ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಲವು ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಯ ವಿಪತ್ತು, ಸೇರಿದಂತೆ ಹಲವು ತುರ್ತು ಸಂದರ್ಭದಲ್ಲಿ ಹಣ ದೇಣಿಗೆ ನೀಡಿದ್ದಾರೆ. ಆದರೆ ಈ ವರೆಗೆ ಬಂಡವಾಳ ಹೂಡಿಕೆ, ಹಣ ದೇಣಿಗೆಯಲ್ಲಿ ಇದೀಗ 10 ಬಿಲಿಯನ್ ಅಮೆರಿಕನ್ ಡಾಲರ್ ಹಣ ಹೂಡಿಕೆ ಅತ್ಯಂತ ತೃಪ್ತಿ ನೀಡಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಈ ಬಾರಿ ಬಿಲ್ ಗೇಟ್ಸ್ ಹಣ ಹೂಡಿಕೆ ಮಾಡಿರುವುದು ಕೊರೋನಾ ವೈರಸ್ ಲಸಿಕೆಗಾಗಿ.
ಕ್ಯಾಲಿಫೋರ್ನಿಯಾ(ಜೂ.06): ಕೊರೋನಾ ಲಸಿಕೆ ಕಂಡು ಹಿಡಿಯಲು ಹಲವು ಸರ್ಕಾರ ಬಂಡವಾಳ ತೆಗೆದಿರಿಸಿದೆ. ಅದರಲ್ಲೂ ಅಮೇರಿಕ ಮುಂಚೂಣಿಯಲ್ಲಿದೆ. ಇತ್ತ ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇದೀಗ ಬಡ ರಾಷ್ಟ್ರಗಳಿಗೆ ಉಚಿತವಾಗಿ ಕೊರೋನಾ ಲಸಿಕೆ ವಿತರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಕೊರೋನಾ ಲಸಿಕೆ ತಯಾರಿಕೆ ಮಾಡಲು ಬರೋಬ್ಬರಿ 10 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಹೂಡಿಕೆ ಮಾಡಿದ್ದಾರೆ.
60 ದಿನದ ಬಳಿಕ ಮಕ್ಕಳನ್ನು ಬೇಟಿಯಾದ ನರ್ಸ್, ಹೀಗಿತ್ತು ಆ ಕ್ಷಣ!...
ಬಿಲ್ & ಮಿಲಿಂದ ಗೇಟ್ಸ್ ಫೌಂಡೇಶನ್ ಮೂಲಕ 10 ಬಿಲಿಯನ್ ಯುಎಸ್ ಡಾಲಕ್ ಹಣ ಹೂಡಿಕೆ ಮಾಡಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್‌ನಿಂದ ತತ್ತರಿಸಿದೆ. ಲಾಕ್‌ಡೌನ್ ಅನಿವಾರ್ಯವಾಗಿದೆ. ಪ್ರಮುಖವಾಗಿ ಬಡ ರಾಷ್ಟ್ರಗಳಲ್ಲಿ ತುತ್ತು ಅನ್ನಕ್ಕೂ ತಾತ್ವಾರದ ಸಂದರ್ಭ ನಿರ್ಮಾಣವಾಗಿದೆ. ಹೀಗಾಗಿ ಕೊರೋನಾ ವೈರಸ್‌ಗೆ ಅಂತ್ಯ ಹಾಡಲು ಲಸಿಕೆ ಅನಿವಾರ್ಯವಾಗಿದೆ. ಇದಕ್ಕಾಗಿ 10 ಬಿಲಿಯನ್ ಯುಎಸ್ ಡಾಲರ್ ಹಣ ಹೂಡಿಕೆ ಮಾಡುತ್ತಿರುವುದಾಗಿ ಗೇಟ್ಸ್ ಹೇಳಿದ್ದಾರೆ.
ನಮ್ಮ ದೇಶದ 3 ಕಂಪನಿಗಳಿಗೆ ಕೊರೋನಾ ವೆಂಟಿಲೇಟರ್ ತಯಾರಿಸಲು ಲೈಸನ್ಸ್!.
ಬಡ ರಾಷ್ಟ್ರಗಳಿಗೆ ಲಸಿಕೆ ಉಚಿತವಾಗಿ ವಿತರಿಸಿಲು ಬಿಲ್ ಗೇಟ್ಸ್ ನಿರ್ಧರಿಸಿದ್ದಾರೆ. ಉದ್ಯಮ, ದೇಣಿಗೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಬಿಲ್ ಗೇಟ್ಸ್ ಹಣ ನೀಡಿದ್ದಾರೆ. ಆದರೆ ಕೊರೋನಾ ಲಸಿಕೆ ತಯಾರಿಕೆ ಹಾಗೂ ಬಡ ರಾಷ್ಟ್ರಗಳಿಗೆ ವಿತರಿಸಲು ಈ ಬಾರಿ ಹೂಡಿಕೆ ಮಾಡಿರುವ 10 ಬಿಲಿಯನ್ ಅಮೆರಿಕನ್ ಡಾಲರ್ ಹಣ ಅತ್ಯಂತ ಸಂತೃಪ್ತಿ ನೀಡಿದೆ ಎಂದು ಬೇಲ್ ಗೇಟ್ಸ್ ಹೇಳಿದ್ದಾರೆ.