ಅಮೆರಿಕ ಜೊತೆ ಸಾವಿರಾರು ಕೋಟಿಯ ಒಪ್ಪಂದ; ಭಾರತ ಖರೀದಿಸುತ್ತಿರುವ ಎಂಕ್ಯು-9ಬಿ ಡ್ರೋನ್‌ ವಿಶೇಷತೆ ಏನು?

ಭಾರತವು ಅಮೆರಿಕದಿಂದ ಎಂಕ್ಯು-9ಬಿ ಡ್ರೋನ್‌ಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಈ ಒಪ್ಪಂದವು 25 ಸಾವಿರ ಕೋಟಿ ರೂಪಾಯಿಗಳಷ್ಟು ಮೌಲ್ಯದ್ದಾಗಿದೆ. ಈ ಡ್ರೋನ್‌ಗಳು ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

bilateral trade India will purchase 25000 crore rupees MQ-9B Predator drone mrq

ವಿಲ್ಮಿಂಗ್ಟನ್‌ (ಅಮೆರಿಕ): ದೇಶದ ಮೊದಲ ರಕ್ಷಣಾ ವಲಯದ ಸೆಮಿಕಂಡಕ್ಟರ್‌ ಘಟಕವನ್ನು ಸ್ಥಾಪಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನಡುವೆ ಒಪ್ಪಂದವೇರ್ಪಟ್ಟಿದೆ. ಕೋಲ್ಕತಾದಲ್ಲಿ 1.52 ಲಕ್ಷ ಕೋಟಿ ರು. ಹೂಡಿಕೆಯೊಂದಿಗೆ, ಅಮೆರಿಕ ಸಹಭಾಗಿತ್ವದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ. ಭಾರತ, ಅಮೆರಿಕದ ಸೇನಾಪಡೆಗಳು ಹಾಗೂ ಮಿತ್ರದೇಶಗಳು ಇಲ್ಲಿ ಉತ್ಪಾದನೆಯಾಗುವ ಚಿಪ್‌ ಅನ್ನು ಬಳಸಿಕೊಳ್ಳಲಿವೆ. ಇದೇ ವೇಳೆ 25000 ಕೋಟಿ ರು. ವೆಚ್ಚದಲ್ಲಿ ಡ್ರೋನ್‌ ಖರೀದಿಸುವ ಒಪ್ಪಂದವೂ ಅಂತಿಮವಾಗಿದೆ.

ತ್ರುಪಡೆಗಳ ಮೇಲೆ ಕ್ಷಿಪಣಿ ದಾಳಿ, ಗಡಿ ಕಣ್ಗಾವಲು ಸೇರಿದಂತೆ ಹಲವು ಕೆಲಸಕ್ಕೆ ಬಳಸಬಹುದಾದ ಎಂಕ್ಯು-9ಬಿ ಡ್ರೋನ್‌ಗಳ ಖರೀದಿ ಸಂಬಂಧ ಅಮೆರಿಕ- ಭಾರತ ನಡುವೆ ಮಾತುಕತೆ ಅಂತಿಮಗೊಂಡಿದೆ. 25 ಸಾವಿರ ಕೋಟಿ ರು. ವೆಚ್ಚದಲ್ಲಿ ಭಾರತ ಈ ಡ್ರೋನ್‌ಗಳನ್ನು ಖರೀದಿಸಲಿದ್ದು, ಮುಂದಿನ ತಿಂಗಳು ಒಪ್ಪಂದಕ್ಕೆ ಸಹಿ ಏರ್ಪಡುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಈ ಒಪ್ಪಂದ ಫಲಪ್ರದವಾಗಿದೆ.

ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ನೆರವಾಗಲಿರುವ ಎಂಕ್ಯು-9ಬಿ ಡ್ರೋನ್‌ ಖರೀದಿ ಸಂಬಂಧ ಅಮೆರಿಕ ಮತ್ತು ಭಾರತ ಬಹುತೇಕ ಮಾತುಕತೆಯನ್ನು ಅಂತಿಮಗೊಳಿಸಿವೆ. ಈ ಕುರಿತು ಮುಂದಿನ ತಿಂಗಳು ಉಭಯ ದೇಶಗಳು 25 ಸಾವಿರ ಕೋಟಿ ರು. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದಾಗ ಈ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಬೈಡೆನ್‌ ಅವರ ತವರೂರಾದ ವಿಲ್ಮಿಂಗ್ಟನ್‌ನಲ್ಲಿ ಬೈಡೆನ್‌ ಮತ್ತು ಮೋದಿ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ, ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಮಿಲಿಟರಿ ನಂಟನ್ನು ಇನ್ನಷ್ಟು ಬಲಗೊಳಿಸುವ ಕುರಿತು ಉಭಯ ನಾಯಕರು ಸಮ್ಮತಿಸಿದರು. ಜತೆಗೆ ರಕ್ಷಣಾ ಕೈಗಾರಿಕಾ ಸಹಕಾರ ನೀಲನಕ್ಷೆಯಲ್ಲಿ ಉಭಯ ದೇಶಗಳು ಮಾಡಿರುವ ಸಾಧನೆ ಕುರಿತು ಉಭಯ ನಾಯಕರು ಹರ್ಷ ವ್ಯಕ್ತಪಡಿಸಿದರು.

ಇದರಲ್ಲಿ ಭಾರತ ಜನರಲ್‌ ಅಟೋಮಿಕ್ಸ್‌ ಕಂಪನಿಯಿಂದ 31 ಎಂಕ್ಯು- 9ಬಿ ಡ್ರೋನ್‌ಗಳನ್ನು ಖರೀದಿಸುವ ಮಾತುಕತೆಯಲ್ಲಿ ಆಗಿರುವ ಬೆಳವಣಿಗೆಯನ್ನು ಕೂಡ ಬೈಡೆನ್‌ ಸ್ವಾಗತಿಸಿದರು. ಇದಲ್ಲದೆ ವೈಮಾನಿಕ ಎಂಜಿನ್‌, ಯುದ್ಧಸಾಮಗ್ರಿಗಳು ಮತ್ತು ಭೂ ಸಂಚಾರ ವ್ಯವಸ್ಥೆಯ ಸಹ ಉತ್ಪಾದನೆ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಉಕ್ರೇನ್‌ಗೆ ಮೋದಿ ಶಾಂತಿ ಸಂದೇಶ ಹೊತ್ತು ನೀಡಿದ ಭೇಟಿ ಬಗ್ಗೆಯೂ ಬೈಡೆನ್‌ ಹರ್ಷ ವ್ಯಕ್ತಪಡಿಸಿದರು. ಭಾರತ ಅಂದಾಜು 25 ಸಾವಿರ ಕೋಟಿ ರು. ವೆಚ್ಚದಲ್ಲಿ ಎಂಕ್ಯು- 9 ಬಿ ಡ್ರೋನ್‌ ಖರೀದಿಸುವ ಸಂಬಂಧ ಮಾತುಕತೆ ನಡೆಸುತ್ತಿದೆ.

ಎಂಕ್ಯು-9ಬಿ ಡ್ರೋನ್‌ ವೈಶಿಷ್ಟ್ಯ

ಅಮೆರಿಕದ ಜನರಲ್‌ ಅಟೋಮಿಕ್ಸ್‌ ಕಂಪನಿ ತಯಾರಿಸುವ ಡ್ರೋನ್‌ ಇದು. ದೂರದಿಂದಲೇ ಇದನ್ನು ನಿಯಂತ್ರಿಸಬಹುದು. ಕ್ಷಿಪಣಿ ಹೊತ್ತೊಯ್ದು ದಾಳಿ ನಡೆಸಬಲ್ಲದು. ಅಲ್ಲದೆ, ಇದನ್ನು ಗಡಿಯಲ್ಲಿ ಕಣ್ಗಾವಲು, ಮಾನವೀಯ ನೆರವು, ಪರಿಹಾರ ಕಾರ್ಯ, ಶೋಧ ಕಾರ್ಯ, ಭೂ, ನೌಕಾ, ವಾಯುಪಡೆ ಯುದ್ಧಗಳ ವೇಳೆ, ಆಗಸದಿಂದ ಎದುರಾಗಬಹುದಾದ ಅಪಾಯಗಳ ಮುನ್ಸೂಚನೆ ಪಡೆಯಲು- ಹೀಗೆ ನಾನಾ ರೀತಿಯ ಕೆಲಸಗಳಿಗೆ ಬಳಸಬಹುದು. ಇದು ಸತತವಾಗಿ 35 ಗಂಟೆಗಳ ಕಾಲ ಆಗಸದಲ್ಲೇ ಕಾರ್ಯನಿರ್ವಹಣೆ ಕ್ಷಮತೆ ಹೊಂದಿದೆ. 5670 ಕೆಜಿ ತೂಕ ಹೊರಬಲ್ಲದು. 40 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ನೆಲದಿಂದ ಕೇವಲ 250 ಅಡಿ ಎತ್ತರದಲ್ಲೂ ಶತ್ರುಗಳ ಕಣ್ತಪ್ಪಿಸಿ ಚಲಿಸಬಲ್ಲದು. ಚಲಿಸುವ ಸಾಮರ್ಥ್ಯ ಗಂಟೆಗೆ 442 ಕಿ.ಮೀ. ಇದೆ.

Latest Videos
Follow Us:
Download App:
  • android
  • ios