ವಿಚಿತ್ರವಾದರೂ ಇದು ಸತ್ಯ, ಫೇಸ್‌ಬುಕ್ ಇಮೋಜಿ ವಿರುದ್ಧವೆ ಫತ್ವಾ ಹ, ಹ ಇಮೋಜಿ ಬಳಸದಂತೆ ಮೌಲ್ವಿಯಿಂದ ಎಚ್ಚರಿಕೆ ಹ, ಹ ಇಮೋಜಿ ಮುಸ್ಲಿಮರಿಗೆ ಹರಾಮ್ ಎಂದ ಮೌಲ್ವಿ

ಢಾಕಾ(ಜೂ.24): ಮುಸ್ಲಿಂ ಮೌಲ್ವಿಗಳು ಹಲವು ವಿಚಾರಗಳಿಗೆ ಫತ್ವಾ ಹೊರಡಿಸಿದ್ದಾರೆ. ಧರ್ಮದ ಚೌಕಟ್ಟಿನೊಳಗೆ ಹಲವು ಫತ್ವಾಗಳು ಚಾಲ್ತಿಯಲ್ಲಿದೆ. ಆದರೆ ಈ ಬಾರಿ ಮುಸ್ಲಿಂ ಮೌಲ್ವಿ ಹೊರಡಿಸಿದ ಫತ್ವಾ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಈ ಫತ್ವಾ ವೈರಲ್ ಆಗಿದೆ. ಕಾರಣ ಈ ಮುಸ್ಲಿಂ ಮೌಲ್ವಿ ಹೊರಡಿಸಿರುವುದು ಫೇಸ್‌ಬುಕ್‌ನ ಹ, ಹ ಇಮೋಜಿ ವಿರುದ್ಧ ಫತ್ವಾ ಆಗಿದೆ.

‘ಫತ್ವಾ’ ಹೊರಡಿಸುವವರೆಗೆ ಕೋವಿಡ್‌ ಲಸಿಕೆ ಪಡೆಯಬೇಡಿ! ಮುಸ್ಲಿಮರಿಗೆ ದಾರುಲ್‌ ಉಲೂಂ ಮೌಲ್ವಿ ಕರೆ

ಈ ಫತ್ಪಾ ಹೊರಡಿಸಿರುವುದು ಬಾಂಗ್ಲಾದೇಶದಲ್ಲಿ. ಬಾಂಗ್ಲಾದೇಶದ ಮುಸ್ಲಿಂ ಧರ್ಮಗುರು ಅಹಮ್ಮದುಲ್ಲಾ ಈ ಫತ್ವಾ ಹೊರಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯರಾಗಿರುವ ಅಹಮ್ಮದುಲ್ಲಾ ಈ ಬಾರಿ ಫೇಸ್‌ಬುಕ್‌ನ ಹ,ಹ ಇಮೋಜಿ ವಿರುದ್ಧವೇ ಫತ್ವಾ ಹೊರಡಿಸಿ ವೈರಲ್ ಆಗಿದ್ದಾರೆ. 

ಫೇಸ್‌ಬುಕ್‌ನ ಹ,ಹ ಇಮೋಜಿ ಮುಸ್ಲಿಂರಿಗೆ ಹರಾಮ್. ಇದನ್ನು ಬಳಸದಂತೆ ಮೌಲ್ವಿ ಎಚ್ಚರಿಸಿದ್ದಾರೆ. ಇತರರನ್ನು ಅಪಹಾಸ್ಯ ಮಾಡುವ ಈ ಇಮೋಜಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಹೀಗಾಗಿ ಮುಸಲ್ಮಾನರು ಈ ಇಮೋಜಿ ಬಳಸದಂತೆ ಫತ್ಪಾ ಹೊರಡಿಸಿದ್ದಾರೆ. 

ಕೊರೋನಾ ಲಸಿಕೆಯಲ್ಲಿ ಹಂದಿ ಅಂಶ; ಔಷಧಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಬೋರ್ಡ್!.

ಸಾಮಾಜಿಕ ಜಾಲತಾಣಗಳಲ್ಲಿ ಅಹಮ್ಮದುಲ್ಲಾ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹೆಚ್ಚಿನ ಫಾಲೋವರ್ಸ್ ಹೊಂದಿರುವ ಅಹಮ್ಮದುಲ್ಲಾ ಅವರ ವಿಡಿಯೋವನ್ನು 20 ಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ಮೌಲ್ವಿ ಅಹಮ್ಮದುಲ್ಲಾ ಬಾಂಗ್ಲಾದೇಶದ ನ್ಯೂ ಜನರೇಶನ್ ಮೌಲ್ವಿ ಆಗಿದ್ದಾರೆ. ಇಂಟರ್ನೆಟ್‌ನಲ್ಲಿ ಸಕ್ರಿಯರಾಗಿರುವ ಅಹಮ್ಮದುಲ್ಲಾ ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ 30ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.

ಬಾಂಗ್ಲಾದೇಶ ವಾಹಿನಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೌಲ್ವಿ ಅಹಮ್ಮದುಲ್ಲಾ ಪೋಸ್ಟ್ ಮಾಡಿರುವ 3 ನಿಮಿಷಗಳ ಫತ್ವಾ ವಿಡಿಯೋ ಇದೀಗ ಬಾಂಗ್ಲಾದೇಶ ಮಾತ್ರವಲ್ಲ, ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಸಂಚಲನ ಮೂಡಿಸಿದೆ.