ಲೆಬೆನಾನ್(ಆ. 05)  ಲೆಬೆನಾನ್ ರಾಜಧಾನಿ ಬೈರುಯತ್ ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಹಿಂದೆಂದೂ ಕಂಡು ಕೇಳರಿಯದ ಸ್ಫೋಟ ಇದು.

ಹತ್ತು ಜನರು ಮೃತಪಟ್ಟಿದ್ದು ನೂರಾರು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.  ಸಾವು ನೋವಿನ ಪಕ್ಕಾ ಲೆಕ್ಕ ಇನ್ನು ಸಿಕ್ಕಿಲ್ಲ.

ಹದಿನೈದು ನಿಮಿಷದ ಅವಧಿಯಲ್ಲಿ ಎರಡು ಸ್ಫೋಟ ಸಂಭವಿಸಿದೆ. ಮೊದಲೆನೆಯದು ಚಿಕ್ಕದ್ದಾಗಿದ್ದರೆ ಎರಡನೇಯದ್ದು ಇಡೀ ನಗರವನ್ನೇ ಧ್ವಂಸ ಮಾಡಿದೆ.

ಚೀನಾ ಪ್ರವಾಹ ತಡೆಯಲು ಡ್ಯಾಂ ಸ್ಫೋಟ

ಲೆಬೆನಾನ್ ಮಾಜಿ ಪ್ರಧಾನಿ ಸಾದ್ ಹರಿರಿ ಮನೆ ಸಮೀಪವೇ ಸ್ಫೋಟ ಸಂಭವಿಸಿದೆ.  ಭಾರತೀಯರು ಯಾರೆಲ್ಲ ಅಲ್ಲಿ ವಾಸವಿದ್ದರೋ ರಾಯಭಾರ ಕಚೇರಿಗೆ ಮಾಹಿತಿ ನೀಡಬೇಕು ಎಂದು  ತಿಳಿಸಲಾಗಿದೆ.  ಸಹಾಯವಾಣಿಯ ನೆರವು ಪಡೆದುಕೊಳ್ಳಲು ಕೇಳಿಕೊಳ್ಳಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟದ ವಿಡಿಯೋ ವೈರಲ್ ಆಗುತ್ತಿವೆ. ಬಂದರು ಸಮೀಪವೇ ನಡೆದ ಸ್ಫೋಟದ ತೀವ್ರತೆಯನ್ನು ನೀವು ನೋಡಿ