ಪುರಾತನ ಪಳೆಯುಳಿಕೆಗಳ ಮಾರಾಟಕ್ಕೆ ತೀವ್ರ ವಿರೋಧದ ನಡುವೆಯೂ ಪ್ರಸ್ತುತ ಭೂಮಿ ಮೇಲೆ ಇಲ್ಲದ ಅಳಿದು ಹೋಗಿರುವ ಪ್ರಾಣಿಗಳ ಪಳೆಯುಳಿಕೆಗಳ ಹರಾಜಿಗೆ ಹರಾಜು ಸಂಸ್ಥೆ ಸೋಥೆಬಿ ಮುಂದಾಗಿದೆ. ಮುಂದಿನ ತಿಂಗಳು ಈ ಸಂಸ್ಥೆ ಟ್ರೈನೋಸಾರ್ ತಲೆಬುರುಡೆಯ ಹರಾಜಿಗೆ ಮುಂದಾಗಿದ್ದು, ಇದನ್ನು ಅಂದಾಜು ಮೂಲ ಬೆಲೆ 20 ಮಿಲಿಯನ್ ಡಾಲರ್‌ಗೆ ಹರಾಜಿಗೆ ಇಡಲಾಗಿದೆ.
ಪುರಾತನ ಪಳೆಯುಳಿಕೆಗಳ ಮಾರಾಟಕ್ಕೆ ತೀವ್ರ ವಿರೋಧದ ನಡುವೆಯೂ ಪ್ರಸ್ತುತ ಭೂಮಿ ಮೇಲೆ ಇಲ್ಲದ ಅಳಿದು ಹೋಗಿರುವ ಪ್ರಾಣಿಗಳ ಪಳೆಯುಳಿಕೆಗಳ ಹರಾಜಿಗೆ ಹರಾಜು ಸಂಸ್ಥೆ ಸೋಥೆಬಿ ಮುಂದಾಗಿದೆ. ಮುಂದಿನ ತಿಂಗಳು ಈ ಸಂಸ್ಥೆ ಟ್ರೈನೋಸಾರ್ ತಲೆಬುರುಡೆಯ ಹರಾಜಿಗೆ ಮುಂದಾಗಿದ್ದು, ಇದನ್ನು ಅಂದಾಜು ಮೂಲ ಬೆಲೆ 20 ಮಿಲಿಯನ್ ಡಾಲರ್‌ಗೆ ಹರಾಜಿಗೆ ಇಡಲಾಗಿದೆ.
ಮ್ಯಾಕ್ಸಿಮಸ್' (Maximus) ಎಂಬ ಅಡ್ಡ ಹೆಸರಿನ ಈ ಟ್ರೈನೋಸಾರ್ ತಲೆ ಬುರುಡೆಯು 76 ಮಿಲಿಯನ್ ವರ್ಷಗಳಷ್ಟು ಹಳೆಯದ್ದು ಎಂದು ನಂಬಲಾಗಿದೆ. 6 ರಿಂದ ಏಳು ಅಡಿ ಉದ್ದವಿರುವ ಈ ತಲೆಬುರುಡೆ ಸುಮಾರು 200 ಪೌಂಡ್‌ಗಳಷ್ಟು ತೂಕವಿದೆ. ಈ ಡೈನೋಸಾರ್ ತಲೆಬುರುಡೆಯೂ ಒಳ್ಳೆಯ ಸ್ಥಿತಿಯಲ್ಲಿದ್ದು, ದವಡೆಯಲ್ಲಿ ಎಲ್ಲಾ ಹಲ್ಲುಗಳನ್ನು ಹೊಂದಿದೆ. ತಲೆ ಬುರುಡೆಯ ಸುತ್ತಲೂ ಇರುವ ಮೂಳೆಗಳನ್ನು ಇದು ಹೊಂದಿದ್ದು, ಅತ್ಯಂತ ಅಪರೂಪದ ಮಾದರಿ ಎಂದು ಹರಾಜು ಸಂಸ್ಥೆ ಸೋಥೆಬಿ ಹೇಳಿದೆ. ಸೌತ್ ಕೆರೊಲಿನಾದ ಖಾಸಗಿ ಜಾಗದಲ್ಲಿ ಈ ತಲೆಬುರುಡೆಯನ್ನು ಉತ್ಖನನ ಮಾಡಲಾಗಿದೆ, ಈ ಪ್ರದೇಶವೂ ಭೂಮಿಯ ಮೇಲೆ ಅತೀಹೆಚ್ಚು ಟೈರನೋಸಾರ್ ಪಳೆಯುಳಿಕೆಗಳನ್ನು ನೀಡಿದೆ ಎಂದು ಹರಾಜು ಸಂಸ್ಥೆ ಹೇಳಿದೆ.
ಮ್ಯಾಕ್ಸಿಮಸ್ ಎಂದು ಕರೆಯಲ್ಪಡುವ ತಲೆಬುರುಡೆಯೂ ಪತ್ತೆಯಾದ ಜಾಗವೂ ಹಲವು ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಅಲ್ಲದೇ ಇಡೀ ಅಸ್ಥಿಪಂಜರದಲ್ಲಿ ತಲೆಬುರುಡೆಯೊಂದೇ ಸವಕಳಿಯಿಂದ ನಾಶವಾಗದಂತಹ ಟ್ರೈನೋಸಾರ್ ಅಸ್ಥಿಪಂಜರದ ಏಕೈಕ ಭಾಗವಾಗಿದೆ ಎಂದು ಹರಾಜು ಸಂಸ್ಥೆ ಸೋಥೆಬಿ (Sotheby) ಮಾಹಿತಿ ನೀಡಿದೆ . ಡಿಸೆಂಬರ್ 9 ರಂದು ಈ ತಲಬುರುಡೆ (skull) ಮಾರಾಟವಾಗಲಿದೆ. ಸೋಥೆಬಿ ಹರಾಜು ಸಂಸ್ಥೆಯ ಇದುವರೆಗಿನ ಹರಾಜಿನಲ್ಲಿ ಹರಾಜಾದ ಅತ್ಯಂತ ಬೆಳೆಬಾಳುವ ಪಳೆಯುಳಿಕೆಯಲ್ಲಿ ಇದು ಒಂದಾಗಲಿದೆ ಎಂದು ಸೋಥೆಬಿ ಹೇಳಿದೆ.
ಅತ್ಯಂತ ಪುರಾತನ ಮಾನವ ಪಳೆಯುಳಿಕೆ ಪತ್ತೆ, ಬಯಲಾಗಲಿದೆ 2,30,000 ವರ್ಷ ಹಳೇ ರಹಸ್ಯ!
ಈ ಹಿಂದೆ 31.8 ಮಿಲಿಯನ್ ಡಾಲರ್ ಮೊತ್ತಕ್ಕೆ ಡೈನೋಸಾರ್ ಪಳೆಯುಳಿಕೆಯೊಂದು (dinosaur fossil) ಹರಾಜಾಗಿತ್ತು. ಅದುವೇ ಇದುವರೆಗಿನ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಡೈನೋಸಾರ್ ಪಳೆಯುಳಿಕೆಯಾಗಿದೆ. ಕಳೆದ ವರ್ಷ ಕ್ರಿಸ್ಟಿ ಸಂಸ್ಥೆಯ ಹರಾಜಿನಲ್ಲಿ ಸ್ಟಾನ್ ಎಂಬ ಈ ಟೈರನೊಸಾರ್ (tyrannosaur) ಮಾದರಿಯನ್ನು ಮಾರಾಟ ಮಾಡಲಾಗಿತ್ತು.
ಹರಾಜಿನಲ್ಲಿ ಮಾರಾಟವಾದ ಮೊದಲ ಡೈನೋಸಾರ್ , ಸ್ಯೂ ಎಂಬ ಟೈರನೊಸಾರ್ 1997 ರಲ್ಲಿ $8.36 ಮಿಲಿಯನ್ ಗಳಿಸಿತು, ಡೈನೋಸಾರ್‌ಗಳ ಪಳೆಯುಳಿಕೆಗಳ ಬೆಲೆಗಳು ಗಗನ ಮುಟ್ಟುತ್ತಿದ್ದು, ಜುರಾಸಿಕ್ ಪಾರ್ಕ್‌ನ ವೆಲೋಸಿರಾಪ್ಟರ್‌ಗೆ ಮೂಲಮಾದರಿಯಾಗಿ ಕಾರ್ಯನಿರ್ವಹಿಸಿದ ಡೈನೋಸಾರ್‌ನ ಅಸ್ಥಿಪಂಜರವು ಮೇ ತಿಂಗಳಲ್ಲಿ $12.4 ಮಿಲಿಯನ್‌ಗೆ ಮಾರಾಟವಾಗಿತ್ತು. ಡೈನೋಸಾರ್‌ನ 70 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಸ್ಥಿಪಂಜರವು ಜುಲೈನಲ್ಲಿ 6.1 ಮಿಲಿಯನ್ ಡಾಲರ್ ಗಳಿಸುವುದರೊಂದಿಗೆ ಕಳೆದ ಕೆಲವು ವರ್ಷಗಳಿಂದ ಬೇಡಿಕೆ ವಿಶೇಷವಾಗಿ ಹೆಚ್ಚಿದೆ. ಪ್ರಸಿದ್ಧ ಡೈನೋಸಾರ್ ಸಂಗ್ರಹಕರಲ್ಲಿ ನಟರಾದ ನಿಕೋಲಸ್ ಕೇಜ್ (Nicolas Cage), ರಸ್ಸೆಲ್ ಕ್ರೋವ್ (Russell Crowe) ಮತ್ತು ಲಿಯೊನಾರ್ಡೊ ಡಿಕಾಪ್ರಿಯೊ (Leonardo DiCaprio) ಸೇರಿದ್ದಾರೆ ಎಂದು ವರದಿಯಾಗಿದೆ.
10 ದಶಲಕ್ಷ ವರ್ಷ ಹಳೆಯ ಪಳೆಯುಳಿಕೆಗಳು ಪತ್ತೆ..!
ಆದರೆ ಡೈನೋಸಾರ್ ಪಳೆಯುಳಿಕೆಗಳ ಈ ಮಾರಾಟವನ್ನು ವಿಜ್ಞಾನಿಗಳು ಖಂಡಿಸಿದ್ದಾರೆ. ಹರಾಜಿನಲ್ಲಿ ಹೆಚ್ಚುತ್ತಿರುವ ಬೆಲೆಗಳು ಪಳೆಯುಳಿಕೆ ಅಥವಾ ಅಸ್ಥಿಪಂಜರಗಳ ಕಳ್ಳತನ ಮತ್ತು ಕಳ್ಳಸಾಗಣಿಕೆಯ ಬೇಡಿಕೆಯನ್ನು ಹೆಚ್ಚಿಸಿವೆ ಎಂದು ಕೆಲವು ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದಾರೆ.