ಟಾಟಾ ಏರ್‌ಬಸ್‌ ಖರೀದಿಗೆ ಲಂಡನ್‌ನಲ್ಲಿ ನಡೆದಿತ್ತು ತೆರೆಮರೆ ಡೀಲ್‌!

ಇದೀಗ ಟಾಟಾ ಒಡೆತನದ ಏರ್‌ ಇಂಡಿಯಾ ( Air India) ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಮಾರು ತಿಂಗಳುಗಳ ಕಾಲ ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಕೂಗಳತೆ ದೂರದಲ್ಲಿ ತೆರೆಮರೆಯ ಮಾತುಕತೆಗಳು ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

Behind the scenes deal was held in London to buy Airbus After the success they eat Kerala coast lunch akb

ಲಂಡನ್‌: ಇದೀಗ ಟಾಟಾ ಒಡೆತನದ ಏರ್‌ ಇಂಡಿಯಾ ( Air India) ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಮಾರು ತಿಂಗಳುಗಳ ಕಾಲ ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಕೂಗಳತೆ ದೂರದಲ್ಲಿ ತೆರೆಮರೆಯ ಮಾತುಕತೆಗಳು ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ಏರಿಂಡಿಯಾದ ಅಧಿಕಾರಿಗಳು ಹಾಗೂ ಏರ್‌ಬಸ್‌ನ (Air Bus)ಅಧಿಕಾರಿಗಳು ಸೇರಿದಂತೆ ಹಲವರು ಈ ಮಾತುಕತೆಯಲ್ಲಿ ಭಾಗಿಯಾಗಿದ್ದು, ಏರಿಂಡಿಯಾ ಈ ಮಾತುಕತೆಯನ್ನು ಅಂತಿಮ ಘಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಮಾತುಕತೆ ಅಂತಿಮಗೊಂಡ ಬಳಿಕ ಉಭಯ ಕಂಪನಿಗಳ ಅಧಿಕಾರಿಗಳಿಗಾಗಿ ಕೇರಳ/ಗೋವಾ ಕರಾವಳಿಯ ವಿಶೇಷ (Kerala Costal Food)ಊಟವನ್ನು ಏರ್ಪಡಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

Air India ಮೆಗಾ ಡೀಲ್‌: ಏರ್‌ಬಸ್‌ನಿಂದ 250 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡ ಟಾಟಾ ಗ್ರೂಪ್‌

250 ವಿಮಾನಗಳ ಖರೀದಿಗೆ ಏರ್‌ಬಸ್‌ ಜೊತೆಗೆ ಮಾತುಕತೆ ನಡೆಯುತ್ತಿದ್ದ ಸಮಯದಲ್ಲೇ 2 ಮೈಲಿಗಳ ದೂರದಲ್ಲಿ ಕತಾರ್‌ ಏರ್‌ವೇಸ್‌ (Qatar Airways) ಸಹ ಮಾತುಕತೆ ನಡೆಸುತ್ತಿತ್ತು. ಆದರೆ ಏರಿಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿಗಳಾದ ನಿಪುನ್‌ ಅಗರ್‌ವಾಲ್‌ (Nipun Aggarwal) ಮತ್ತು ಯೋಗೇಶ್‌ ಅಗರ್‌ವಾಲ್‌ (Yogesh Aggarwal) ಸಂಧಾನ ಮಾತುಕತೆ ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾದರು. ಕಳೆದ ವರ್ಷ ಬೇಸಿಗೆಯಲ್ಲೇ ಉಭಯ ಕಂಪನಿಗಳ ಅಧಿಕಾರಿಗಳ ಮಾತುಕತೆ ಆರಂಭವಾಗಿದ್ದು, ಸತತವಾಗಿ ಹಲವು ತಿಂಗಳುಗಳ ಕಾಲ ನಡೆದಿದೆ. ಅಲ್ಲದೇ ಇದೇ ವೇಳೆ ಎಂಜಿನ್‌ಗಳ ಕುರಿತಾದ ಒಪ್ಪಂದವನ್ನು ಪೂರ್ಣಗೊಳಿಸಿಕೊಳ್ಳುವಲ್ಲೂ ಏರಿಂಡಿಯಾ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ
ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾ 250 ಏರ್‌ಬಸ್‌ ವಿಮಾನ ಹಾಗೂ 220 ಬೋಯಿಂಗ್‌ ವಿಮಾನಗಳ ಖರೀದಿ ಒಪ್ಪಂದವನ್ನು ಘೋಷಿಸಿದೆ. ಇದು ವಿಶ್ವ ವಿಮಾನಯಾನ ಇತಿಹಾಸದಲ್ಲೇ ಅತಿ ಬೃಹತ್‌ ವಿಮಾನ ಖರೀದಿ ಒಪ್ಪಂದ ಎನ್ನಿಸಿಕೊಂಡಿದೆ. ಒಟ್ಟಾರೆ ಖರೀದಿ ಮೊತ್ತ 11 ಲಕ್ಷ ಕೋಟಿ ರು. ಆಗಿದೆ. ಈ ಪೈಕಿ ಫ್ರಾನ್ಸ್‌ನ ಏರ್‌ಬಸ್‌ಗೆ 8.2 ಲಕ್ಷ ಕೋಟಿ ರು. ಹಾಗೂ ಅಮೆರಿಕದ ಬೋಯಿಂಗ್‌ಗೆ 2.7 ಲಕ್ಷ ಕೋಟಿ ರು.ಗಳನ್ನು ಏರ್‌ ಇಂಡಿಯಾ ಪಾವತಿಸಲಿದೆ. ಸರ್ಕಾರದ ಒಡೆತನದಲ್ಲಿದ್ದ ಏರ್‌ ಇಂಡಿಯಾ (Air India) ಇತ್ತೀಚೆಗೆ ಟಾಟಾತೆಕ್ಕೆಗೆ ಜಾರಿತ್ತು. ಇದರ ಬೆನ್ನಲ್ಲೇ ಏರ್‌ಬಸ್‌ನಿಂದ ಒಟ್ಟಾರೆ 470 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಇದರಿಂದಾಗಿ ಏರ್‌ ಇಂಡಿಯಾದ ಕಾರ್ಯಾಚರಣೆ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಟಾಟಾ ಗ್ರೂಪ್‌  (Tata Group)ಹೇಳಿದೆ.

ಟಾಟಾ ಡೀಲ್‌ನಿಂದ ಅಮೆರಿಕದ 10 ಲಕ್ಷ ಮಂದಿಗೆ ಉದ್ಯೋಗ..!

ಒಪ್ಪಂದಕ್ಕೆ ಸಹಿ:
ಫ್ರಾನ್ಸ್‌ ಮೂಲದ ಏರ್‌ಬಸ್‌ (Airbus)ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಏರ್‌ ಇಂಡಿಯಾದ ಮುಖ್ಯಸ್ಥ ಎನ್‌.ಚಂದ್ರಶೇಖರನ್‌ (Air India chief N. Chandrasekaran), ‘40 ವೈಡ್‌ ಬಾಡಿ ಎ350 ವಿಮಾನಗಳು ಮತ್ತು 210 ನ್ಯಾರೋ ಬಾಡಿ ಎ320 ವಿಮಾನಗಳು ಸೇರಿದಂತೆ 250 ವಿಮಾನಗಳ ಖರೀದಿಗೆ ಏರ್‌ಬಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವೈಡ್‌ ಬಾಡಿ ವಿಮಾನಗಳನ್ನು 16 ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಣಿಸುವ ಹಾದಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ನ್ಯಾರೋ ಬಾಡಿ ವಿಮಾನಗಳನ್ನು ಕಡಿಮೆ ದೂರದ ಪ್ರಯಾಣಕ್ಕೆ ಬಳಸಲಾಗುತ್ತದೆ ಎಂದರು. ಈ ಒಪ್ಪಂದದ ವೇಳೆ, ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ರಾನ್‌ (French President Emmanuel Macron) ಹಾಜರಿದ್ದರು.

Latest Videos
Follow Us:
Download App:
  • android
  • ios