ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ ಆಪರೇಷನ್‌ ಸಿಂದೂರದ ವೇಳೆ ಬಳಕೆ ಮಾಡಿದ್ದ, ಬರಾಕ್‌-8 ವಾಯುರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್‌ ಸಹ ಇರಾನ್‌ ವಿರುದ್ಧ ಬಳಸಿ ಯಶ ಕಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಟೆಲ್‌ ಅವಿವ್‌: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ ಆಪರೇಷನ್‌ ಸಿಂದೂರದ ವೇಳೆ ಬಳಕೆ ಮಾಡಿದ್ದ, ಬರಾಕ್‌-8 ವಾಯುರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್‌ ಸಹ ಇರಾನ್‌ ವಿರುದ್ಧ ಬಳಸಿ ಯಶ ಕಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಕಳೆದ ಶುಕ್ರವಾರ ಬೆಳಗ್ಗೆ ಇರಾನ್‌ ನಡೆಸಿದ ಮಾನವ ರಹಿತ ವಾಯುವಾಹನ (ಯುಎವಿ) ದಾಳಿಯನ್ನು ಬರಾಕ್‌ ವ್ಯವಸ್ಥೆ ಬಳಸಿ ಇಸ್ರೇಲ್‌ ಹೊಡೆದುರುಳಿದೆ.

ಈ ಮಾಹಿತಿಯನ್ನು ಖುದ್ದು ಇಸ್ರೇಲ್ ವಾಯುಪಡೆ ಹಂಚಿಕೊಂಡಿದ್ದು, ಇವುಗಳಿಂದ ಇರಾನ್‌ನ ಯುಎವಿ ದಾಳಿಗಳನ್ನು ತಡೆದಿದ್ದೇವೆ ಎಂದಿದೆ.

ಏನಿದು ಬರಾಕ್‌ ಸಿಸ್ಟಂ?:

ಬರಾಕ್‌-8 ಸಿಸ್ಟಂ ಎಂಬುದು ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳಾಗಿವೆ. ಇದನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಮತ್ತು ಭಾರತದ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಜಂಟಿಯಾಗಿ ಸಿದ್ಧಪಡಿಸಿವೆ. ಭಾರತದ ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್), ಕಲ್ಯಾಣಿ ರಾಫೆಲ್ ಅಡ್ವಾನ್ಸ್ಡ್ ಸಿಸ್ಟಮ್ಸ್‌, ಇಸ್ರೇಲ್‌ನ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್‌ನಲ್ಲಿ ಇವುಗಳ ಉತ್ಪಾದನೆ ಆಗುತ್ತದೆ.

ಇವು ಕಡಿಮೆ ಮತ್ತು ಮಧ್ಯಮ ಅಂತರದ ಗುರಿಗಳ ಮೇಲೆ ದಾಳಿ ಮಾಡುವ ಕ್ಷಮತೆ ಹೊಂದಿವೆ. 30-70 ಕಿ.ಮೀ. ದೂರದವರೆಗೆ 150 ಕಿ.ಮೀ. ವೇಗದಲ್ಲಿ ಹೋಗಿ, ಶತ್ರುಪಡೆಯ ಕ್ಷಿಪಣಿ, ಡ್ರೋನ್‌, ಯುದ್ಧವಿಮಾನ, ಖಂಡಾಂತರ ಕ್ಷಿಪಣಿಗಳನ್ನು ಹೊಡೆವ ಸಾಮರ್ಥ್ಯ ಹೊಂದಿವೆ.

ಆಪರೇಷನ್‌ ಸಿಂದೂರದ ವೇಳೆ ಇವುಗಳನ್ನು ಬಳಸಿ ಭಾರತವು ಪಾಕಿಸ್ತಾನದ ಫತಾಹ್‌-2 ಕ್ಷಿಪಣಿಗಳನ್ನು ಹೊಡೆದುರುಳಿಸಿತ್ತು.

  • - ಇರಾನ್‌ನ ವಾಯುದಾಳಿ ತಡೆವಲ್ಲಿ ಬರಾಕ್‌-8 ಯಶಸ್ವಿ- ಭಾರತ
  • -ಇಸ್ರೇಲ್‌ ಜಂಟಿಯಾಗಿ ರೂಪಿಸಿರುವ ವಾಯುರಕ್ಷಣಾ ವ್ಯವಸ್ಥೆ
  • - ಬೆಂಗಳೂರಿನ ಬಿಇಎಲ್‌ ಸೇರಿ ಕೆಲವು ಕಾರ್ಖಾನೆಗಳಲ್ಲಿ ಉತ್ಪಾದನೆ
  • ಬರಾಕ್‌-8 ಸಿಸ್ಟಂ ಎಂಬುದು ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳಾಗಿವೆ
  • ಭಾರತದ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಜಂಟಿಯಾಗಿ ಸಿದ್ಧಪಡಿಸಿವೆ
  • ಭಾರತದ ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್), ಕಲ್ಯಾಣಿ ರಾಫೆಲ್ ಅಡ್ವಾನ್ಸ್ಡ್ ಸಿಸ್ಟಮ್ಸ್‌, ಇಸ್ರೇಲ್‌ನ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್‌ನಲ್ಲಿ ಇವುಗಳ ಉತ್ಪಾದನೆ

ಖುದ್ದು ಇಸ್ರೇಲ್ ವಾಯುಪಡೆ ಹಂಚಿಕೊಂಡಿದ್ದು, ಇವುಗಳಿಂದ ಇರಾನ್‌ನ ಯುಎವಿ ದಾಳಿಗಳನ್ನು ತಡೆದಿದ್ದೇವೆ ಎಂದಿದೆ.