು ನೋವು ಹವಾಮಾನ ವೈಪರೀತ್ಯದಿಂದ ಉಂಟಾಗಲಿದೆ ಎಂದು ಬಿಲ್‌ಗೆಟ್ಸ್ ಹೇಳಿದ್ದಾರೆ.

ವಾಯು ಮಾಲೀನ್ಯ ಹೆಚ್ಚಿದಷ್ಟೂ ಕೊರೋನಾ ವೈರಸ್‌ನಿಂದಾಗಿರುವುದಕ್ಕಿಂತಲೂ ಹೆಚ್ಚು ಸಾವು ನೋವು ಹವಾಮಾನ ವೈಪರೀತ್ಯದಿಂದ ಉಂಟಾಗಲಿದೆ ಎಂದು ಬಿಲ್‌ಗೆಟ್ಸ್ ಹೇಳಿದ್ದಾರೆ.

ಕೊರೋನಾ ವೈರಸ್‌ನಿಂದಾಗಿ ಈ ವರ್ಷ ಉಂಟಾಗಿರುವ ಸಾವಿಗಿಂತಲೂ ಭವಿಷ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗುವ ಸಾವು ಹೆಚ್ಚಾಗಲಿರಲಿದೆ ಎಂದಿದ್ದಾರೆ.

ಜಗತ್ತಿಗೇ ಕೊರೋನಾ ಔಷಧ ನೀಡಲು ಭಾರತದ ಫಾರ್ಮಸಿಗಳಿಂದ ಸಾಧ್ಯ: ಬಿಲ್‌ಗೇಟ್ಸ್

2060ರಲ್ಲಿ ಹವಾಮಾನ ಬದಲಾವಣೆಯೇ ಕೊರೋನಾದಷ್ಟು ಭೀಕರವಾಗಲಿದೆ. 2100ಕ್ಕಾಗುವಾಗ ಹವಾಮಾನ ಬದಲಾವಣೆ ತಂದೊಡ್ಡುವ ಸಾವು ನೋವು 5 ಪಟ್ಟು ಭೀಕರವಾಗಿರಲಿದೆ ಎಂದಿದ್ದಾರೆ.

ಈಗ ಕೊರೋನಾದಿಂದಾಗಿ ಜಗತ್ತು ಎದುರಿಸುತ್ತಿರುವ ಆರ್ಥಿಕ ಹೊಡೆತಕ್ಕಿಂತ ಹವಾಮಾನ ಬದಲಾವಣೆ ನೀಡುವ ಹೊಡೆತ ಹೆಚ್ಚು ಬಲವಾಗಿರಲಿದೆ. ದೇಶಗಳು ತಮ್ಮ ಜಿಡಿಪಿಯನ್ನು ಹವಾಮಾನ ಬದಲಾವಣೆಯಿಂದಾಗುವ ಅನಾಹುತಗಳನ್ನು ಎದುರಿಸುವುದಕ್ಕೇ ವ್ಯಯಿಸುವ ಸ್ಥಿತಿ ಬರಲಿದೆ ಎಂದಿದ್ದಾರೆ. 

ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!

ಜಗತ್ತೇ ಕೊರೋನಾ ವೈರಸ್‌ನಿಂದಾಗಿ ಸಂಕಷ್ಟಕ್ಕೆ ಬಿದ್ದಿದ್ದು, ಜನರು ಮನೆಯೊಳಗೇ ಉಳಿದುಕೊಂಡಿದ್ದಾರೆ. ಉದ್ಯೋಗ ಭದ್ರತೆ ಸೇರಿ ಹಲವು ಸವಾಲುಗಳನ್ನು ಜನರು ಎದುರಿಸುತ್ತಿದ್ದಾರೆ.

ಜನರ ಈ ಎಲ್ಲ ಜೀವನ ಹೋರಾಟದ ಮಧ್ಯೆ ಸ್ವಲ್ಪ ನೆಮ್ಮದಿಯ ವಿಚಾರವೆಂದರೆ ನಮ್ಮ ನಿಸರ್ಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೊರೋನಾ ಸಾವು ನೋವಿನ ಮಧ್ಯೆ ಇದೊಂದೇ ಆಶಾದಾಯಕ ವಿಚಾರ.