ಬಾಂಗ್ಲಾದೇಶದಲ್ಲಿ ಅನಾಮಿಕನ ಕೈಚಳಕ, ಒಸ್ಮಾನ್ ಹದಿ ಬೆನ್ನಲ್ಲೇ ಮತ್ತೊಬ್ಬ ನಾಯಕನಿಗೆ ಗುಂಡೇಟು, ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಒಂದೆಡೆ ಹಿಂದೂಗಳ ಟಾರ್ಗೆಟ್ ಮಾಡಲಾಗಿದ್ದರೆ, ಇತ್ತ ಬಾಂಗ್ಲಾದಲ್ಲಿ ಹಸೀನಾ ಸರ್ಕಾರ ಉರುಳಿಸುವಲ್ಲಿ ಮುಂಚೂಣಿಯಲ್ಲಿದ್ದ ನಾಯಕರ ಹತ್ಯೆಯಾಗುತ್ತಿದೆ. 

ಢಾಕ (ಡಿ.22) ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಪತನದಿಂದ ಶುರುವಾದ ಕಲಹ ಇನ್ನೂ ನಿಂತಿಲ್ಲ. ಶೇಕ್ ಹಸೀನಾ ಸರ್ಕಾರ ಪತನಗೊಂಡು ಮೊಹಮ್ಮದ್ ಯೂನಸ್ ಸರ್ಕಾರ ರಚನಗೊಂಡರೂ ಶಾಂತಿ ಇಲ್ಲದಾಗಿದೆ. ದೊಂಬಿ, ಗಲಾಟೆ, ಹಿಂಸಾರದಲ್ಲೇ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಇದೀಗ ಭಾರತ ವಿರೋಧಿ ಪ್ರತಿಭಟನೆಯೊಂದಿಗೆ ಆರಂಭಗೊಂಡ ಬಾಂಗ್ಲಾದೇಶದ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಸೀನಾ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾಯಕ ಶರೀಫ್ ಒಸ್ಮಾನ್ ಹದಿ ಹತ್ಯೆ ಬೆನ್ನಲ್ಲೇ ಇದೀಗ ಮತ್ತೊಬ್ಬ ವಿದ್ಯಾರ್ಥಿ ನಾಯಕನ ತಲೆಗೆ ಗುಂಡಿಕ್ಕಿ ದಾಳಿ ಮಾಡಲಾಗಿದೆ. ಅನಾಮಕಿ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಸ್ಟೂಡೆಂಟ್ ಲೀಡರ್ ಮೊಹಮ್ಮದ್ ಮೊತಲೆಬ್ ಸಿಕ್ದರ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮನೆ ಬಳಿ ಗುಂಡಿನ ದಾಳಿ

ವಿದ್ಯಾರ್ಥಿಗಳ ನೇತೃತ್ವದ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ)ಯ ಪ್ರಮುಖ ನಾಯಕನಾಗಿ ಮೊಹಮ್ಮದ್ ಮೊತಲೆಬ್ ಸಿಕ್ದರ್ ಗುರುತಿಸಿಕೊಂಡಿದ್ದ. ಇಂದು ಬೆಳಗ್ಗೆ 11.45ರ ಹೊತ್ತಿಗೆ ಮೊಹಮ್ಮದ್ ಮೊತಲೆಬ್ ಮನೆ ಬಳಿ ಅನಾಮಕಿ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಹತನಾಗಿದ್ದಾನೆ. ತಲೆಗೆ ಗುರಿಯಿಟ್ಟು ದಾಳಿ ನಡೆಸಲಾಗಿದೆ. ಸೊನಾದಂಗಾ ಏರಿಯಾದಲ್ಲಿರುವ ಮೊತಲೆಬ್ ಮನೆ ಬಳಿ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಮೊತಲೆಬ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಗುಂಡಿನ ದಾಳಿ ನಡೆಸಿರುವ ಕಾರಣ ಮೊಹಮ್ದದ್ ಮೊತಲೆಬ್ ಸಿಕ್ದರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿಕ್ದರ್‌ಗೆ ಚಿಕಿತ್ಸೆ ಮುಂದುವರಿದಿದೆ.

ಅನಾಮಿಕನ ಗುಂಡಿನ ದಾಳಿ

ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯಲ್ಲಿ ಕಾರ್ಮಿಕ ರ್ಯಾಲಿ ಆಯೋಜನೆ ಮಾಡಲಾಗಿತ್ತು. ಇದೇ ಮೊಹಮ್ಮದ್ ಮೊತಲೆಬ್ ಸಿಕ್ದರ್ ನೇತೃತ್ವದಲ್ಲಿ ಈ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿತ್ತು. ಶೀಘ್ರದಲ್ಲೇ ಈ ರ್ಯಾಲಿ ಆಯೋಜನೆ ಮಾಡಲು ಎಲ್ಲಾ ತಯಾರಿನ್ನು ಮೊತಲೆಬ್ ಮಾಡಿಕೊಂಡಿದ್ದ. ಈ ರ್ಯಾಲಿ ಬೆನ್ನಲ್ಲೇ ಜಿಲ್ಲೆ ಜಿಲ್ಲೆಗಳಲ್ಲಿ ಕಾರ್ಮಿಕರ ರ್ಯಾಲಿ ಆಯೋಜನೆಗೆ ಎಲ್ಲಾ ಸಿದ್ದೆತೆ ಮಾಡಿಕೊಂಡಿದ್ದ ಇದರ ನಡುವೆ ಅನಾಮಿಕ ವ್ಯಕಿ ನಡೆಸಿದ ಗುಂಡಿನ ದಾಳಿಯಲ್ಲಿ ಮೊತಲೆಬ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಲ್ಲಿ ಹಲವು ಭಯೋತ್ಪಾದಕರು ಹತರಾಗಿದ್ದರು. ಆದರೆ ಇದೀಗ ಬಾಂಗ್ಲಾದೇಶದಲ್ಲಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕ ಯಾರು ಅನ್ನೋದು ಪತ್ತೆಯಾಗಿಲ್ಲ.

ಸೋನಾದಂಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅನಿಮೇಶ್ ಮಂಡಲ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಗುಂಡಿನ ದಾಳಿ ಬೆನ್ನಲ್ಲೇ ನಾಯಕ ಸಿಕ್ದರ್‌ನನ್ನು ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಸಿಟಿ ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮಂಡಲ್ ಹೇಳಿದ್ದಾರೆ.

ಒಸ್ಮಾನ್ ಹದಿ ಹತ್ಯೆಗೆ ಭಾರಿ ಹಿಂಸಾಚಾರ

ಬಾಂಗ್ಲಾದೇಶದ ನಾಯಕ ಶರೀಫ್ ಒಸ್ಮಾನ್ ಹದಿ ಹತ್ಯೆಗೆ ಪ್ರತೀಕಾರವಾಗಿ ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ನಡೆಯುತ್ತಿದೆ. ಸಿಕ್ಕ ಸಿಕ್ಕ ಕಡೆ ಬೆಂಕಿ ಹಚ್ಚಿ ಉದ್ರಿಕ್ತರ ಗುಂಪು ಪ್ರತಿಭಟನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಅಮಾಯಕ ಹಿಂದೂ ದೀಪ್ ಚಂದ್ರ ದಾಸ್ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿ ಹತ್ಯೆ ಮಾಡಿತ್ತು. ಮತ್ತೊಬ್ಬ ಹಿಂದೂ ರಿಕ್ಷಾ ಚಾಲಕನ ಮೇಲೂ ದಾಳಿಯಾಗಿದೆ. ಹಿಂದೂಗಳ ಟಾರ್ಗೆಟ್ ಮಾಡಿ ಭಾರಿ ದಾಳಿಗಳು ನಡೆಯುತ್ತಿದೆ.