ಹಸೀನಾ ಮಾತ್ರವಲ್ಲ ಕಿಡಿಗೇಡಿಗಳು ಬಾಂಗ್ಲಾ ಯಶಸ್ವಿ ನಾಯಕ ಮುಶ್ರಫೆ ಮನೆಯನ್ನೂ ಬಿಡಲಿಲ್ಲ!
ಬಾಂಗ್ಲಾದೇಶ ಪ್ರತಿಭಟನಕಾರರ ಕಿಚ್ಚಿಗೆ ಮಾಜಿ ಪ್ರಧಾನಿ ಶೇಕ್ ಹಸಿನಾ ಮಾತ್ರವಲ್ಲ ಹಲವರ ಮನೆಗಳು ಪುಡಿ ಪುಡಿಯಾಗಿದೆ. ಈ ಪೈಕಿ ಬಾಂಗ್ಲಾದೇಶದ ಯಶಸ್ವಿ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಶ್ರಫೆ ಮೊರ್ತಜಾ ಮನೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ.
ಢಾಕ(ಆ.06) ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಮೀಸಲಾತಿ ಹೋರಾಟದಿಂದ ಆರಂಭಗೊಂಡ ಪ್ರತಿಭಟನ ಹಿಂಸಾತ್ಮಕ ರೂಪ ಪಡೆದುಕೊಂಡು ಸರ್ಕಾರವನ್ನೇ ಉರುಳಿಸಿದೆ. ಶೇಕ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಹಲವರ ಮನೆಗಳು ಭಸ್ಮಗೊಂಡಿದೆ, ಪುಡಿ ಪುಡಿಯಾಗಿದೆ. ಹಿಂದೂ ಮನೆಗಳು, ದೇವಸ್ಥಾನಗಳು ಧ್ವಂಸಗೊಂಡಿದೆ. ಪ್ರತಿಭಟನಾಕಾರರು ಶೇಕ್ ಹಸೀನಾ ಮನೆಗೆ ನುಗ್ಗಿ ದಾಂಧಲೆ ಮಾಡಿದ ವಿಡಿಯೋಗಳು ಬಹಿರಂಗವಾಗಿದೆ. ಆದರೆ ಇದೇ ಪ್ರತಿಭಟನಕಾರರು ಬಾಂಗ್ಲಾದೇಶದ ಯಶಸ್ವಿ ಕ್ರಿಕೆಟ್ ನಾಯಕ ಎಂದೇ ಗುರುತಿಸಿಕೊಂಡಿರುವ ಮಶ್ರಫೆ ಮೊರ್ತಜಾ ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ.
ಬಾಂಗ್ಲಾದೇಶ ಪ್ರತಿಭಟನಕಾರರು ಢಾಕಾದಲ್ಲಿರುವ ಮಾಜಿ ನಾಯಕ ಮುಶ್ರಫೆ ಮೊರ್ತಜಾ ಮನೆಗೆ ಬೆಂಕಿ ಹಚ್ತಿದ್ದಾರೆ. ಭೀಕರ ದಾಳಿ ನಡೆಸಿ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಸಿಕ್ಕ ಸಿಕ್ಕ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಈ ಪೈಕಿ ಕೆಲ ಮನೆಗಳನ್ನು ಟಾರ್ಗೆಟ್ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಪೈಕಿ ಮುಶ್ರಫೆ ಮೊರ್ತಜಾ ಮನೆ ಕೂಡ ಒಂದಾಗಿದೆ.
ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!
ಮುಶ್ರಫೆ ಮೊರ್ತಜಾ ಮೂರು ಮಾದರಿಗಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ ನಾಯಕ. ಅತ್ಯುತ್ತಮ ವೇಗಿಯಾಗಿ ಗುರುತಿಸಿಕೊಂಡ ಮುಶ್ರಫೆ ಮೊರ್ತಜಾ ಬಾಂಗ್ಲಾದೇಶದ ಹಲವು ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಮುಶ್ರಫಾ ನಾಯಕತ್ವದಲ್ಲಿ ಮಹತ್ವದ ಟ್ರೋಫಿ ಕೂಡ ಗೆದ್ದುಕೊಂಡಿದೆ. ಆದರೆ ಮುಶ್ರಫೆ ಮನೆ ಟಾರ್ಗೆಟ್ ಮಾಡಲು ಮುಖ್ಯ ಕಾರಣ, ಕ್ರಿಕೆಟ್‌ನಿಂದ ನಿವೃತ್ತಿ ಬಳಿಕ ಮುಶ್ರಫೆ ಶೇಕ್ ಹಸೀನಾ ಅರ ಅವಾಮಿ ಲೀಗ್ ಪಕ್ಷ ಸೇರಿಕೊಂಡಿದ್ದಾರೆ. 2018ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 2022ರಿಂದ ಅವಾಮಿ ಲೀಗ್ ಪಕ್ಷದಲ್ಲಿ ಯುವಜನ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿದ್ದಾರೆ.
ಅವಾಮಿ ಲೀಗ್ ಪಕ್ಷದ ನಾಯಕನಾಗಿರುವ ಕಾರಣಕ್ಕೆ ಪ್ರತಿಭಟನಾಕಾರರು ಮಶ್ರಫೆ ಮೊರ್ತಜಾ ಮನೆಗೆ ಬೆಂಕಿ ಹಚ್ಚಿದ್ದಾರೆ. ಅವಾಮಿ ಲೀಗ್‌ನ ಬಹುತೇಕ ನಾಯಕರು ಢಾಕಾದಿಂದ ಪರಾರಿಯಾಗಿದ್ದಾರೆ. ಮಶ್ರಫೆ ಮೊರ್ತಜಾ ತಮ್ಮ ಕುಟುಂಬ ಜೊತೆ ಢಾಕಾದಿಂದ ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವು ಕ್ರಿಕೆಟಿಗರ ಮನೆಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಬಾಂಗ್ಲಾದಲ್ಲಿ ಉದ್ರಿಕ್ತರಿಂದ ದಾಂಧಲೆ: 4 ಹಿಂದೂ ದೇಗುಲಗಳ ಮೇಲೆ ದಾಳಿ
ಢಾಕ ಸೇರಿದಂತೆ ಹಲೆವೆಡೆ ಬಾರಿ ಪ್ರತಿಭಟನೆಗಳು ನಡೆಯುತ್ತಿದೆ. ಪ್ರತಿಭಟನೆ ಹತ್ತಿಕ್ಕಿ, ಪರಿಸ್ಥಿತಿ ನಿಯಂತ್ರಣಕ್ಕೆ ಬಾಂಗ್ಲಾದೇಶ ಸೇನೆ ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಹಂಗಾಮಿ ಸರ್ಕಾರ ರಚನೆ ಕಸರತ್ತು ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ.