ಮಹಿಳೆಯರೂ ಪುರುಷರಂತೆ 'ಟಾಪ್‌ಲೆಸ್' ಆಗಿ ಈಜುಕೊಳಕ್ಕಿಳಿಯಲು ಬರ್ಲಿನ್ ಅನುಮತಿ!
ಮಹಿಳೆಯೊಬ್ಬರು ಸಮಾನತೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ ಬಳಿಕ ಅವರೂ, ಪುರುಷರಂತೆ ಸಂಪೂರ್ಣ ಟಾಪ್‌ಲೆಸ್ ಆಗಿ ಈಜುಕೊಳಕ್ಕಿಳಿಯಲು ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಅನುಮತಿ ನೀಡಲಾಗಿದೆ.
ಇದಪ್ಪಾ ಸಮಾನತೆ ಅಂದ್ರೆ! ಮಹಿಳೆಯೊಬ್ಬರು ಬಟ್ಟೆ ವಿಷಯದಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯ ಎಣಿಸಲಾಗುತ್ತಿದೆ ಎಂದು ಕೋರ್ಟ್ ಮೊರೆ ಹೋದ ಬಳಿಕ, ಬರ್ಲಿನ್‌ನ ಸಾರ್ವಜನಿಕ ಪೂಲ್‌ಗಳಲ್ಲಿ ಮಹಿಳೆಯರಿಗೂ ಪುರುಷರಂತೆ ಟಾಪ್‌ಲೆಸ್ ಆಗಲು ಅನುಮತಿ ನೀಡಲಾಗಿದೆ.
ಹೌದು, ಬರ್ಲಿನ್‌ನ ಸಾರ್ವಜನಿಕ ಪೂಲ್‌ಗಳಲ್ಲಿರುವ ಎಲ್ಲಾ ಈಜುಗಾರರಿಗೆ ಶೀಘ್ರದಲ್ಲೇ ಟಾಪ್‌ಲೆಸ್ ಈಜಲು ಅವಕಾಶ ನೀಡಲಾಗುವುದು ಎಂದು ನಗರ ಅಧಿಕಾರಿಗಳು ಗುರುವಾರ ಘೋಷಿಸಿದ್ದಾರೆ.
ಮಹಿಳೆಯೊಬ್ಬರು ಟಾಪ್ ಲೆಸ್ ಆಗಿ ಹೊರಾಂಗಣದಲ್ಲಿ ಸ್ನಾನ ಮಾಡಿದ್ದಕ್ಕಾಗಿ ತೆರೆದ ಗಾಳಿಯ ಈಜುಕೊಳದಿಂದ ಹೊರಹಾಕಲ್ಪಟ್ಟಿದ್ದಕ್ಕೆ ಅವರು ಈ ಕ್ರಮದ ವಿರುದ್ಧ ಪ್ರಶ್ನೆ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕಾನೂನು ಕ್ರಮ ಕೈಗೊಂಡ ನಂತರ ಹೊಸ ತೀರ್ಪು ಬಂದಿದೆ.
10 ವರ್ಷ ಹಿರಿಯಳಾದ ಪ್ರಿಯಾಂಕಾ ಚೋಪ್ರಾಳನ್ನು ವಿವಾಹವಾಗಲು ನಿಕ್ ಆಕೆಯ ತಾಯಿಯನ್ನು ಒಪ್ಪಿಸಿದ್ದು ಹೇಗೆ?
ಔಟ್‌ಲೆಟ್ ಪ್ರಕಾರ, ಬರ್ಲಿನ್ ಅಧಿಕಾರಿಗಳು ಮಹಿಳೆಯರು ತಾರತಮ್ಯಕ್ಕೆ ಬಲಿಯಾಗಿದ್ದಾರೆ ಎಂದು ಒಪ್ಪಿಕೊಂಡರು ಮತ್ತು ಬರ್ಲಿನ್‌ನ ಪೂಲ್‌ಗಳಿಗೆ ಭೇಟಿ ನೀಡುವವರೆಲ್ಲರೂ ಈಗ ಟಾಪ್‌ಲೆಸ್ ಆಗಿ ಹೋಗಲು ಅರ್ಹರಾಗಿದ್ದಾರೆ ಎಂದು ಹೇಳಿದರು. ದೂರು ಮತ್ತು ಪ್ರಕರಣದಲ್ಲಿ ಒಂಬುಡ್ಸ್‌ಮನ್‌ನ ಒಳಗೊಳ್ಳುವಿಕೆಗೆ ಪ್ರತಿಕ್ರಿಯೆಯಾಗಿ, ನಗರದ ಸಾರ್ವಜನಿಕ ಪೂಲ್‌ಗಳನ್ನು ನಡೆಸುತ್ತಿರುವ ಬರ್ಲಿನರ್ ಬೇಡರ್‌ಬೆಟ್ರೀಬ್, ಅದರ ಪ್ರಕಾರವಾಗಿ ಬಟ್ಟೆ ನಿಯಮಗಳನ್ನು ಬದಲಾಯಿಸಿತು.